ನವದೆಹಲಿ: ಗಣರಾಜ್ಯೋತ್ಸವ (Republic Day 2026) ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ಕೊಡಮಾಡುವ ಶೌರ್ಯ ಮತ್ತು ಸೇವಾ ಪದಕಗಳಿಗೆ 982 ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ, ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವೆಗಳ ಸಿಬ್ಬಂದಿಯನ್ನ ಆಯ್ಕೆ ಮಾಡಲಾಗಿದೆ. 982 ಪದಕಗಳಲ್ಲಿ 125 ಶೌರ್ಯ ಪದಕಗಳು (Gallantry Medal) ಸೇರಿವೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಮುಖ್ಯವಾಗಿ ಈ ಬಾರಿ ಸೌರ್ಯ ಮತ್ತು ಸೇವಾ ಪದಕಗಳಿಗೆ (Service Medals) ಆಯ್ಕೆಯಾದವರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದ ಸಿಬ್ಬಂದಿಗಳಿದ್ದಾರೆ. ಜಮ್ಮು ಕಾಶ್ಮೀರದ ನಕ್ಸಲ್ ಪೀಡಿತ ಹಿಂಸಾಚಾರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ 35, ಶಸ್ತ್ರಾಸ್ತ್ರ ಕಾರ್ಯಾಚರಣೆಯಲ್ಲಿ ನಿಯೋಜಿಸಲಾದ 45 ಹಾಗೂ ಈಶಾನ್ಯ ಪ್ರದೇಶದಲ್ಲಿ ನಿಯೋಜಿಸಲಾದ ಐವರು ಸಿಬ್ಬಂದಿ ಶೌರ್ಯ ಪದಕಕ್ಕೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ನಾಲ್ವರಿ ಅಗ್ನಿಶಾಮಕ ಸಿಬ್ಬಂದಿ ಕೂಡ ಶೌರ್ಯ ಪದಕಕ್ಕೆ ಭಾಜನರಾಗಿದ್ದಾರೆ. ಇದನ್ನೂ ಓದಿ: Republic Day 2026 | ದೆಹಲಿ ಪರೇಡ್‌ಗೆ ಕರ್ನಾಟಕದ 12 ವಿದ್ಯಾರ್ಥಿಗಳು ಆಯ್ಕೆ
ಅಧಿಕೃತ ಹೇಳಿಕೆ ಪ್ರಕಾರ, ಈ ಬಾರಿ ಶೌರ್ಯ ಮತ್ತು ಸೇವಾ ಪದಕಗಳಿಗೆ ಆಯ್ಕೆಯಾದವರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅತಿಹೆಚ್ಚು (33) ಶೌರ್ಯ ಪದಕಗಳನ್ನ ಪಡೆದುಕೊಂಡಿದ್ದಾರೆ. 2ನೇ ಸ್ಥಾನದಲ್ಲಿ ಮಹಾರಾಷ್ಟ್ರ ಪೊಲೀಸರು (31) ಇದ್ದಾರೆ. ಉತ್ತರ ಪ್ರದೇಶ ಪೊಲೀಸ್ (18), ದೆಹಲಿ ಪೊಲೀಸ್ (14) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದರ ಹೊರತಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) 12 ಪದಕ ಶೌರ್ಯ ಪ್ರಶಸ್ತಿಗಳನ್ನ ಪಡೆದ ಏಕೈಕ ಪಡೆ CRPF ಆಗಿದೆ.
ಈ ಬಾರಿ ಘೋಷಣೆ ಮಾಡಲಾದ ಪಟ್ಟಿಯಲ್ಲಿ ಒಟ್ಟು 101 ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ (PSM) ಹಾಗೂ 756 ವಿಶಿಷ್ಟ ಸೇವಾ ಪದಕ (MSM) ಸಹ ಸೇರಿವೆ. ಇದನ್ನೂ ಓದಿ: 77ನೇ ಗಣರಾಜ್ಯೋತ್ಸವ ಸಂಭ್ರಮ – ಈ ಬಾರಿಯ ವಿಶೇಷತೆಗಳೇನು?




