ಬೆಳಗಾವಿ: ಹಿಂದೂ ಕಾರ್ಯಕರ್ತರ ಹತ್ಯೆ ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಹಿಂದೂಧರ್ಮವನ್ನು ಪುನರ್ ಸಂಘಟಿಸುವ ಕೆಲಸ ಆಗಬೇಕಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ನಗರದ ಸಮಾದೇವಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಕರ್ ಗಣೇಶೋತ್ಸವ ಅಂತಾ ಇಡೀ ರಾಜ್ಯ ಆಚರಣೆ ಮಾಡುತ್ತಿದೆ. ಹಿಂದೂಧರ್ಮವನ್ನು ಪುನರ್ ಸಂಘಟಿಸುವ ಕೆಲಸ ಆಗಬೇಕಿದೆ. ಇತ್ತೀಚಿನ ದಿನಗಳಲ್ಲಿ ನೋಡಿದಾಗ ಹಿಂದೂಧರ್ಮದ ಕಾರ್ಯಕರ್ತರನ್ನು ದಾರಿಯಲ್ಲಿ ಹೇಗೆ ಬೇಕಾದರೂ ಕೊಲ್ಲಬಹುದು ಅಂದುಕೊಂಡಿದ್ದಾರೆ. ಹೀಗಾಗಿ ಹಿಂದೂಧರ್ಮವನ್ನು ಪುನರ್ ಸಂಘಟಿಸುವ ಅಗತ್ಯತೆ ಇದೆ. ನಮ್ಮಲ್ಲಿರುವ ನ್ಯೂನತೆಯನ್ನು ಸರಿಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ದೆಹಲಿಗೆ ಹೊರಟ ಬಿಎಸ್‌ವೈ – ಇಂದು ಸಂಜೆ ಮೋದಿ ಭೇಟಿ
Advertisement
Advertisement
ಹಿಂದೂಧರ್ಮವನ್ನು ಪುನರ್ ಸಂಘಟಿಸಲು ಸಾವರ್ಕರ್ ಮತ್ತೆ ಜೀವಂತಗೊಂಡಿದ್ದಾರೆ. ಸಾವರ್ಕರ್, ತಿಲಕ್‌ರು ಇಲ್ಲದೇ ಏನಿಲ್ಲ. ಎಲ್ಲರೂ ಸೇರಿ ವಿಶಿಷ್ಠವಾಗಿ ಗಣೇಶೋತ್ಸವ ಆಚರಣೆ ಮಾಡೋಣ. ಸಾವರ್ಕರ್ ಯಾರಿಗೋ ಒಬ್ಬರಿಗೆ ಸೇರಿದವರಲ್ಲ. ದೇಶಕ್ಕೆ ಸೇರಿರುವ ಸಾರ್ವಕರ್ ಅವರನ್ನು ಎಲ್ಲರೂ ಪ್ರತಿಷ್ಠಾಪನೆ ಮಾಡಬೇಕು ಎಂದು ಕರೆ ನೀಡಿದರು.
Advertisement
Advertisement
ಸತೀಶ ಜಾರಕಿಹೊಳಿ ಅವರು ದೇವರ ಪೂಜೆಯನ್ನು ಧಿಕ್ಕರಿಸುತ್ತಾರೆ. ಆದರೆ ದೇಹವಿಲ್ಲದ ಸಾರ್ವಕರ್ ಅವರು ಸತೀಶ ಜಾರಕಿಹೊಳಿ ಅವರನ್ನು ಗಣೇಶೋತ್ಸವ ಪೆಂಡಾಲ್ ವರೆಗೂ ಕರೆದುಕೊಂಡು ಬಂದಿದ್ದಾರೆ. ಸಾರ್ವಕರ್ ಬದುಕಿದ್ದಾಗ ಪ್ರೇರಣೆ ಕೊಟ್ಟಿದ್ದರಲ್ಲದೇ ಸತ್ತ ಮೇಲೂ ಅವರ ಆತ್ಮ ಪ್ರೇರಣೆ ಕೊಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗ SDPI ಕಚೇರಿ ಮೇಲೆ ಪೊಲೀಸರ ದಾಳಿ – ಮಹತ್ವದ ದಾಖಲೆ ವಶಕ್ಕೆ