– ಕಳೆದ 2 ತಿಂಗಳಿನಿಂದ ಮೊಬೈಲ್ ರಿಟ್ರೀವ್‌ಗಾಗಿ ಕಾದಿರುವ ಪೊಲೀಸರು
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಸಿಎಫ್‌ಎಸ್‌ಎಲ್ ವರದಿ (CFSL Report) ಇನ್ನೊಂದು ವಾರದಲ್ಲಿ ಬರಲಿದ್ದು, ಮೊಬೈಲ್ ರಿಟ್ರೀವ್ ಆಗುವ ಸಾಧ್ಯತೆಯಿದೆ. ವರದಿಯ ಬಳಿಕ ಪೊಲೀಸರು ಹೆಚ್ಚುವರಿ ಚಾರ್ಜ್‌ಶೀಟ್ (Chargesheet) ಸಲ್ಲಿಸಲಿದ್ದಾರೆ.
Advertisement
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಕಾಮಾಕ್ಷಿಪಾಳ್ಯ ಪೊಲೀಸರಿಂದ 3991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಈ ವೇಳೆ ಹತ್ತು ಆರೋಪಿಗಳ ಮೊಬೈಲ್ ರಿಟ್ರೀವ್‌ಗಾಗಿ ಹೈದಾರಬಾದ್‌ಗೆ ಕಳುಹಿಸಲಾಗಿತ್ತು. ಆದರೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಇಬ್ಬರದ್ದು ಐಪೋನ್ ಆಗಿರುವ ಹಿನ್ನೆಲೆ ಮೊಬೈಲ್ ರಿಟ್ರೀವ್ ಆಗಿರಲಿಲ್ಲ.ಇದನ್ನೂ ಓದಿ: Women’s T20 World Cup; ಭಾರತ vs ಪಾಕಿಸ್ತಾನ ಫೈಟ್ – ಟೀಂ ಇಂಡಿಯಾಗೆ ಇಂದು ನಿರ್ಣಾಯಕ ಪಂದ್ಯ
Advertisement
Advertisement
ಹತ್ತು ಆರೋಪಿಗಳ ಪೈಕಿ ಎಲ್ಲರ ಫೋನ್‌ಗಳು ರಿಟ್ರೀವ್ ಆಗಿದ್ದು, ನಟ ದರ್ಶನ್ ಹಾಗೂ ಪವಿತ್ರಾಗೌಡ ಅವರ ಫೋನ್ ರಿಟ್ರೀವ್ ಆಗಬೇಕಿದೆ. ಎರಡು ಐಪೋನ್ ಆಗಿರುವ ಹಿನ್ನೆಲೆ ಮೊಬೈಲ್ ರಿಟ್ರೀವ್ ಕಷ್ಟವಾಗಿದೆ. ಕಳೆದ ಎರಡು ತಿಂಗಳಿನಿಂದ ಮೊಬೈಲ್ ರಿಟ್ರೀವ್‌ಗಾಗಿ ಪೊಲೀಸರು ಕಾದಿದ್ದಾರೆ. ಹೀಗಾಗಿ ತಜ್ಞರ ಅಭಿಪ್ರಾಯ ಪಡೆದು ಪೊಲೀಸರು ರಿಟ್ರೀವ್‌ಗೆ ಮುಂದಾಗಿದ್ದಾರೆ.
Advertisement
ಪ್ರಕರಣ ಸಂಬಂಧ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದರೂ ಸಿಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ. ಮೊಬೈಲ್ ರಿಟ್ರೀವ್ ಆದ ಬಳಿಕ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆಯಾಗುವ ಸಾಧ್ಯತೆಯಿದ್ದು, ಇನ್ನೊಂದು ವಾರದಲ್ಲಿ ರಿಟ್ರೀವ್ ಆಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಶಬರಿಮಲೆ ಯಾತ್ರೆಗೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ – ದಿನಕ್ಕೆ 80,000 ಭಕ್ತರಿಗೆ ದರ್ಶನಕ್ಕೆ ಅವಕಾಶ