ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು (Renukaswamy) ಅಪಹರಿಸಿ, ಟಾರ್ಚರ್ ಕೊಟ್ಟು ಭಯಾನಕವಾಗಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Darshan) ಸೇರಿ 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ (Chargesheet) ಸಲ್ಲಿಕೆಯಾಗಿದೆ.
ರೇಣುಕಾಸ್ವಾಮಿ ಕೊಲೆ ನಡೆದ 84 ದಿನಗಳ ನಂತರ ಬೆಂಗಳೂರಿನ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ 3991 ಪುಟಗಳ ಆರೋಪಪಟ್ಟಿಯನ್ನು ತನಿಖಾಧಿಕಾರಿಗಳು ಸಲ್ಲಿಸಿದ್ದಾರೆ. 10 ಕಡತ, 7 ಸಂಪುಟಗಳ ದೋಷಾರೋಪಪಟ್ಟಿಯನ್ನು ವಿಸ್ತೃತವಾಗಿ ಪರಿಶೀಲಿಸುವುದಾಗಿ ಮ್ಯಾಜಿಸ್ಟ್ರೇಟ್ ಎಸ್ ನಿರ್ಮಲಾ ಅವರು, ಪ್ರಾಸಿಕ್ಯೂಷನ್ ಪರ ವಕೀಲರಿಗೆ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಮಾಡುತ್ತಿದ್ದ ಅಶ್ಲೀಲ ಮೆಸೇಜ್‌ಗಳಿಂದ ಹಿಡಿದು ಕಿಡ್ನಾಪ್, ಟಾರ್ಚರ್, ಮರ್ಡರ್, ಸಾಕ್ಷ್ಯನಾಶ ಯತ್ನ, ಆರೋಪಿಗಳ ಬಂಧನದ ತನಕ ಇಡೀ ಪ್ರಕರಣವನ್ನು ಚಾರ್ಜ್‌ಶೀಟ್‌ನಲ್ಲಿ ಇಂಚಿಂಚಾಗಿ ವಿವರಿಸಲಾಗಿದೆ. ದರ್ಶನ್ ಗ್ಯಾಂಗ್ ಪೈಶಾಚಿಕವಾಗಿ ವರ್ತಿಸಿದ ರೀತಿಯನ್ನು ತನಿಖಾತಂಡ ವಿವರಿಸಿದೆ. ಇದನ್ನೂ ಓದಿ: Shivamogga Airport| 20 ದಿನಕ್ಕಷ್ಟೇ ಲೈಸೆನ್ಸ್- ಷರತ್ತು ಪೂರೈಸದಿದ್ದರೆ ವಿಮಾನ ಹಾರಾಟಕ್ಕೆ ತೊಡಕು
ಆರೋಪಿಗಳ ವಿರುದ್ಧ ಅಪಹರಣ, ಕೊಲೆ, ಸಾಕ್ಷ್ಯನಾಶ, ಒಳಸಂಚು ದರೋಡೆ, ಕಾನೂನುಬಾಹಿರವಾಗಿ ಗುಂಪು ಸೇರುವಿಕೆ ಹೀಗೆ ಹಲವು ಆರೋಪಗಳನ್ನು ಹೊರಿಸಲಾಗಿದೆ. ಆದರೆ ಇದು ಪ್ರಾಥಮಿಕ ದೋಷಾರೋಪ ಪಟ್ಟಿ ಅಷ್ಟೇ. ತನಿಖೆ ಇನ್ನೂ ಬಾಕಿಯಿದೆ. ತನಿಖೆ ಪೂರ್ಣಗೊಂಡ ಬಳಿಕ ಮತ್ತೊಂದು ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಂಕಿಗಳಲ್ಲಿ ಚಾರ್ಜ್‌ಶೀಟ್
* 17 ಆರೋಪಿಗಳ ಬಂಧನ
* ಪವಿತ್ರಗೌಡ ಎ-1 ಆರೋಪಿ
* ದರ್ಶನ್ ಎ-2 ಆರೋಪಿ
* 14 ಜನರ ವಿರುದ್ಧ ಅಪಹರಣ ಮತ್ತು ಕೊಲೆ ಆರೋಪ
* ಮೂವರು ಆರೋಪಿಗಳ ಮೇಲೆ ಸಾಕ್ಷ್ಯನಾಶ ಕೇಸ್(ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ )
* 3991 ಪುಟಗಳು ಇದನ್ನೂ ಓದಿ: 231 ಸಾಕ್ಷಿ ಕೇಳಿ ಜೈಲಿನಲ್ಲಿ ದರ್ಶನ್ ಶಾಕ್!
* ಏಳು ಸಂಪುಟ
* 10 ಕಡತ
* ಮೂವರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ
* 97 ಸಾಕ್ಷಿಗಳಿಂದ 164/161 ಹೇಳಿಕೆ
* 59 ಕಡೆ ಪಂಚನಾಮೆ
* 231 ಸಾಕ್ಷಿ ಸಂಗ್ರಹ
* 8 ಎಫ್‌ಎಸ್‌ಎಲ್, ಸಿಎಫ್‌ಎಸ್‌ಎಲ್‌ವರದಿ
* 8 ಸರ್ಕಾರಿ ಅಧಿಕಾರಿಗಳ ಸಾಕ್ಷಿ
* ತನಿಖೆಯಲ್ಲಿ 56 ಪೊಲೀಸರು ಭಾಗಿ