– ದರ್ಶನ್ ಸಿಮ್ ಹೇಮಂತ್ ಹೆಸರಿನಲ್ಲಿತ್ತು ಎಂಬ ಆರೋಪಿ ಪರ ವಕೀಲರ ವಾದಕ್ಕೆ ಕೌಂಟರ್
ಬೆಂಗಳೂರು: ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ (Darshan) ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ಮುಗಿದಿದ್ದು, ಕೋರ್ಟ್ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಿದೆ. ಎಸ್‌ಪಿಪಿ ಪ್ರಸನ್ನಕುಮಾರ್ ಅವರ ನಿನ್ನೆ ಮತ್ತು ಮೊನ್ನೆಯ ವಾದಕ್ಕೆ ಗುರುವಾರ ನಟ ದರ್ಶನ್ ಪರ ವಕೀಲ ಸಿವಿ ನಾಗೇಶ್ ಕೌಂಟರ್ ಕೊಡುವ ಕೆಲಸ ಮಾಡಿದರು. ಇದಕ್ಕೆ ಎಸ್‌ಪಿಪಿ ಕೂಡ ಪ್ರತಿವಾದ ಮಂಡಿಸಿದರು.
ದರ್ಶನ್ ಪರ ವಕೀಲರ ವಾದ ಏನು?
ಪ್ರಕರಣದ ತನಿಖಾಧಿಕಾರಿಯನ್ನ ಎಸ್‌ಪಿಪಿ ತಪ್ಪು ದಾರಿಗೆ ಎಳೆದಿದ್ದಾರೆ. ಮೊಬೈಲ್ ಕರೆಗಳು, ಟವರ್ ಡಂಪ್ ಆಧರಿಸಿ ರೇಖಾಚಿತ್ರ ಸಿದ್ಧಪಡಿಸಿದ್ದಾರೆ. ಗೂಗಲ್ ಮ್ಯಾಪ್ ನೋಡಿ ಕಾನ್‌ಸ್ಟೇಬಲ್ ಸಹಾಯದಿಂದ ರೇಖಾಚಿತ್ರ ಸಿದ್ಧ. ಉಪಗ್ರಹ ಆಧಾರಿತ ಚಿತ್ರವನ್ನ ಮೊಬೈಲ್ ಆಧಾರದ ಮೇಲೆ ತೆಗೆದುಕೊಂಡಿದ್ದಾರೆ. ಇದನ್ನ ಟೆಕ್ನಿಕಲ್ ಎವಿಡೆನ್ಸ್ ಆಗಿ ಪರಿಗಣಿಸುವುದು ಎಷ್ಟು ಸರಿ? ಶೆಡ್‌ನಲ್ಲಿ ಪುನೀತ್, ವಿಜಯ್, ಬಸವರಾಜ್ ಸೇರಿ 8 ಮಂದಿ ಕೆಲಸ ಮಾಡುತ್ತಿದ್ದರು. ಆದರೆ, ಚಾರ್ಜ್ಶೀಟ್‌ನ ಈ ಡಯಾಗ್ರಾಂನಲ್ಲಿ ಎಷ್ಟು ಜನರನ್ನ ತೋರಿಸಿದ್ದಾರೆ? ಆರೋಪಿಗಳ ಮೊಬೈಲ್ ಸೀಜ್ ಮಾಡಿ ಗೂಗಲ್ ಡಯಾಗ್ರಾಂ ಮಾಡಲಾಗಿದೆ. ಇಂತಹ ಸಾಕ್ಷ್ಯಗಳನ್ನ ಇಟ್ಟುಕೊಂಡು ಯಾರನ್ನ ಶಿಕ್ಷಿಸಲು ಸಾಧ್ಯ? ಇದನ್ನೂ ಓದಿ: ಸರ್ಕಾರ ರಾಜಭವನದ ಮಧ್ಯೆ ‘ಪತ್ರ’ ಸಮರ – ರಾಜ್ಯಪಾಲರು ಬರೆದ 35 ಪತ್ರಗಳಿಗೆ ಬಂದಿಲ್ಲ ಉತ್ತರ
