ಚಿತ್ರದುರ್ಗ: ನಟ ದರ್ಶನ್ (Darshan) ಮತ್ತು ಗ್ಯಾಂಗ್‌ನಿಂದ ಕೊಲೆಯಾದ ರೇಣುಕಾಸ್ವಾಮಿ (Renukaswamy) ಪತ್ನಿ ಸಹನಾ ಬುಧವಾರ (ಅ.16) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಹನಾಗೆ (Sahana) ಹೆರಿಗೆಯಾಗಿದೆ. ರೇಣುಕಾಸ್ವಾಮಿ ಹತ್ಯೆ ಘಟನೆ ವೇಳೆ 5 ತಿಂಗಳ ಗರ್ಭಿಣಿಯಾಗಿದ್ದ ಸಹನಾ, ಗಂಡನ ಸಾವಿನಿಂದ ಭಾರಿ ಆತಂಕಕ್ಕೀಡಾಗಿದ್ದರು. ರೇಣುಕಾಸ್ವಾಮಿ ಸಾವಿನ ನಂತರ ಆತನ ರೂಪದಲ್ಲಿ ಮನೆಗೆ ಗಂಡು ಮಗು ಮರಳಿ ಬರಬಹುದೆಂಬ ನಿರೀಕ್ಷೆಯಲ್ಲಿದ್ರು. ಅಂತೆಯೇ ರೇಣುಕಾಸ್ವಾಮಿ ಕುಟುಂಬಸ್ಥರ ನಂಬಿಕೆಯಂತೆ ಗಂಡು ಮಗುವಿಗೆ ಸಹನಾ ಜನ್ಮ ನೀಡಿದ್ದಾರೆ.
ಹೀಗಾಗಿ ಇದ್ದ ಓರ್ವ ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ರೇಣುಕಾಸ್ವಾಮಿ ಪೋಷಕರಿಗೆ ಮೊಮ್ಮಗನ ಆಗಮನದಿಂದ ಸ್ವಲ್ಪ ಸಮಾಧಾನ ತಂದಿದೆ. ಈ ವಿಚಾರ ರೇಣುಕಾಸ್ವಾಮಿ ಕುಟುಂಬದ ಮೂಲಗಳಿಂದ ಮಾಹಿತಿ ತಿಳಿದಿದೆ. ಇದನ್ನೂ ಓದಿ: ದರ್ಶನ್, ಪವಿತ್ರಾಗೌಡ ಜಾಮೀನು ಅರ್ಜಿ ವಜಾ; ನ್ಯಾಯಾಲಯದ ತೀರ್ಪನ್ನು ಗೌರವಿಸ್ತೇವೆ: ರೇಣುಕಾಸ್ವಾಮಿ ತಂದೆ
ಇನ್ನೂ ಈ ಕುರಿತು ಮಾಧುಮಗಳೊಂದಿಗೆ ಪ್ರತಿಕ್ರಿಯಿಸಿದ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಭಾವುಕರಾಗಿದ್ದಾರೆ. ಬೆಳಿಗ್ಗೆ 6.55ಕ್ಕೆ ಗಂಡು ಮಗುವಿಗೆ ಸಹನಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ. ನಮ್ಮ ಸೊಸೆ ಗಂಡು ಮಗುವಿಗೆ ಜನ್ಮ ನೀಡಿರೋದು ಮಗನೇ ಮರಳಿ ಬಂದಷ್ಟು ಸಂತಸವಾಗಿದೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಸಿಎಂ ರಾಜೀನಾಮೆ ಸುಳಿವು ಸಿಕ್ಕಿದ್ದು ನಾನು ಸಿಎಂ, ನೀನು ಸಿಎಂ ಅಂತ ಕೈ ನಾಯಕರು ಓಡಾಡ್ತಿದ್ದಾರೆ : ಕಾರಜೋಳ
ಆಸ್ಪತ್ರೆಯ ವೈದ್ಯರು ಉಚಿತ ಚಿಕಿತ್ಸೆ ನೀಡಿದ್ದರು. ನಾರ್ಮಲ್ ಡೆಲಿವರಿ ಮಾಡಿಸಿದ್ದಾರೆ ಎಂದು ಖಾಸಗಿ ಆಸ್ಪತ್ರೆ ವೈದ್ಯರಾದ ಡಾ. ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಅಧಿಕಾರದ ಭರವಸೆಯಿತ್ತು, 3ನೇ ಬಾರಿಗೆ ಬಿಜೆಪಿಗೆ ಅಧಿಕಾರ ಸಿಗುತ್ತಿದೆ: ರಾಮಲಿಂಗಾ ರೆಡ್ಡಿ