ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್‌ಗೆ (Darshan) ಸದ್ಯಕ್ಕೆ ಜಾಮೀನು (Bail) ಸಿಗುವುದು ಬಹುತೇಕ ಅನುಮಾನ.
ಈಗಾಗಲೇ ಪೊಲೀಸರು ಪ್ರಬಲ ಸಾಕ್ಷ್ಯವನ್ನು ಕಲೆ ಹಾಕಿದ್ದಾರೆ. ಒಂದೊಮ್ಮೆ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದರೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ತಯಾರಿ ನಡೆಸಿದ್ದಾರೆ. ಕಳೆದ ಆರು ದಿನದಿಂದ ಜೈಲಲ್ಲಿರುವ ನಟ ದರ್ಶನ್‌ಗೆ, ನಿಮ್ಮ ವಿರುದ್ಧ ರೌಡಿಶೀಟರ್ ಪಟ್ಟಿಯನ್ನು ಯಾಕೆ ತೆರೆಯಬಾರದು ಎನ್ನುತ್ತಾ ನೊಟೀಸ್ ಕಳುಹಿಸಲು ಪೊಲೀಸರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಇಂದು ಕೂಡ ಜೈಲಿನಲ್ಲಿ (Jail) ಯಾರನ್ನೂ ನಟ ದರ್ಶನ್ ಭೇಟಿಯಾಗಿಲ್ಲ. ತಮ್ಮ ಭೇಟಿಗೆ ಯಾರಿಗೂ ಅವಕಾಶ ಕೊಡಬಾರದು ಅಂತ ಜೈಲಾಧಿಕಾರಿಗಳಿಗೆ ದರ್ಶನ್ ಕೋರಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಕೇಸ್ – ಆರೋಪಿ ಅರುಣ್ ಚೌಗಲೆ ಜಾಮೀನು ಅರ್ಜಿ ವಜಾ
ಈ ಮಧ್ಯೆ, ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೂ ನಟ ದರ್ಶನ್ ಆಪ್ತೆ ಪವಿತ್ರಾಗೌಡ (Pavithra Gowda) ಮೇಕಪ್‌ಗೆ ಅತಿಯಾದ ಆದ್ಯತೆ ನೀಡ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ರಾಜ್ಯದ ಸಂಸದರ ಜೊತೆ ಸಿಎಂ-ಡಿಸಿಎಂ ಸಭೆ