ನಟ ದರ್ಶನ್ ಮರ್ಡರ್ ಮಾಡಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಹತ್ಯೆಯ ಕಥೆಯನ್ನೇ ಹೋಲುವಂಥ ಧಾರಾವಾಹಿಯನ್ನು ಕಲರ್ಸ್ ಕನ್ನಡ ವಾಹಿನಿಯು ನಿರ್ಮಿಸಿದೆ. ಹೌದು, ನಿನ್ನೆ ಶಾಂತಂ ಪಾಪಂ ಸರಣಿಯಲ್ಲಿ ಪ್ರಸಾರವಾದ ‘ಡೇರ್ ಡೆವಿಲ್ ದೇವದಾಸ್’ ಬಹುತೇಕ ರೇಣುಕಾಸ್ವಾಮಿ ಮರ್ಡರ್ ಕಥೆಯನ್ನೇ ಹೋಲುತ್ತದೆ ಎನ್ನುವ ಅಭಿಪ್ರಾಯವನ್ನು ಅನೇಕ ನೋಡುಗರ ವ್ಯಕ್ತ ಪಡಿಸಿದ್ದಾರೆ. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಭಾರೀ ಚರ್ಚೆ ನಡೆದಿದೆ.
Advertisement
ಸ್ನೇಹಿತೆ ಪವಿತ್ರಾ ಗೌಡಗಾಗಿ ದರ್ಶನ್ ರೇಣುಕಾಸ್ವಾಮಿ ಕೊಲ್ಲಿಸಿದ್ದಾರೆ ಎನ್ನುವ ಆರೋಪ ಹೊತ್ತಿದ್ದಾರೆ. ಈಗಾಗಲೇ ದರ್ಶನ್ ಜೈಲು ಪಾಲಾಗಿದ್ದಾರೆ. ದರ್ಶನ್ ಅಂಡ್ ಗ್ಯಾಂಗ್ ಹೇಗೆಲ್ಲ ರೇಣುಕಾಸ್ವಾಮಿಯನ್ನು ಕೊಂದಿತು ಎನ್ನುವ ವಿಚಾರಗಳನ್ನು ತನಿಖಾಧಿಕಾರಿಗಳು ಕೋರ್ಟ್ ಗೆ ಸಲ್ಲಿಸಿದ್ದಾರೆ. ಕೊಲೆಯಾದ ಶೆಡ್, ಅದಕ್ಕೂ ಮುನ್ನ ಪಾರ್ಟಿ.. ರೇಣುಕಾಸ್ವಾಮಿಯನ್ನು ಖೆಡ್ಡಾಗೆ ಕೆಡವಿದ್ದು ಹೇಗೆ ಎನ್ನುವ ಕುರಿತಂತೆ ಎಳೆ ಎಳೆಯಾಗಿ ತನಿಖಾಧಿಕಾರಿಗಳು ಬಿಡಿಸಿಟ್ಟಿದ್ದಾರೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಕಂಡ ಕಥೆಯೂ ಹೀಗೆಯೇ ಇದೆ.
Advertisement
Advertisement
ಶಾಂತಂ ಪಾಪಂ ಸರಣಿಯಲ್ಲಿ ಪ್ರಸಾರ ಕಂಡ ‘ಡೇರ್ ಡೆವಿಲ್ ದೇವದಾಸ್’ ಕಥೆ ಶುರುವಾಗೋದು ನಟಿಯ ಸಲುವಾಗಿ ಅಣ್ಣ ಒಂದು ಕೊಲೆ ಮಾಡಿಸಿದ್ದಾನೆ ಎನ್ನುವ ಮೂಲಕ. ದೇವ ದೊಡ್ಡ ಉದ್ಯಮಿ. ಶ್ರೀಮಂತ. ಅವನಿಗೆ ಪುಟ್ಟದೊಂದು ಸಂಸಾರವಿದೆ. ಮುದ್ದಿನಂತೆ ಹೆಂಡ್ತಿ ಮತ್ತು ಮಗ. ಈ ದೇವನ ಬಾಳಲ್ಲಿ ನಟಿಯೊಬ್ಬಳ ಪ್ರವೇಶವಾಗುತ್ತದೆ. ನಟಿಯ ಪ್ರವೇಶದ ನಂತರ ಕಟ್ಟಿಕೊಂಡ ಹೆಂಡ್ತಿಗೆ ಸಾಕಷ್ಟು ಟಾರ್ಚರ್ ಕೊಡೋಕೆ ಶುರು ಮಾಡ್ತಾನೆ. ನಟಿಯ ಸಲುವಾಗಿ ಆತ ಏನು ಮಾಡೋಕು ರೆಡಿ ಆಗ್ತಾನೆ.
Advertisement
ನಟಿಗೆ ಹಿಂಸೆ ಕೊಡುತ್ತಿದ್ದ ವಿಚಾರ ದೇವನಿಗೆ ಗೊತ್ತಾಗುತ್ತದೆ. ಜೊತೆಗೆ ನಟಿಯು ಕೂಡ ಈ ವಿಚಾರವನ್ನು ದೇವನ ಜೊತೆ ಹಂಚಿಕೊಳ್ಳುತ್ತಾಳೆ. ತನ್ನ ಸಹಾಯಕರನ್ನು ಗುಂಪು ಮಾಡಿಕೊಂಡು ನಟಿಗೆ ಅಶ್ಲೀಲ ಕಾಮೆಂಟ್ ಮಾಡ್ತಿದ್ದವನನ್ನು ಹಿಡಿದು ಹಾಕ್ತಾರೆ. ಶೆಡ್‍ಗೆ ಕರೆಯಿಸಿಕೊಂಡು ಕೊಡಬಾರದ ಹಿಂಸೆ ಕೊಟ್ಟು ಸಾಯಿಸ್ತಾರೆ. ಕೊನೆಗೆ ಶ್ರೀಮಂತ ಉದ್ಯಮಿ ಜೈಲು ಪಾಲಾಗ್ತಾನೆ. ಹೀಗೆ ಕಥೆಯನ್ನು ಅದು ಹೊಂದಿದೆ. ಈ ಕಥೆಗೂ ದರ್ಶನ್ ಪ್ರಕರಣಕ್ಕೂ ಸಾಮ್ಯತೆಯನ್ನು ನೋಡುಗರ ಕಲ್ಪಿಸುತ್ತಿದ್ದಾರೆ.
View this post on Instagram
ಮೊನ್ನೆಯಿಂದಲೂ ಈ ಧಾರಾವಾಹಿಯ ಪ್ರೊಮೋ ಸಾಕಷ್ಟು ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಅನೇಕರು ದರ್ಶನ್ ಪ್ರಕರಣವನ್ನೇ ನೆನಪಿಸಿಕೊಂಡಿದ್ದರು. ಆದರೆ, ವಾಹಿನಿಯು ಮಾತ್ರ ಕಥೆಯ ವಿಚಾರವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಜೊತೆಗೆ ಇದೊಂದು ಕಾಲ್ಪನಿಗೆ ಕಥೆ ಅನ್ನುವಂತೆ ಪ್ರಸಾರ ಮಾಡಲಾಗಿದೆ.