ನವದೆಹಲಿ : ಗಣರಾಜೋತ್ಸವ ಪರೇಡ್ ನಲ್ಲಿ ಪ್ರದರ್ಶನಗೊಳ್ಳಲಿರುವ ಟ್ಯಾಬ್ಲೊ ವಿಚಾರವಾಗಿ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗೇ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜೋತ್ಸವ ಪರೇಡ್‌ನಲ್ಲಿ ಭಾಗಿಯಾಗಲು ರಾಜ್ಯಗಳು ತಮ್ಮ ಟ್ಯಾಬ್ಲೊ ವಿಷಯಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿವೆ. ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ 125ನೇ ಜನ್ಮದಿನದ ಹಿನ್ನಲೆ ಪಶ್ಚಿಮ ಬಂಗಾಳ ಅವರ ಐಎನ್‌ಎ ವಿಷಯಾಧಾರಿತ ಟ್ಯಾಬ್ಲೊವನ್ನು, ಕೇರಳ ಸರ್ಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯವನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು.
Advertisement
Advertisement
ಮೊದಲ ಹಂತದಲ್ಲಿ ಆಯ್ಕೆಯಾಗಿದ್ದ ಈ ವಿಷಯಗಳಿಗೆ ಏಕಾಏಕಿ ತಡೆ ನೀಡಲಾಗಿದೆ. ಈ ಟ್ಯಾಬ್ಲೊಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ನಿರಾಕರಿಸಿದೆ. ತನ್ನ ನಿರ್ಧಾರದ ಹಿಂದಿನ ಕಾರಣವೇನು ಎನ್ನುವುದನ್ನು ಈವರೆಗೂ ಸ್ಪಷ್ಟಪಡಿಸಿಲ್ಲ. ಇದರಿಂದ ಕೇರಳ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಮಮತಾ, ಕೇಂದ್ರ ಸರ್ಕಾರದ ಈ ಮನೋಭಾವದಿಂದ ಬಂಗಾಳಿ ಜನರಿಗೆ ಅತೀವ ನೋವಾಗಿದೆ, ನೇತಾಜಿ ಅವರ ಟ್ಯಾಬ್ಲೋ ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ನೇತಾಜಿ ಅವರ ಹೋರಾಟವನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?: ಬಿಜೆಪಿ
Advertisement
ದಕ್ಷಿಣದ ರಾಜ್ಯಗಳಿಗೂ ಅನ್ಯಾಯ: ಈ ಬಾರಿ ಕೇಂದ್ರ ಸರ್ಕಾರ 12 ರಾಜ್ಯಗಳಿಗೆ ಮಾತ್ರ ಟ್ಯಾಬ್ಲೊ ಪ್ರದರ್ಶನಕ್ಕೆ ಅವಕಾಶ ನೀಡಿದೆ. ದಕ್ಷಿಣ ಭಾರತದಿಂದ ಕರ್ನಾಟಕ ಮಾತ್ರ ಟ್ಯಾಬ್ಲೊ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಗೋವಾ, ಆಂಧ್ರಪ್ರದೇಶ ಕೂಡಾ ತಮ್ಮ ವಿಷಯಗಳ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದವು, ಆದರೆ ಈ ನಾಲ್ಕು ರಾಜ್ಯಗಳ ಪ್ರಸ್ತಾಪವನ್ನು ಕೇಂದ್ರ ತಿರಸ್ಕರಿಸಿದೆ. ಮಾಹಿತಿಗಳ ಪ್ರಕಾರ ಈ ಬಾರಿ ತೆಲಂಗಾಣ ಯಾವುದೇ ಪ್ರಸ್ತಾಪ ಕಳುಹಿಸಿಲ್ಲ.
