ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswami Murder Case) ಆರೋಪಿಗಳಾದ ದರ್ಶನ್ & ಗ್ಯಾಂಗ್ (Actor Darshan & Gang) ಮೇಲೆ ಚಾರ್ಜ್‌ಶೀಟ್ (Chargesheet) ಸಲ್ಲಿಸಲು ಪೊಲೀಸರು ಸಿದ್ಧಪಡಿಕೊಂಡಿದ್ದಾರೆ. ಕೋರ್ಟ್‌ಗೆ ಇಂದು ಚಾರ್ಜ್‌ಶೀಟ್ ಸಲ್ಲಿಸುವುದು ಅನುಮಾನ ಎನ್ನಲಾಗಿದೆ.
ಚಾರ್ಜ್‌ಶೀಟ್‌ನಲ್ಲಿ ಮೂರು ವಿಧಗಳಾಗಿ ಆರೋಪಿಗಳನ್ನು ವಿಂಗಡಿಸಿದ್ದಾರೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ. ‘ಡಿ’ ಗ್ಯಾಂಗ್‌ನ ಆರೋಪಿಗಳ ಪೈಕಿ 14 ಮಂದಿಗೆ ಕೊಲೆ ಕೇಸ್‌ನಲ್ಲಿ ಪಿಟ್ ಮಾಡಿದ್ದರೆ, ಇನ್ನೂ ಉಳಿದ ಮೂವರಿಗೆ ಸಾಕ್ಷ್ಯನಾಶದಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತಿಸ್ತಿದ್ದಾರೆ: ಪ್ರದೀಪ್ ಈಶ್ವರ್ ಕಿಡಿ
Advertisement
Advertisement
ಕೊಲೆಕೇಸ್‌ನಿಂದ ರಿಲಾಕ್ಷೇಷನ್ ಪಡೆದು ಸಾಕ್ಷ್ಯನಾಶ ಮಾಡಿರುವ ಆರೋಪದಡಿಯಲ್ಲಿ ಚಾರ್ಜ್ ಮಾಡಲಾಗಿರುವ ಆರೋಪಿಗಳು:
* ಕಾರ್ತೀಕ್, ಆರೋಪಿ ನಂಬರ್ 15
* ಕೇಶವಮೂರ್ತಿ, ಆರೋಪಿ ನಂಬರ್ 16
* ನಿಖಿಲ್ ನಾಯಕ್, ಆರೋಪಿ ನಂಬರ್ 17
Advertisement
ಈ ಮೂವರು ಆರೋಪಿಗಳಿನ್ನು ಕೊಲೆ ಕೇಸ್‌ನಿಂದ ಕೈಬಿಟ್ಟಿರಲು ಕಾರಣ?
ಎ 15 ಕಾರ್ತಿಕ್, 16 ಕೇಶವಮೂರ್ತಿ, ಎ17 ನಿಖಿಲ್ ನಾಯಕ್, ರೇಣುಕಾಸ್ವಾಮಿಯನ್ನು ಹಲ್ಲೆ ಮಾಡಿರುವುದಾಗಲಿ, ಹತ್ಯೆ ಮಾಡಿರುವಂತ ಸಂದರ್ಭಗಳಲ್ಲಾಗಲಿ ಇವರು ಇರಲಿಲ್ಲ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ದೇಹವನ್ನು ವಿಲೇವಾರಿ ಮಾಡಿ ಸಾಕ್ಷ್ಯನಾಶ ಮಾಡಲು ಮುಂದಾಗಿದ್ದರು ಎಂದು ತನಿಖೆಯಿಂದ ಪೊಲೀಸರಿಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಸಾಕ್ಷ್ಯನಾಶ ಆರೋಪದ ಮೇಲೆ ಚಾರ್ಜ್‌ಶೀಟ್ ಸಲ್ಲಿಸಲು ತಯಾರಾಗಿದೆ ಎನ್ನಲಾಗಿದೆ.
Advertisement
ಇನ್ನುಳಿದಂತೆ ಎ1 ನಿಂದ 14 ತನಕ ಇರುವ ಆರೋಪಿಗಳ ವಿರುದ್ಧ, ಕೊಲೆ, ಸಾಕ್ಷ್ಯನಾಶ, ಕಿಡ್ನ್ಯಾಪ್ ಸೇರಿದಂತೆ ಹಲವು ಗಂಭೀರ ಸೆಕ್ಷನ್ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಗೆ ತಯಾರಿ ಮಾಡಿಕೊಂಡಿದ್ದಾರೆ.
ಕೊಲೆ, ಸಾಕ್ಷ್ಯನಾಶ, ಕಿಡ್ನ್ಯಾಪ್ ಸೇರಿದಂತೆ ಗಂಭೀರ ಸೆಕ್ಷನ್ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಗೆ ಒಳಗಾಗಿರುವ ಆರೋಪಿಗಳು:
ಪವಿತ್ರಾಗೌಡ (ಎ 1)
ದರ್ಶನ್ (ಎ 2)
ಪವನ್ (ಎ 3)
ರಾಘವೇಂದ್ರ (ಎ 4)
ನಂದೀಶ್ (ಎ 5)
ಧನರಾಜ್ (ಎ 9)
ವಿನಯ್ (ಎ 10)
ನಾಗರಾಜ್ (ಎ 11)
ಲಕ್ಷ್ಮಣ್ (ಎ12)
ದೀಪಕ್ (ಎ 13)
ಪ್ರದೋಷ್ ( ಎ14)
ಜಗದೀಶ್ (ಎ6)
ಅನುಕುಮಾರ್ (ಎ 7)
ರವಿಶಂಕರ್ (ಎ 8)
ಈ ಆರೋಪಿಗಳ ಮೇಲೆ ಕೊಲೆ ಕೇಸ್ ಅಡಿಯಲ್ಲಿ ಚಾರ್ಜ್‌ಶೀಟ್ ತಯಾರಾಗಿದೆ. ಆರೋಪಿಗಳು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಬಗ್ಗೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿದೆ.ಇದನ್ನೂ ಓದಿ: ಮುಡಾ ಸಂಕಷ್ಟದ ಹೊತ್ತಲ್ಲೇ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಸಿಎಂ
ಕಿಡ್ನ್ಯಾಪ್ ಗ್ಯಾಂಗ್:
ರಾಘವೇಂದ್ರ (ಎ4)
ಜಗದೀಶ್ (ಎ6)
ಅನುಕುಮಾರ್ (ಎ 7)
ರವಿಶಂಕರ್ (ಎ 8)