ಬೆಂಗಳೂರು: “ ಸರ್, ನನ್ನ ಟೈಂ, ನನ್ನ ಗ್ರಹಚಾರ ಸರಿಯಿಲ್ಲ ಅಷ್ಟೇ” ಇದು ನಟ ದರ್ಶನ್ (Darshan) ಆಡಿರುವ ಪಶ್ಚಾತ್ತಾಪದ ಮಾತು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ವ್ಯಾನ್‌ನಲ್ಲಿ ಬಳ್ಳಾರಿಗೆ ತೆರಳುವ ಐದು ಗಂಟೆಗಳ ಪ್ರಯಾಣದಲ್ಲಿ ತನ್ನ ಸಿನಿಮಾ ಜರ್ನಿ ಬಗ್ಗೆ ಪೊಲೀಸರ ಜೊತೆ ದರ್ಶನ್ ಮಾತನಾಡಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣ ನಂತರದ ಬೆಳವಣಿಗೆಯ ಬಗ್ಗೆ ಮಾತನಾಡುವ ವೇಳೆ ದರ್ಶನ್ ಭಾವುಕರಾಗಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ದರ್ಶನ್‌ಗೆ ರಾಜಾತಿಥ್ಯ – ಪ್ರಭಾವಿ ಸಚಿವನಿಗೆ ಸಿಎಂ ಕ್ಲಾಸ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ, ಈಗ ಏನು ಹೇಳಿದ್ರೂ ತಪ್ಪಾಗುತ್ತದೆ. ಕಾನೂನಿನ ಮೂಲಕ ಎಲ್ಲವನ್ನು ಎದುರಿಸುತ್ತೇನೆ ಎಂಬುದಾಗಿ ದರ್ಶನ್ ಮಾತನಾಡಿದ್ದಾರೆ.
ಐದು ಗಂಟೆ ಗಳ ಪ್ರಯಾಣದಲ್ಲಿ ಕೆಲ ವಿಚಾರಗಳನ್ನು ಹೊರತುಪಡಿಸಿ ಹೆಚ್ಚಿನ ಸಮಯದಲ್ಲಿ ದರ್ಶನ್ ಮೌನವಾಗಿಯೇ ಕುಳಿತಿದ್ದರು. ಇದನ್ನೂ ಓದಿ: ಇಂದು ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ನಾಗಸಂದ್ರದವರೆಗೂ ಮೆಟ್ರೋ ಸೇವೆ ಸ್ಥಗಿತ