ಬೆಂಗಳೂರು: ರೇಣುಕಾಸ್ವಾಮಿ ಹತ್ಯೆಗೆ (Renukaswamy Murder Case) ಸಂಬಂಧಿಸಿದಂತೆ ವಿಕಿಪೀಡಿಯದಲ್ಲಿ ಪೇಜ್ (Wikipedia) ಓಪನ್ ಆಗಿದೆ.
ನಟ ದರ್ಶನ್ (Darshan) ಮುಖ್ಯ ಆರೋಪಿಯಾಗಿರುವ ದೇಶವ್ಯಾಪಿ ಸಂಚಲನ ಮೂಡಿಸಿದ ಪ್ರಕರಣ ಇದಾಗಿರುವ ಕಾರಣ ವಿಕಿಪೀಡಿಯದಲ್ಲಿ Murder of Renukaswamy ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪೇಜ್ ತೆರೆಯಲಾಗಿದೆ. ಇದನ್ನೂ ಓದಿ: NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್ – ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ
ಜೂನ್ 21ಕ್ಕೆ ಈ ಪೇಜ್ ಓಪನ್ ಆಗಿದ್ದು ಹಲವು ವಿಕಿಪೀಡಿಯ ಸದಸ್ಯರು ಸೇರಿ ಈ ಕೊಲೆಯ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿ ನಿರಂತರವಾಗಿ ಅಪ್‌ಡೇಟ್ ಮಾಡುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಪ್ರತಿ ಮಹತ್ವದ ವಿಷಯಕ್ಕೆ ಮಾಧ್ಯಮ ವರದಿಗಳ ಉಲ್ಲೇಖಗಳನ್ನು ಕೆಳ ಭಾಗದಲ್ಲಿ ನೀಡಲಾಗಿದೆ.