ಬೆಂಗಳೂರು: ನಟ ದರ್ಶನ್ (Actor Darshan) ಹೊಡೆತದಿಂದಲೇ ರೇಣುಕಾಸ್ವಾಮಿ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿಯು ಚಾರ್ಜ್‌ಶೀಟ್‌ನಿಂದ (Chargesheet) ಬಯಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukswamy Murder Case) ಹಿನ್ನೆಲೆ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಿಂದ ಒಂದೊಂದಾಗಿ ವಿಷಯಗಳು ಹೊರಬರುತ್ತಿವೆ. ಇದೀಗ ರೇಣುಕಾಸ್ವಾಮಿ ಸಾವಿಗೆ ದರ್ಶನ್ ಅವರ ಹೊಡೆತವೇ ಕಾರಣವಾಯಿತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.ಇದನ್ನೂ ಓದಿ: ಇವ್ನನ್ನು ಉಳಿಸಬೇಡಿ, ಕೊಂದು ಎಸೆದು ಬಿಡಿ – ಶೆಡ್‌ನಲ್ಲಿ ಪವಿತ್ರಾ ಹೇಳಿದ್ದೇನು?
ರೇಣುಕಾಸ್ವಾಮಿ ಸಾಯುವ ಮುನ್ನ ದರ್ಶನ್, ಆತನಿಗೆ ಮೂರು ಹೊಡೆತಗಳನ್ನು ಕೊಟ್ಟಿದ್ದರು ಎಂದು ಮಾಹಿತಿ ಹೊರ ಬಿದ್ದಿದೆ. ರೇಣುಕಾಸ್ವಾಮಿ ಹತ್ಯೆಯಾದ ದಿನ ದರ್ಶನ್ 45 ನಿಮಿಷಗಳ ಕಾಲ ಪಟ್ಟಣಗೆರೆ ಶೆಡ್‌ನಲ್ಲಿದ್ದರು. ದರ್ಶನ್ ಆ ಮೂರು ಹೊದೆತದಿಂದಲೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದಿದೆ.
ಮೊದಲ ಬಾರಿ 110 ಕೆಜಿಯ ದರ್ಶನ್ ನರಪೇತಲನಂತಿದ್ದ ರೇಣುಕಾಸ್ವಾಮಿ ಎದೆಗೆ ಶೂ ಕಾಲಿನಿಂದ ಒಂದೇ ಸಮನೆ ಒದ್ದಿದ್ದಾರೆ. ದರ್ಶನ್ ಮೊದಲ ಹೊಡೆತಕ್ಕೆ ರೇಣುಕಾಸ್ವಾಮಿಯ ಎದೆಯಲ್ಲಿನ ಮೂಳೆಗಳ ಮುರಿತವಾಗಿದೆ. ಎರಡನೇ ಬಾರಿ ದರ್ಶನ್, ರೇಣುಕಾಸ್ವಾಮಿಯನ್ನು ಸಿನಿಮೀಯ ಶೈಲಿಯಲ್ಲಿ ಎತ್ತಿ ಲಾರಿಗೆ ಬಿಸಾಕಿದ್ದಾರೆ. ಬಿಸಾಕಿದ ರಭಸಕ್ಕೆ ರೇಣುಕಾಸ್ವಾಮಿ ತಲೆಗೆ ಗಂಭೀರ ಗಾಯವಾಗಿದೆ. ತಲೆ ಬುರುಡೆಗೆ ಏಟು ಬಿದ್ದು ರಕ್ತ ಹೆಪ್ಪುಗಟ್ಟಿದೆ.ಇದನ್ನೂ ಓದಿ: ಮಂತ್ರಾಲಯ ಗುರುರಾಯರ ಮೊರೆ ಹೋದ ನಟ ದರ್ಶನ್ ಪತ್ನಿ
ಮೂರನೇ ಬಾರಿ ದರ್ಶನ್, ರೇಣುಕಾಸ್ವಾಮಿಗೆ ಅವನು ಪವಿತ್ರಾ ಗೌಡಗೆ ಕಳಿಸಿದ್ದ ಫೋಟೊವನ್ನು ತೋರಿಸಿದ್ದಾರೆ. ಇದೇ ಫೋಟೊ ಅಲ್ವೇನೊ ನೀನು ಕಳಿಸಿದ್ದು ನಿನ್ನ…..! ಎಂದು ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದಾರೆ. ಮರ್ಮಾಂಗಕ್ಕೆ ಒದೆಯುತ್ತಿದ್ದಂತೆ ರೇಣುಕಾಸ್ವಾಮಿಗೆ ಪ್ರಜ್ಞೆ ತಪ್ಪಿಬಿದ್ದಿದ್ದಾನೆ. ಈ ಮೂರು ಹೊಡೆತಗಳೇ ರೇಣುಕಾಸ್ವಾಮಿ ಸಾವಿಗೆ ಕಾರಣ ಎಂದು ಮಾಹಿತಿ ಹೊರಬಿದ್ದಿದ್ದು, ಎಫ್‌ಎಸ್‌ಎಲ್ (FSL) ರಿಪೋರ್ಟ್‌ನಲ್ಲಿ ಸಾವಿನ ರಹಸ್ಯ ಬಯಲಾಗಿದೆ.