ರೇಣುಕಾಸ್ವಾಮಿ ಸಾವಿಗೂ ಮುನ್ನ ದಯನೀಯ ಸ್ಥಿತಿಯ ಫೋಟೊ ರಿವೀಲ್‌ – ಕಣ್ಣೀರಿಡುತ್ತ ಪ್ರಾಣಭಿಕ್ಷೆಗಾಗಿ ಅಂಗಲಾಚುತ್ತಿರುವ ಸ್ವಾಮಿ

Public TV
1 Min Read
Renukaswamy

ಬೆಂಗಳೂರು: ಕೊಲೆಗೂ ಮುನ್ನ ರೇಣುಕಾಸ್ವಾಮಿ (Renukaswamy Murder Case) ದಯನೀಯ ಸ್ಥಿತಿಯಲ್ಲಿದ್ದ ಫೋಟೋ ರಿವೀಲ್‌ ಆಗಿದೆ. ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚುತ್ತಿರುವ ಫೋಟೋ ‘ಪಬ್ಲಿಕ್‌ ಟಿವಿ’ಗೆ ಲಭ್ಯವಾಗಿದೆ.

Renukaswamy 2

ಬಡಕಲು ದೇಹದ ರೇಣುಕಾಸ್ವಾಮಿ ಕಣ್ಣೀರಿಡುತ್ತ, ಗೋಗರೆಯುತ್ತಿರುವ ಸ್ಥಿತಿಯ ಫೋಟೋ ರಿವೀಲ್‌ ಆಗಿದೆ. ಮೈಮೇಲೆ ಬಟ್ಟಿಯಿಲ್ಲದೇ ಆರೋಪಿಗಳ ಮುಂದೆ, ನನ್ನನ್ನು ಬಿಟ್ಟುಬಿಡಿ ಎಂಬಂತೆ ಸಂತ್ರಸ್ತ ಅಂಗಲಾಚುತ್ತಿರುವಂತಿದೆ ಫೋಟೊ. ಇದನ್ನೂ ಓದಿ: ಡಿಲೀಟ್‌ ಮಾಡಿದ್ರೂ ಸಿಕ್ತು ವಿಡಿಯೋ – ಸ್ಫೋಟಕ FSL ವರದಿಯಲ್ಲಿ ಏನಿದೆ?

Renukaswamy 4

ಪಟ್ಟಣಗೆರೆ ಶೆಡ್‌ನಲ್ಲಿ ನಟ ದರ್ಶನ್‌ ಮತ್ತು ಗ್ಯಾಂಗ್‌, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿತ್ತು. ಚಿತ್ರಹಿಂಸೆ ಕೊಟ್ಟು ಗ್ಯಾಂಗ್‌ ಹತ್ಯೆ ಮಾಡಿತ್ತು. ಈಗ ರಿವೀಲ್‌ ಆಗಿರುವ ಫೋಟೊದಲ್ಲಿ, ರೇಣುಕಾಸ್ವಾಮಿ ಹಿಂದೆ ಲಾರಿಗಳು ನಿಂತಿವೆ. ನೆಲದಲ್ಲಿ ಕುಳಿತಿರುವ ಸಂತ್ರಸ್ತ ಕೈಚಾಚಿ ಗೋಗರೆಯುತ್ತಿರುವ ಸ್ಥಿತಿಯಲ್ಲಿದ್ದಾನೆ.

ಕೊಲೆ ಪ್ರಕರಣದಲ್ಲಿ ಬುಧವಾರ ದರ್ಶನ್‌ ಮತ್ತು ಗ್ಯಾಂಗ್‌ ವಿರುದ್ಧ ಕೋರ್ಟ್‌ಗೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. 4,000 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ. ಇದನ್ನೂ ಓದಿ: ದರ್ಶನ್ ಸೇರಿ 14 ಮಂದಿ ವಿರುದ್ಧ ಕೊಲೆ ಕೇಸ್ – ಅಂಕಿಗಳಲ್ಲಿ ಚಾರ್ಜ್‌ಶೀಟ್‌

Share This Article