ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಡಿಕೆಶಿ ಬೇಡ: ಸಿಎಂಗೆ ಮುನಿರತ್ನ ಪತ್ರ

Public TV
1 Min Read
Munirathna

ಬೆಂಗಳೂರು: ಆರ್‌ಆರ್‌ ನಗರದ ಬಿಜೆಪಿ ಶಾಸಕ ಮುನಿರತ್ನ (Munirathna) ಅವರು ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಅವರನ್ನು ಬದಲಿಸುವಂತೆ ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ಪತ್ರ ಬರೆದಿದ್ದಾರೆ.

ಡಿಕೆಶಿ ಹೆಸರು ಉಲ್ಲೇಖಿಸದೇ ಪತ್ರ ಬರೆದಿರುವ ಮುನಿರತ್ನ, ಬೆಂಗಳೂರು ಕ್ಷೇತ್ರಗಳ ಅನುದಾನ ಕಬಳಿಸಲು ಆಂಧ್ರದ ಗುತ್ತಿಗೆದಾರರ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಅಂತ ಆರೋಪಿಸಿದ್ದಾರೆ.

38% ಕಮಿಷನ್ ಪಡೆದು ಕಾಮಗಾರಿಗಳನ್ನು ಕೊಡುವ ಬಗ್ಗೆ ಖಾಸಗಿ ಹೊಟೇಲುಗಳಲ್ಲಿ ಆಂಧ್ರ ಸಿಎಂ ಸಹಚರರಾಗಿರುವ ಗುತ್ತಿಗೆದಾರರ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ನಾಲ್ಕು ಗಿನ್ನಿಸ್ ದಾಖಲೆಗೆ ತಯಾರಿ

dk shivakumar

ಪತ್ರದಲ್ಲಿ ಏನಿದೆ?
ಐಟಿ-ಬಿಟಿ ಕಂಪನಿಗಳು ಬೆಂಗಳೂರು (Bengaluru) ತೊರೆದು ಹೋಗುವುದಕ್ಕೂ ಬೆಂಗಳೂರು ಉಸ್ತುವಾರಿ ಸಚಿವರೇ ಕಾರಣ. ಹೈದರಾಬಾದ್ ನಮಗಿಂತ ವೇಗವಾಗಿ ಮುಂದುವರೆಯುತ್ತಿದೆ. ಇಲ್ಲಿನ ಗುತ್ತಿಗೆದಾರರಿಂದ ಕಾಮಗಾರಿ ಬಿಲ್‌ಗಳಲ್ಲಿ 10% ಕಮಿಷನ್ ಕಟಾವು ಮಾಡಲಾಗ್ತಿದೆ.

ನಕ್ಷೆ ಮಂಜೂರಾತಿಗೆ ಚದರಡಿಗೆ 150 ರೂ. ಲಂಚ ಪಡೆಯುತ್ತಿದ್ದಾರೆ. ಹಾಲಿ ಉಸ್ತುವಾರಿ ಸಚಿವರಿಂದ ಸರ್ಕಾರಕ್ಕೂ, ತಮಗೂ ಕಪ್ಪು ಚುಕ್ಕೆ ಬರುತ್ತಿದೆ. ಹಾಲಿ ಉಸ್ತುವಾರಿ ಸಚಿವರನ್ನು ಬದಲಿಸಿ, ಕೆಜೆ ಜಾರ್ಜ್, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಎಂ ಕೃಷ್ಣಪ್ಪ ಪೈಕಿ ಯಾರಿಗಾದರೂ ಉಸ್ತುವಾರಿ ಮಾಡಿ ಎಂದು ಸಿಎಂಗೆ ಶಾಸಕ ಮುನಿರತ್ನ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Share This Article