ದರ್ಶನ್ ಸಿಮ್ ಹೇಮಂತ್ ಹೆಸರಿನಲ್ಲಿತ್ತು. ಹಾಗಿದ್ರೆ ದರ್ಶನ್ ಫೋಟೋ ಹೇಗೆ ಬಂತು? ದರ್ಶನ್ ಪೋಟೋ ತೆಗೆದುಕೊಂಡು ಎಡಿಟ್ ಮಾಡಿ ತೋರಿಸಲಾಗಿದೆ. ರೇಣುಕಾಸ್ವಾಮಿ ದೇಹದ ಮೇಲೆ 1 ಸೆಂಮೀ ಗಾಯ ಇತ್ತು. ದೇಹದ ಮೇಲೆ 39 ಗಾಯಗಳಿದ್ದವು ಎಂದು ವೈದ್ಯರು ಹೇಳಿದ್ದಾರೆ. ತಲೆಗೆ ಬಲವಾಗಿ ಹೊಡೆದರೆ ರಕ್ತ ಧಾರಕಾರವಾಗಿ ಹರಿಯಲ್ಲ, ಚಿಮ್ಮುತ್ತೆ. ಶೆಡ್ ಕೆಲಸಗಾರ ಕಿಶೋರ್ ಹೇಳಿಕೆ ದಾಖಲಿಸಲು ತಡಮಾಡಿದ್ಯಾಕೆ? ಸ್ಟೋನಿಬ್ರೂಕ್ ಪಬ್ ಸ್ಥಳವನ್ನು ಅಪರಾಧ ಜಾಗವಾಗಿ ತೋರಿಸಿದ್ದಾರೆ. ಇದೇನಾ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸ್ ಮಾದರಿಯ ತನಿಖೆ ಎಂದು ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು.
ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಏನು?
ತನಿಖಾಧಿಕಾರಿ ಯಾವುದೇ ಸಾಕ್ಷಿಗಳನ್ನ ಸೃಷ್ಟಿಸಿಲ್ಲ. ಕೇವಲ ಐಪಿ ಅಡ್ರೆಸ್‌ನಿಂದ ಈ ವರದಿ ಸಿದ್ಧಪಡಿಸಿಲ್ಲ. ಜಿಪಿಎಸ್ ಲ್ಯಾಂಗಿಟ್ಯೂಡ್ ಲಾಟಿಟ್ಯೂಡ್ ಆಧರಿಸಿ ವರದಿ ಸಿದ್ಧ. ದರ್ಶನ್ ಸಿಮ್ ಹೇಮಂತ್‌ಗೆ ಸೇರಿದ್ದು ಅಂತಾ ಸಿವಿ ನಾಗೇಶ್ ಹೇಳ್ತಾರೆ. `ಮಿಸ್ ಯೂ ಹೆಂಡ್ತಿ, ಯೂ ಆರ್ ಮೋಸ್ಟ್ ಇಂಪಾರ್ಟೆಂಟ್ ಇನ್ ಮೈಲೈಫ್ ಸುಬ್ಬಿ’ ಎನ್ನುವಂತಹ ಮೆಸೇಜ್‌ಗಳನ್ನು ಹೇಮಂತ್ ಮಾಡಿದ್ದಾ? ದರ್ಶನ್ ಮಾಡಿದ್ದಾ? ಇದನ್ನೂ ಓದಿ: ಮುಡಾ, ವಾಲ್ಮೀಕಿ ಎರಡು ಕೇಸ್‌ನಲ್ಲಿ ಸಿಎಂ ಅಪರಾಧಿ – ಶೋಭಾ ಕರಂದ್ಲಾಜೆ
ಪವಿತ್ರಾಗೆ ಅಶ್ಲೀಲ ಸಂದೇಶ ಕಳಿಸಿದ್ದಕ್ಕೆ ರೇಣುಕಾಸ್ವಾಮಿ ಕೊಲೆ. ಸಂಚು ರೂಪಿಸಿ ಕೊಲೆ ಮಾಡಿದ ಕಾರಣಕ್ಕೆ ದರ್ಶನ್ ಬಂಧನವಾಗಿದೆ ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದ್ದಾರೆ.