– ನಟ ದರ್ಶನ್ ಆಪ್ತನ ಮನೆಯಲ್ಲಿ ದಾಳಿ ನಡೆಸಿ ಹಣ ವಶಕ್ಕೆ
ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಹೆಸರು ಹೇಳದಿರಲು ಡೀಲ್ ಮಾಡಲಾಗಿದ್ದ 30 ಲಕ್ಷ ರೂ. ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ದರ್ಶನ್ ಆಪ್ತನೊಬ್ಬನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. ನಟ ಕೊಟ್ಟಿದ್ದ 30 ಲಕ್ಷ ಹಣವನ್ನು ಆಪ್ತನೊಬ್ಬನ ಮನೆಯಲ್ಲಿ ಇಡಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಹಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ನಂತರ ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಒಪ್ಪಿಕೊಳ್ಳಲು, ಮೃತದೇಹ ಸಾಗಿಸಲು ಮತ್ತು ನಟ ದರ್ಶನ್ ಹೆಸರನ್ನು ಬಾಯಿಬಿಡದಿರಲು ಬಂಧಿತರ ಪೈಕಿ ಐವರಿಗೆ 30 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು.
ಮೃತದೇಹ ಯಾರಿಗೂ ಸಿಗದಂತೆ ಸಾಗಿಸಲು ಮೂವರು ಆರೋಪಿಗಳಿಗೆ ಮುಂಗಡವಾಗಿ ಒಟ್ಟು 5 ಲಕ್ಷ ಸಂದಾಯ ಮಾಡಲಾಗಿತ್ತು. ಉಳಿದ ಇಬ್ಬರು ಆರೋಪಿಗಳು ಜೈಲಿಗೆ ಹೋದ ಮೇಲೆ ಅವರ ಮನೆಯವರಿಗೆ ಹಣ ತಲುಪಿಸುವುದಾಗಿ ಹೇಳಲಾಗಿತ್ತು. ಈ ವಿಚಾರವನ್ನು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್
ಜೂ.9 ರಂದು ಸುಮನಹಳ್ಳಿ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್ ಸಮೀಪದ ಮೋರಿ ಬಳಿ ಸಿಕ್ಕಿದ ರೇಣುಕಾಸ್ವಾಮಿ ಮೃತದೇಹ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹಲವು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.