– ವಿಪಕ್ಷಗಳಿಂದ ಸಭೆ ಬಹಿಷ್ಕಾರ
ನವದೆಹಲಿ: ದೆಹಲಿ ಸರ್ಕಾರದ ಅನುಮತಿ ಪಡೆಯದೇ ವರದಿ ಸಲ್ಲಿಸಿರುವ ಹಿನ್ನೆಲೆ ದೆಹಲಿ ವಕ್ಫ್ ಬೋರ್ಡ್ ಸಲ್ಲಿಸಿದ ವರದಿಯನ್ನು ‘ಶೂನ್ಯ ಮತ್ತು ಅನೂರ್ಜಿತ’ ಎಂದು ಪರಿಗಣಿಸಬೇಕು ಎಂಬುದಾಗಿ ಮುಖ್ಯಮಂತ್ರಿ ಅತಿಶಿ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
Advertisement
ದೆಹಲಿ ವಕ್ಫ್ ಮಂಡಳಿಯ ನಿರ್ವಾಹಕರು ಐಎಎಸ್ ಅಶ್ವಿನಿ ಕುಮಾರ್ ಅವರು ದೆಹಲಿಯ ಸರ್ಕಾರದ ಅನುಮೋದನೆಯಿಲ್ಲದೆ ವರದಿಯನ್ನು ಸಲ್ಲಿಸಿದ್ದಾರೆ. ಹೀಗಾಗಿ ಆ ವರದಿಯನ್ನು ಅನೂರ್ಜಿತ ಎಂದು ಪರಿಗಣಿಸಬಹುದು. ಅದರ ಬಗ್ಗೆ ಯಾವುದೇ ಪ್ರಸ್ತುತಿಯನ್ನು ಪರಿಗಣಿಸಬಾರದು ಎಂದು ಪತ್ರದಲ್ಲಿ ಅತಿಶಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ದೀಪಾವಳಿಗೂ ಮುನ್ನವೇ ಗ್ಯಾಸ್ ಚೇಂಬರಾಗುವ ಭೀತಿಯಲ್ಲಿ ದೆಹಲಿ
Advertisement
Advertisement
ಈ ನಡುವೆ ದೆಹಲಿ ವಕ್ಫ್ ಮಂಡಳಿಯ ವರದಿಯನ್ನು ವಿರೋಧಿಸಿ ಹಲವು ವಿರೋಧ ಪಕ್ಷದ ನಾಯಕರು ಇಂದು ಜೆಪಿಸಿ ಸಭೆಯಿಂದ ಹೊರನಡೆದರು. ಎಎಪಿ ಸದಸ್ಯ ಸಂಜಯ್ ಸಿಂಗ್, ಡಿಎಂಕೆಯ ಮೊಹಮ್ಮದ್ ಅಬ್ದುಲ್ಲಾ, ಕಾಂಗ್ರೆಸ್‌ನ ನಾಸೀರ್ ಹುಸೇನ್ ಮತ್ತು ಮೊಹಮ್ಮದ್ ಜಾವೇದ್ ಸೇರಿದಂತೆ ಇತರರು ಸಭೆಯಿಂದ ಹೊರನಡೆದರು. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದ ಮೂವರು ಉಗ್ರರನ್ನು ಬೇಟೆಯಾಡಿದ ಸೇನೆ
Advertisement
ಎಂಸಿಡಿ ಕಮಿಷನರ್ ಮತ್ತು ದೆಹಲಿ ವಕ್ಫ್ ಬೋರ್ಡ್ ನಿರ್ವಾಹಕರು ಮುಖ್ಯಮಂತ್ರಿಯವರ ಒಪ್ಪಿಗೆಯನ್ನು ತೆಗೆದುಕೊಳ್ಳದೆ ಪ್ರಾಥಮಿಕ ವರದಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ ಎಂದು ಅವರು ಆರೋಪಿಸಿದರು. ಇದನ್ನೂ ಓದಿ: MUDA SCAM| ಇಡಿ ದಾಳಿ ಬೆನ್ನಲ್ಲೇ ವಾಕಿಂಗ್ ಮಾಡುತ್ತಿದ್ದ ಮುಡಾ ಮಾಜಿ ಆಯುಕ್ತ ಪರಾರಿ
ಆ.8ರಂದು ಕೇಂದ್ರ ಸರ್ಕಾರವು ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಲೋಕಸಭೆಯಲ್ಲಿ ಮಂಡಿಸಿತು, ಕಾನೂನು ವಕ್ಫ್ ಮಂಡಳಿಯ ಕೆಲಸವನ್ನು ಸುಗಮಗೊಳಿಸಲು ಮತ್ತು ವಕ್ಫ್ ಆಸ್ತಿಗಳ ಸಮರ್ಥ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿದೆ ಎಂದು ಹೇಳಿತ್ತು. ಇದನ್ನೂ ಓದಿ: ಸಂಸದ ಪಪ್ಪು ಯಾದವ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ
ಮಸೂದೆಯು ಸಮುದಾಯದ ವಿರುದ್ಧ ಉದ್ದೇಶಿತ ಕ್ರಮವಾಗಿದೆ ಮತ್ತು ಅದರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳು ಕಳವಳ ವ್ಯಕ್ತಪಡಿಸಿದ ನಂತರ ಅದನ್ನು ತಕ್ಷಣವೇ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಯಿತು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಲ್ಯಾಂಡ್ ಜಿಹಾದ್, ಜಮೀರ್ ಒಬ್ಬ ಆಧುನಿಕ ಟಿಪ್ಪು ಸುಲ್ತಾನ್: ಆರ್.ಅಶೋಕ್