ಚಿತ್ರದುರ್ಗ: ನನ್ನ ಮಗ ವಿಲವಿಲ ಒದ್ದಾಡಿ ಸತ್ತಂತೆ ದರ್ಶನ್ (Darshan) ಸಾಯಬೇಕು. ಪವಿತ್ರಾಗೌಡಳನ್ನು (Pavithra Gowda) ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕೊಲೆಯಾದ ರೇಣುಕಾಸ್ವಾಮಿ (Renukaswamy) ತಾಯಿ ರತ್ನಮ್ಮ ಹಿಡಿಶಾಪ ಹಾಕಿದ್ದಾರೆ.
ರೇಣುಕಾಸ್ವಾಮಿ ಅಂತ್ಯಕ್ರಿಯೆ ಬಳಿಕ ರುದ್ರಭೂಮಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 15 ದಿನದೊಳಗೆ ದರ್ಶನ್ ಸಾಯಲಿ. ನಮ್ಮ ವಂಶ ನಿರ್ವಂಶ ಮಾಡಿದ ದರ್ಶನ್‌ಗೆ ತಕ್ಕ ಶಾಸ್ತಿ ಆಗಲಿ. ನನ್ನ ಮಗನನ್ನು ಕೊಂದಂತೆ ಅವನನ್ನು ಸಾಯಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಗಂಡ ದರ್ಶನ್ ಅಭಿಮಾನಿ ಅಲ್ಲ: ಕೊಲೆಯಾದ ರೇಣುಕಾಸ್ವಾಮಿ ಪತ್ನಿ ಹೇಳಿಕೆ
ಗಂಡ ಬರುತ್ತಾನೆ ಎಂದು ನನ್ನ ಸೊಸೆ ಕಾದು ಕುಳಿತಿದ್ದಳು. ಪಾಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಪವಿತ್ರಾಗೌಡ ವಿರುದ್ಧ ರೇಣುಕಾಸ್ವಾಮಿ ಹೆತ್ತಮ್ಮ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಟ ದರ್ಶನ್ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