ಶಿವಮೊಗ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಎ12 ಆರೋಪಿ, ದರ್ಶನ್ (Darshan) ಕಾರು ಚಾಲಕ ಲಕ್ಷ್ಮಣ್ (Laxman) ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಶಿವಮೊಗ್ಗ ಜೈಲಿನಿಂದ (Shivamogga Jail) ಬಿಡುಗಡೆಯಾಗಿ ಹೊರ ಬಂದ ಲಕ್ಷ್ಮಣ್‌ನನ್ನು ಮಾಧ್ಯಮಗಳು ಮಾತನಾಡಿಸಲು ಪ್ರಯತ್ನಿಸಿದ್ದವು. ಈ ವೇಳೆ ಲಕ್ಷ್ಮಣ್ ಓಡೋಡಿ ರಸ್ತೆಯಲ್ಲಿ ನಿಂತಿದ್ದ ಇನ್ನೋವಾ ಕಾರನ್ನು ಹತ್ತಿ ಬೆಂಗಳೂರು ಕಡೆಗೆ ತೆರಳಿದ್ದಾನೆ.
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗ್ಯಾಂಗ್ ರಾಜಾತಿಥ್ಯ ನೀಡಿದ ಪ್ರಕರಣ ಬೆಳಕಿಗೆ ಬಂದ ನಂತರ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. ಇದನ್ನೂ ಓದಿ:ದರ್ಶನ್ ಹೆಸರಲ್ಲಿ ಪವಿತ್ರಾ ಗೌಡ ತಾಯಿ ಅರ್ಚನೆ
ಲಕ್ಷ್ಮಣ್ ಮೇಲಿರುವ ಆರೋಪ ಏನು?
ಬೆಂಗಳೂರಿನ ಆರ್‌ಪಿಸಿ ಲೇಔಟ್ ಬಳಿ ನೆಲೆಸಿದ್ದ ಲಕ್ಷ್ಮಣ್ ಹಲವು ವರ್ಷಗಳಿಂದ ದರ್ಶನ್ ಕಾರು ಚಾಲಕನಾಗಿದ್ದ. ಕಾರು ಚಾಲನೆಯ ಜೊತೆ ದರ್ಶನ್ ಮನೆ ನಿರ್ವಹಣೆಯ ಹೊಣೆಗಾರಿಕೆ ಸಹ ನಿರ್ವಹಿಸುತ್ತಿದ್ದ.
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆ ನಡೆದಾಗ ಲಕ್ಷ್ಮಣ್ ಭಾಗಿಯಾಗಿದ್ದ. ಅಷ್ಟೇ ಅಲ್ಲದೆ ಕೃತ್ಯ ಎಸಗಿದ ಬಳಿಕ ಪ್ರಕರಣದಲ್ಲಿ ದರ್ಶನ್ ರಕ್ಷಿಸಲು ಮುಂದಾದ ಲಕ್ಷ್ಮಣ್, ಪೊಲೀಸರಿಗೆ ಶರಣಾಗುತ್ತಿದ್ದ ನಾಲ್ವರಿಗೆ ದರ್ಶನ್ ಹೆಸರು ಹೇಳದಂತೆ ಪವಿತ್ರಾಗೌಡ ಜತೆ ಹಣದಾಸೆ ತೋರಿಸಿದ್ದ ಎಂಬ ಆರೋಪ ಬಂದಿದೆ.
ಈ ಕೃತ್ಯ ಎಸಗಿದ ಬಳಿಕ ದರ್ಶನ್ ಮನೆಯಲ್ಲಿ ನಡೆದ ಆಪ್ತರ ಸಭೆಯಲ್ಲಿ ಲಕ್ಷ್ಮಣ್ ಕೂಡ ಇದ್ದ. ಈ ಕೃತ್ಯ ಎಸಗಿ ಮೈಸೂರು ಕಡೆ ಪರಾರಿಯಾಗುತ್ತಿದ್ದ ಲಕ್ಷ್ಮಣ್‌ನನ್ನು ಬಿಡದಿ ಟೋಲ್ ಹತ್ತಿರ ಪೊಲೀಸರು ಬಂಧಿಸಿದ್ದರು.