ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ (Renukaswamy murder case) ನಡೆಸಿದ್ದ ‘ಡಿ’ ಗ್ಯಾಂಗ್, ಶವ ಎಸೆಯುವ ಬಗ್ಗೆ ನಟ ದರ್ಶನ್ (Actor Darshan) ಮನೆಯಲ್ಲೇ ಸ್ಕೆಚ್ ಹಾಕಿದ್ದ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.
ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ಆರೋಪಿಗಳು ಗಾಬರಿಯಾಗಿದ್ದಾರೆ. ಈ ವೇಳೆ ಶೆಡ್ ಬಳಿ ಬಂದು ರೇಣುಕಾಸ್ವಾಮಿ ಮೃತಪಟ್ಟಿರುವುದನ್ನು ನೋಡಿದ್ದ ದರ್ಶನ್ ಶವ ಎಸೆಯುವ ಬಗ್ಗೆ ಏನಾದರೂ ಪ್ಲ್ಯಾನ್ ಮಾಡಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದರು. ಇದಾದ ಕೆಲ ಸಮಯದ ನಂತರ ಆರೋಪಿ ವಿನಯ್ ಹಾಗೂ ಗ್ಯಾಂಗ್ ಆರ್‍ಆರ್ ನಗರದ ದರ್ಶನ್ ಅವರ ಐಡಿಯಲ್ ಹೋಂನಲ್ಲಿ ಶವ ಬಿಸಾಡುವ ಬಗ್ಗೆ ಚರ್ಚೆ ನಡೆಸಿದ್ದರು. ಇದನ್ನೂ ಓದಿ: ಸ್ಕಾರ್ಪಿಯೋ ವಾಶ್ ಮಾಡಿಸಿ ಸಾಕ್ಷಿ ನಾಶ ಯತ್ನ – ಕಾರ್ಪೆಟ್‌ನಲ್ಲಿದ್ದ ರಕ್ತದ ಕಲೆಯಿಂದ ಸಿಕ್ತು ಸುಳಿವು
ಇದೇ ವೇಳೆ ತನ್ನ ಹೆಸರು ಬಾರದಂತೆ ಶವ ಎಸೆಯಲು 30 ಲಕ್ಷಕ್ಕೆ ಡೀಲ್ ನಡೆದಿತ್ತು. ಬಳಿಕ ರೇಣುಕಾಸ್ವಾಮಿ ಮೃತದೇಹವನ್ನು ಸುಮ್ಮನಹಳ್ಳಿಯ ಮೋರಿ ಬಳಿ ಎಸೆದು, ಬಳಿಕ ಮೈಸೂರಿಗೆ ದರ್ಶನ್ ತೆರಳಿದ್ದರು. ಇತ್ತ ಆರೋಪಿಗಳು ಮೈಸೂರಿಗೆ ತೆರಳಿ ದರ್ಶನ್ ಭೇಟಿ ಮಾಡಿ ಮುಂದಿನ ಪ್ಲಾನ್ ಬಗ್ಗೆ ಚರ್ಚಿಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಸದ್ಯ ಆರ್‍ಆರ್ ನಗರದ ದರ್ಶನ್ ಮನೆಯಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಮನೆಯ ಸಿಸಿಟಿವಿಯ ಡಿವಿಆರ್‍ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಎಸ್‌ಪಿಪಿ ವಾದದಲ್ಲಿ ಸ್ಪಷ್ಟತೆಯಿರಲಿಲ್ಲ, ಎಲ್ಲ ಆರೋಪ ದರ್ಶನ್ ಮೇಲೆ ಹೊರಿಸಲು ಸಾಧ್ಯವಿಲ್ಲ: ದರ್ಶನ್ ಪರ ವಕೀಲ