ಬೆಂಗಳೂರು: ಕೋರ್ಟ್‌ನಲ್ಲಿ ದರ್ಶನ್ (Darshan) ಅವರನ್ನು ನೋಡಿ ಪವಿತ್ರಾ ಗೌಡ (Pavithra Gowda) ಭಾವುಕರಾದ ಪ್ರಸಂಗ ಇಂದು ನಡೆಯಿತು.
ಇಂದು 57ನೇ ಸಿಸಿಹೆಚ್ ಕೋರ್ಟ್‌ಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಲ್ಲಾ 17 ಆರೋಪಿಗಳು ಹಾಜರಾಗಿದ್ದರು. 6 ತಿಂಗಳ ನಂತರ ಕೋರ್ಟ್‌ನಲ್ಲಿ ದರ್ಶನ್ ಅವರನ್ನು ನೋಡಿದ ಪವಿತ್ರಾ ಗೌಡ ಭಾವುಕರಾದರು.
Advertisement
ಹಾಲ್‌ನಲ್ಲಿ ಪವಿತ್ರಗೌಡಗೆ ಪದೇ ಪದೇ ದರ್ಶನ ಮಾತನಾಡಿಸಲು ಪ್ರಯತ್ನ ಪಡುತ್ತಿದ್ದರು. ಈ ವೇಳೆ ದರ್ಶನ್ ಬೆನ್ನುತಟ್ಟಿ ಪವಿತ್ರಾ ಅವರನ್ನು ಸಂತೈಸಿ ಕೆಲ ಕ್ಷಣ ಮಾತನಾಡಿದರು.
Advertisement
Advertisement
ಪವಿತ್ರಾ ಗೌಡ, ಪ್ರದೋಶ್ ಸೇರಿದಂತೆ ಹಲವು ಆರೋಪಿಗಳು ನ್ಯಾಯಾಲಯಕ್ಕೆ ಮೊದಲೇ ಹಾಜರಾಗಿದ್ದರು. ನಟ ದರ್ಶನ್ ಮಾತ್ರ ತುಸು ತಡವಾಗಿ ನ್ಯಾಯಾಲಯದ ಬಳಿ ಬಂದರು. ಎಲ್ಲಾ ಆರೋಪಿಗಳು ಹಾಲ್‌ಗೆ ಬಂದ ನಂತರ ನ್ಯಾಯಾಧೀಶರು ಹಾಜರಿ ಪಡೆದರು. ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಫೆ. 25ಕ್ಕೆ ಮುಂದೂಡಿದ ಬಳಿಕ ಪವಿತ್ರಾ ಗೌಡ ಮತ್ತು ದರ್ಶನ್ ಕೋರ್ಟ್‌ನಿಂದ ಒಟ್ಟಿಗೆ ಹೊರಬಂದು ಪ್ರತ್ಯೇಕ ಕಾರಿನಲ್ಲಿ ತೆರಳಿದರು.
Advertisement
ಜಾಮೀನು ಸಿಕ್ಕಿದರೂ ಇಲ್ಲಿಯವರೆಗೆ ಪವಿತ್ರಾಗೌಡ- ದರ್ಶನ್ ಭೇಟಿಯಾಗಿಲ್ಲ. ಈ ಹಿಂದೆ ಕೋರ್ಟ್ (Court) ವಿಚಾರಣೆಯ ಸಮಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖಾಮುಖಿಯಾಗಿದ್ದೇ ಕೊನೆ. ಅದಾದ ಬಳಿಕ ದರ್ಶನ್ ಹಾಗೂ ಪವಿತ್ರಾ ದೂರವಾಗಿದ್ದರು.
ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಕರ್ನಾಟಕ ಹೈಕೋರ್ಟ್ ಡಿ. 13 ರಂದು ಜಾಮೀನು ಮಂಜೂರು ಮಾಡಿತ್ತು. ಆದೇಶದಲ್ಲಿ ಏಳು ಆರೋಪಿಗಳಿಗೆ, ಕೋರ್ಟ್ ಅನುಮತಿ ಇಲ್ಲದೇ ಬೆಂಗಳೂರು (Bengaluru) ಬಿಟ್ಟು ಹೋಗುವಂತಿಲ್ಲ. ಪ್ರತಿ ತಿಂಗಳು ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು.