ಹತ್ಯೆಯಾಗುವ ಮುನ್ನ ಎರಡು ಲಾರಿ ಮಧ್ಯೆ ಕುಳಿತು ಅಂಗಲಾಚಿದ್ದ ರೇಣುಕಾಸ್ವಾಮಿ

Public TV
1 Min Read
Darshan 7

ಬೆಂಗಳೂರು: ಹತ್ಯೆಯಾಗುವ ಮುನ್ನ ಪಟ್ಟಣಗೆರೆ ಶೆಡ್‌ನಲ್ಲಿ ಎರಡು ಲಾರಿಗಳ ಮುಂದೆ ಕುಳಿತು ರೇಣುಕಾಸ್ವಾಮಿ (Renukaswamy) ಅಂಗಲಾಚಿದ್ದಾನೆ. ರಿಪೀಸ್‌ ಪಟ್ಟಿಯಿಂದ – ಕಿಟಕಿ/ಬಾಗಿಲು ಬಳಸಯವ ಆಯತಕಾರದಲ್ಲಿರುವ ಮರದ ತುಂಡು) ಬಡಿದು ಹತ್ಯೆ ಮಾಡಲಾಗಿದೆ. ರೇಣುಕಾಸ್ವಾಮಿ ಪ್ರಾಣ ಹೋಗೋವರೆಗೂ ದರ್ಶನ್ (Darshan) ಮತ್ತು ಪವಿತ್ರ ಗೌಡ (Pavithra Gowda) ಶೆಡ್ ಅಲ್ಲಿಯೇ ಇದ್ದರು ಎಂಬ ವಿಚಾರ ಚಾರ್ಜ್‌ಶೀಟ್‌ನಲ್ಲಿ (Chargesheet) ಉಲ್ಲೇಖವಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು 3,991 ಪುಟ, 231 ಸಾಕ್ಷಿ, 5 ಸಂಪುಟ ಇರುವ ಬೃಹತ್‌ ಚಾರ್ಜ್‌ಶೀಟ್‌ ಅನ್ನು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ ಏನೇನು ಫೋಟೋಗಳಿವೆ?
ಎರಡು ಲಾರಿಗಳ ಮಧ್ಯೆ ಕುಳಿತು ರೇಣುಕಾಸ್ವಾಮಿ ಅಂಗಲಾಚಿದ್ದಾನೆ. ಕೆಎ 51 ಎಂ ** ಲಾರಿಯ ಮುಂದೆ ಬಿದ್ದಿರುವ ಶವದ ಫೋಟೋವನ್ನು ಲಗತ್ತಿಸಲಾಗಿದೆ. ಇಷ್ಟೇ ಅಲ್ಲದೇ ಪೊಲೀಸ್ ಲಾಠಿ ಮುಂಬದಿ ಪುಡಿ ಪುಡಿಯಾಗಿರೋ ಫೋಟೋ, ನೈಲಾನ್ ಹಗ್ಗ, ರಿಪೀಸ್ ಪಟ್ಟಿ, ಪವಿತ್ರಾಗೌಡ ಮನೆಯಲ್ಲಿ ಸೀಜ್ ಮಾಡಿದ್ದ ಚಪ್ಪಲಿ, ನೀಲಿ ಜೀನ್ಸ್ ಮತ್ತು ಬಿಳಿ ಬಣ್ಣದ ಬನಿಯನ್‌ ಧರಿಸಿದ್ದ ರೇಣುಕಾಸ್ವಾಮಿಯ ಫೋಟೋವನ್ನು ಸೇರಿಸಿದ್ದಾರೆ. ಇದನ್ನೂ ಓದಿ: 3,991 ಪುಟ, 231 ಸಾಕ್ಷಿ, 5 ವ್ಯಾಲ್ಯೂಂ – ದರ್ಶನ್ & ಗ್ಯಾಂಗ್ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ಏನಿದೆ?

 

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆಯ ಭೀಕರತೆ ಬಗ್ಗೆ ಮಾಹಿತಿ ನೀಡಲಾಗಿದೆ. ರೇಣುಕಾಸ್ವಾಮಿ ಮೃತದೇಹದ ಮೇಲೆ 39 ಗಾಯದ ಗುರುತು ಪತ್ತೆಯಾಗಿದೆ. ಪ್ರಮುಖವಾಗಿ ಎದೆಮೂಳೆ ಮುರಿತ, ತಲೆಯಲ್ಲಿ ಆಳವಾದ ಗಾಯ ಪತ್ತೆ, ವೃಷಣಕ್ಕೆ ಹಾನಿ ಮಾಡಲಾದ ಬಗ್ಗೆ ಉಲ್ಲೇಖಿಸಲಾಗಿದೆ.

ಮರಣೋತ್ತರ ಪರೀಕ್ಷೆಯ ವರದಿಯನ್ನು ನೋಡಿದಾಗ ಆರೋಪಿಗಳು ಅತಿ ಕ್ರೂರವಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎನ್ನುವುದು ದೃಢಪಡುತ್ತದೆ.

Share This Article