ಟೊರೆಂಟೊ: ಕ್ರಿಕೆಟ್ ಜನಪ್ರಿಯತೆಯನ್ನ ಹೆಚ್ಚಿಸಲು ಇತ್ತೀಚೆಗೆ ಕ್ರಿಕೆಟ್ ಲೀಗ್‍ಗಳನ್ನು ಆಯೋಜಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಟೂರ್ನಿ ಇಂತಹ ಟೂರ್ನಿಗಳ ಮತ್ತೊಂದು ಮುಖವನ್ನು ತೋರಿಸಿದೆ.
ವಿಶ್ವ ಕ್ರಿಕೆಟ್‍ನ ಪ್ರಮುಖ ಕ್ರಿಕೆಟಿಗರು ಭಾಗವಹಿಸಿದ್ದ ಕೆನಡಾ ಗ್ಲೋಬಲ್ ಟಿ20 ಕ್ರಿಕೆಟ್ ಟೂರ್ನಿಯ ಭಾಗವಾಗಿ ಬುಧವಾರ ನಡೆಯಬೇಕಿದ್ದ ಪಂದ್ಯದಲ್ಲಿ ಯಾರು ಊಹೆ ಮಾಡದ ಘಟನೆಯೊಂದು ನಡೆದಿದೆ. ನಿಗದಿತ ವೇಳಾಪಟ್ಟಿ ಅನ್ವಯ ಮಾಂಟ್ರಿಯಲ್ ಟೈಗರ್ಸ್ ಮತ್ತು ಟೊರೆಂಟೊ ನ್ಯಾಷನಲ್ ತಂಡಗಳು ಬುಧವಾರ ಪಂದ್ಯವಾಡಬೇಕಿತ್ತು. ಆದರೆ ಆಟಗಾರರು ಪಂದ್ಯಕ್ಕೆ ಸಮಯವಾಗುತ್ತಿದಂತೆ ತಮ್ಮ ಬೇಡಿಕೆ ಮುಂದಿಟ್ಟು ಮೈದಾನಕ್ಕೆ ತೆರಳದೆ ಹೋಟೆಲ್ ನಲ್ಲೇ ಉಳಿದುಕೊಂಡಿದ್ದರು.
Advertisement
12 sixes in @TorontoNational's innings come from:
Rodrigo Thomas 5
Heinrich Klaasen 4
Manpreet Gony 2
Chirag Suri 1
Watch now: pic.twitter.com/XGSfxYX9rx
— GT20 Canada (@GT20Canada) August 8, 2019
Advertisement
ಭಾರತದ ಕಾಲಮಾನದ ಅನ್ವಯ ಬುಧವಾರದ ಪಂದ್ಯ ರಾತ್ರಿ 10 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಆಟಗಾರರು ತಮಗೆ ಟೂರ್ನಿ ಆಯೋಜಕರು ಭಾರೀ ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದಾರೆ. ತಮ್ಮ ಹಣವನ್ನು ನೀಡಿದರೆ ಮಾತ್ರ ಆಡುವುದಾಗಿ ಪಟ್ಟು ಹಿಡಿದಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆಟಗಾರರ ನಿರ್ಧಾರದ ಪರಿಣಾಮ ನಿಗದಿತ ಸಮಯವಾದರು ಪಂದ್ಯ ಆರಂಭಗೊಂಡಿರಲಿಲ್ಲ.
Advertisement
ಇತ್ತ ಪಂದ್ಯವನ್ನು ಪ್ರಸಾರ ಮಾಡಬೇಕಿದ್ದ ವಾಹಿನಿಗಳು ಕಾರಣಾಂತರಗಳಿಂದ ಪಂದ್ಯ ತಡವಾಗುತ್ತಿದೆ ಎಂಬ ಸ್ಕ್ರೋಲಿಂಗ್ ನೀಡಿ ಹಳೆ ಪಂದ್ಯವನ್ನೇ ಮರು ಪ್ರಸಾರ ಮಾಡಿದ್ದವು. ಇತ್ತ ಟೂರ್ನಿಯ ಆಯೋಜಕರು ಆಟಗಾರರ ಮನವೊಲಿಕೆಗೆ ಮುಂದಾಗಿದ್ದರು. ಸರಿಸುಮಾರು 2 ಗಂಟೆಗಳು ತಡವಾಗಿ ಪಂದ್ಯ ಆರಂಭವಾಗಿತ್ತು. ಯುವರಾಜ್ ಸಿಂಗ್ ನಾಯಕತ್ವದ ಟೊರೆಂಟೊ ನ್ಯಾಷನಲ್ಸ್ ತಂಡದಲ್ಲಿ ಬ್ರೆಂಡನ್ ಮೆಕಲಮ್, ಪೋಲಾರ್ಡ್ ರಂತಹ ಖ್ಯಾತ ಆಟಗಾರರು ಇದ್ದು, ಮಾಂಟ್ರಿಯಲ್ ಟೈಗರ್ಸ್ ಪರ ಸುನಿಲ್ ನರೇನ್, ತಿಸಾರ ಪೆರೆರಾ ಸೇರಿದಂತೆ ಹಲವು ಆಟಗಾರರು ಆಡುತ್ತಿದ್ದಾರೆ. ತಡವಾಗಿ ಆರಂಭವಾದ ಈ ಪಂದ್ಯದಲ್ಲಿ ಮೊದಲು ಯುವಿ ನೇತೃತ್ವದ ತಂಡ ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. ಅ ಬಳಿಕ ಗುರಿ ಬೆನ್ನತ್ತಿದ ಟೈಗರ್ಸ್ ತಂಡ 19.3 ಓವರ್ ಗಳಲ್ಲಿ 154 ರನ್ ಗಳಿಸಿ ಅಲೌಟ್ ಆಯ್ತು. ಪಂದ್ಯದಲ್ಲಿ 35 ರನ್ ಗೆಲುವು ಪಡೆದ ಟೊರೆಂಟೊ ನ್ಯಾಷನಲ್ಸ್ ತಂಡ ಟೂರ್ನಿಯಲ್ಲಿ ಪ್ಲೇ ಆಫ್‍ಗೆ ಆರ್ಹತೆ ಪಡೆಯಿತು.
Advertisement
What a catch to finish the match! Brilliant effort by the captain @Mozzie21 on the field.
Congratulations to @TorontoNational for qualifying to next round.#MTvsTN #GT2019 @MontrealTigers pic.twitter.com/nJ4DOeIUKl
— GT20 Canada (@GT20Canada) August 7, 2019