Advertisement
ತಮ್ಮ ಟ್ಯಾಬ್ಲೊ ವಿಷಯಗಳನ್ನು ನಿರಾಕರಿಸಿರುವುದಕ್ಕೆ ದಕ್ಷಿಣದಲ್ಲಿ ಕೇರಳ ಹೊರತುಪಡಿಸಿ ಮಹಾರಾಷ್ಟ್ರ, ತಮಿಳುನಾಡು, ಗೋವಾ, ಆಂಧ್ರಪ್ರದೇಶ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳನ್ನು ಟ್ಯಾಬ್ಲೊ ಪ್ರದರ್ಶನದಿಂದ ಏಕಕಾಲದಲ್ಲಿ ಕೈಬಿಟ್ಟಿರುವುದಕ್ಕೆ ಜನ ಸಾಮಾನ್ಯರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರದ ನಡೆಯಿಂದ ಈ ಬಾರಿ ಗಣರಾಜೋತ್ಸವ ಪರೇಡ್ ನಲ್ಲಿ ದಕ್ಷಿಣ ಭಾರತದ ಅನುಪಸ್ಥಿತಿ ದೊಡ್ಡ ಪ್ರಮಾಣದಲ್ಲಿ ಕಾಣಲಿದೆ ಎಂದು ಸಮಾಜಿಕ ಜಾಲತಾಣಗಳಲ್ಲಿ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಕಾರಣ ನೀಡದ ಕೇಂದ್ರ: ಇನ್ನು ರಾಜ್ಯಗಳು ನೀಡಿದ ಟ್ಯಾಬ್ಲೊಗಳ ವಿಷಯಗಳನ್ನು ಯಾಕೆ ನಿರಾಕರಿಸಿದೆ ಎಂದು ಈವರೆಗೂ ಕೇಂದ್ರ ಸರ್ಕಾರ ಎಲ್ಲೂ ಹೇಳಿಲ್ಲ. ನಿಯಮಗಳ ಪ್ರಕಾರ ರಾಜ್ಯಗಳು ಮೂರು ವಿಷಯಗಳನ್ನು ಕೇಂದ್ರದ ಆಯ್ಕೆ ಸಮಿತಿಗೆ ಕಳುಹಿಸಿಕೊಡಲಾಗಿರುತ್ತದೆ. ಅಲ್ಲದೇ ಆ ವಿಷಯದ ಮಹತ್ವವನ್ನು ವಿವರಿಸಲಾಗಿರುತ್ತದೆ. ಒಂದು ವೇಳೆ ರಾಜ್ಯದ ಮೊದಲ ಆದ್ಯತೆಯ ವಿಷಯ ಕೇಂದ್ರದ ತಕರಾರುಗಳಿದ್ದಲ್ಲಿ ಎರಡು ಅಥಾವ ಮೂರನೇ ವಿಷಯವನ್ನು ಆಯ್ಕೆ ಮಾಡುವ ಅವಕಾಶಗಳಿರುತ್ತದೆ. ಇದನ್ನೂ ಓದಿ: ಒಬಿಸಿ ನಾಯಕರಿಂದ ಬಿಜೆಪಿಗೆ ರಾಜೀನಾಮೆ – ದಲಿತರ ಮನೆಯಲ್ಲಿ ಊಟ ಮಾಡಿದ ಯೋಗಿ
ಆದರೆ ಕೇಂದ್ರ ಸರ್ಕಾರ ಮಾತ್ರ ಈ ನಿಯಮ ಪಾಲಿಸದೇ ಏಕಾಏಕಿ ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಟ್ಯಾಬ್ಲೊಗಳ ವಿಷಯಗಳನ್ನು ನಿರಾಕರಿಸಿದೆ. ರಾಜ್ಯಗಳ ವಿಷಯಗಳನ್ನು ನಿರಾಕರಿಸಿದ್ದೇಕೆ? ಇದರ ಹಿಂದಿನ ಕಾರಣ ಏನು ಈವರೆಗೂ ತಿಳಿದು ಬಂದಿಲ್ಲ ಮತ್ತು ಕೇಂದ್ರ ಸರ್ಕಾರವೂ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?
ದಕ್ಷಿಣ ಭಾರತ ಪ್ರತಿನಿಧಿಸಲಿರುವ ಕರ್ನಾಟಕ: ದಕ್ಷಿಣ ಭಾರತದಿಂದ ಕರ್ನಾಟಕ ಏಕೈಕ ಟ್ಯಾಬ್ಲೊ ಆಯ್ಕೆಯಾಗಿದ್ದು ರಾಜಪಥ್ ನಲ್ಲಿ ಇಡೀ ದಕ್ಷಿಣ ಭಾರತವನ್ನು ಕರ್ನಾಟಕ ಪ್ರತಿನಿಧಿಸಲಿದೆ. ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ವಿಷಯ ಆಧಾರಿತ ಟ್ಯಾಬ್ಲೊ ಕರ್ನಾಟಕದಿಂದ ಆಯ್ಕೆಯಾಗಿದೆ. ಸತತವಾಗಿ 13 ನೇ ಬಾರಿ ಟ್ಯಾಬ್ಲೊ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ.