ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಕೋರ್ಟ್‌ನಿಂದ ರಿಲೀಫ್ ಸಿಕ್ಕಿದ ಬೆನ್ನಲ್ಲೇ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಟೆಂಪಲ್ ರನ್ ಮಾಡಿದ್ದು ಶಿರಡಿ ಸಾಯಿಬಾಬಾ ದೇವಾಲಯ (Sri Shirdi Sai Baba Temple) ಹೋಗಿದ್ದಾರೆ.
ಶಿರಡಿಗೆ ತೆರಳಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಓಂ ಶ್ರೀ ಸಾಯಿ ರಾಮ್ ಎಂದು ಎಂದು ಪವಿತ್ರಾ ಗೌಡ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ದರ್ಶನ್ ಸೇರಿದಂತೆ 7 ಆರೋಪಿಗಳಿಗೆ ಸುಪ್ರೀಂ ನೋಟಿಸ್
Advertisement
Advertisement
ಹೊರರಾಜ್ಯಗಳ ದೇವಸ್ಥಾನದ ಭೇಟಿಗಾಗಿ ಪವಿತ್ರಾ ಗೌಡ ಕೋರ್ಟ್ (Bengaluru Court) ಮೊರೆ ಹೋಗಿದ್ದರು. ಕೋರ್ಟ್‌ನಿಂದ ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ಪವಿತ್ರಾ ಗೌಡ ಟೆಂಪಲ್ ರನ್ ಮಾಡುತ್ತಿದ್ದಾರೆ.
Advertisement
ಜ.10 ರಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಧೀಶರ ಮುಂದೆ ಪವಿತ್ರಾ ಗೌಡ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ಪವಿತ್ರಾ ಪರ ವಕೀಲರು ದೇವಸ್ಥಾನ ಮತ್ತು ವ್ಯವಹಾರ ಸಂಬಂಧ ಒಂದು ತಿಂಗಳ ಕಾಲ ಹೊರ ರಾಜ್ಯಕ್ಕೆ ತೆರಳಲು ಅನುಮತಿ ಕೇಳಿದ್ದರು. ಇದನ್ನೂ ಓದಿ: ಕಗ್ಗಲೀಪುರದಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ?
Advertisement
ಆರ್ ಆರ್ ನಗರದಲ್ಲಿ ಇರುವ ರೆಡ್ ಕಾರ್ಪೆಟ್ ಶೋ ರೂಂಗೆ ಸಂಬಂಧಿಸಿದಂತೆ ವಸ್ತುಗಳನ್ನು ಹೊರ ರಾಜ್ಯದಿಂದ ತರಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ್ದ ಕೋರ್ಟ್ ಮುಂಬೈ ಮತ್ತು ದೆಹಲಿಗೆ ತೆರಳಲು ಪವಿತ್ರಾ ಗೌಡಗೆ ಅನುಮತಿ ನೀಡಿತ್ತು.
ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಕರ್ನಾಟಕ ಹೈಕೋರ್ಟ್ ಡಿ. 13 ರಂದು ಜಾಮೀನು ಮಂಜೂರು ಮಾಡಿತ್ತು. ಆದೇಶದಲ್ಲಿ ಏಳು ಆರೋಪಿಗಳಿಗೆ ಕೋರ್ಟ್ ಅನುಮತಿ ಇಲ್ಲದೇ ಬೆಂಗಳೂರು (Bengaluru) ಬಿಟ್ಟು ಹೋಗುವಂತಿಲ್ಲ. ಪ್ರತಿ ತಿಂಗಳು ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು.