ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್ (Darshan) ಆ್ಯಂಡ್ ಗ್ಯಾಂಗ್ ಇಂದು ಕೋರ್ಟ್ ಮುಂದೆ ಹಾಜರಾಗಲಿದ್ದಾರೆ.
ಬೆಂಗಳೂರಿನ (Bengaluru) 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಪವಿತ್ರಾಗೌಡ, ದರ್ಶನ್ ಸೇರಿ ಎಲ್ಲಾ 17 ಆರೋಪಿಗಳು ಕೋರ್ಟ್‌ಗೆ ಹಾಜರಾಗಲಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: AAP ಸರ್ಕಾರದಲ್ಲಿ ಹಗರಣ – ದೆಹಲಿ ವಿಧಾನಸಭೆಯಲ್ಲಿ ಇಂದು ಸರ್ಕಾರದಿಂದ ಸಿಎಜಿ ವರದಿ ಮಂಡನೆ
ಆರ್.ಆರ್. ನಗರದ ದರ್ಶನ್ ಮನೆ ಮುಂದೆ ಅಂಗರಕ್ಷಕರು ಜಮಾಯಿಸಿದ್ದು, ಮನೆ ಮುಂದೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಆದ್ದರಿಂದ ಆರ್.ಆರ್. ನಗರದ ಮನೆಯಲ್ಲಿಯೇ ದರ್ಶನ್ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಬಸ್ ಚಾಲಕನಿಗೆ ಕನ್ನಡ ಧ್ವಜ ಹಿಡಿಸಿ ‘ಜೈ ಕರ್ನಾಟಕ’ ಎಂದು ಕೂಗಿಸಿದ ಕನ್ನಡಿಗರು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡ, ನಟ ದರ್ಶನ್ ಸೇರಿ 17 ಆರೋಪಿಗಳು ಜೈಲು ಸೇರಿದ್ದರು. ಜಾಮೀನಿನ ಮೂಲಕ ಹೊರಬಂದಿರುವ ಡಿ ಗ್ಯಾಂಗ್ ಇಂದು ಕೋರ್ಟ್ ವಿಚಾರಣೆ ಎದುರಿಸಲಿದ್ದಾರೆ. ಇದನ್ನೂ ಓದಿ: ತಡರಾತ್ರಿ ತಲ್ವಾರ್ ಝಳಪಿಸುತ್ತ ವ್ಹೀಲಿಂಗ್ ಮಾಡಿದ್ದ ಪುಂಡರ ಮೇಲೆ ರೌಡಿಶೀಟ್
ನಟ ದರ್ಶನ್ ಹಾಗೂ ಪವಿತ್ರಾಗೌಡ ಈಗಾಗಲೇ ಕೋರ್ಟ್‌ನತ್ತ ಸಾಗುತ್ತಿದ್ದಾರೆ.