ಬೆಂಗಳೂರು: ರೇಣುಕಾಸ್ವಾಮಿಯ (Renukaswamy) ಕಿಡ್ನಾಪ್ ಪ್ಲಾನ್ ಮಾಡಿದ್ದೇ ಪವಿತ್ರಗೌಡ. ಕಿಡ್ನಾಪ್ ಮತ್ತು ಮರ್ಡರ್ ಎರಡರಲ್ಲೂ ಪವಿತ್ರಾಗೌಡ (Pavithra Gowda) ನೇರ ಕೈವಾಡ ಚಾರ್ಜ್‌ಶೀಟ್‌ನಲ್ಲಿ (Chargesheet) ಬಯಲಾಗಿದೆ.
ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ನೋಡುತ್ತಿದ್ದಂತೆ ಕೆರಳಿದ ಪವಿತ್ರಾಗೌಡ, ಚಪ್ಪಲಿಯಲ್ಲಿ ಮನಸೋ ಇಚ್ಛೆ ಥಳಿಸಿದ್ದಾಳೆ. ಇದನ್ನೂ ಓದಿ: ರೇಣುಕಾಸ್ವಾಮಿ ತಲೆ ಓಪನ್ – ‘ಡಿ’ ಗ್ಯಾಂಗ್ ಭೀಕರ ಕ್ರೌರ್ಯ ಫೋಟೊಗಳಿಂದ ಬಹಿರಂಗ
ಪವಿತ್ರಾ ಗೌಡ ಆಕ್ರೋಶ ಹೇಗಿತ್ತು?
ನಿನ್ನ ಮುಗಿಸಲು ಕಾಯ್ತಾ ಇದ್ದೆ. ನನಗೇ ಅಶ್ಲೀಲ ಮೆಸೇಜ್ ಕಳಿಸ್ತೀಯಾ? ಬೆತ್ತಲೆ ಫೋಟೋ ಕಳಿಸಿ ಮುಜುಗರ ಮಾಡ್ತೀಯಾ? ದುಡ್ಡು ಕೊಟ್ಟು ಸಾಕ್ತೀನಿ ಅಂತೀಯಾ ಎಂದು ಹೇಳಿ ಚಪ್ಪಲಿಯಲ್ಲಿ ಹೊಡೆದಿದ್ದಾಳೆ.
ಈ ವೇಳೆ, ಪವಿತ್ರಾ ಕಾಲಿಗೆ ಬಿದ್ದ ರೇಣುಕಾಸ್ವಾಮಿ ತಪ್ಪಾಯಿತು ಎಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಾನೆ. ರೇಣುಕಾಸ್ವಾಮಿ ಬೇಡಿಕೊಂಡರೂ ಕರಗದ ಪವಿತ್ರಾ ಗೌಡ ಇವನನ್ನು ಉಳಿಸಬೇಡಿ ಕೊಂದು ಎಸೆದು ಬಿಡಿ ಎಂದು ಆದೇಶ ನೀಡಿ ಶೆಡ್‌ನಿಂದ ಮನೆಗೆ ಹೋಗುತ್ತಾಳೆ.
ಪವಿತ್ರಾಗೌಡ ಪ್ರಚೋದನೆಯಿಂದಲೇ ಕೊಲೆ ನಡೆದಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ. ಈ ಕಾರಣಕ್ಕೆ ಕೊಲೆ ಕೇಸಲ್ಲಿ ಪವಿತ್ರಾಗೌಡ ಎ1 ಆರೋಪಿಯಾಗಿದ್ದಾಳೆ.