ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಸಿಲುಕಿ ಜೈಲಲ್ಲಿರುವ ನಟ ದರ್ಶನ್ (Darshan) ಜಾಮೀನು (Bail) ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ತುರ್ತು ವಿಚಾರಣೆಗೆ ಕೋರಿ ಮೆಮೋ ಹಾಕಿದ್ದಾರೆ. ಆದರೆ ಅಕ್ಟೋಬರ್ 22ರಂದು ದರ್ಶನ್ ಜಾಮೀನು ಅರ್ಜಿಯನ್ನು ಹೈಕೋರ್ಟ್ (High Court) ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಪವಿತ್ರಾಗೌಡ (Pavithra Gowda) ಕೂಡ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಇತರೆ ಆರೋಪಿಗಳಾದ ಅನುಕುಮಾರ್, ಪ್ರದೋಷ್ ಮತ್ತು ವಿನಯ್ ಅರ್ಜಿಗಳನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿದೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – ಶೇ.3 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಕ್ಯಾಬಿನೆಟ್ ಅನುಮೋದನೆ
- Advertisement
- Advertisement
ಕೋರ್ಟ್ ಜಾಮೀನು ಮಂಜೂರು ಮಾಡಿ ಮೂರು ದಿನ ಕಳೆದರೂ ಪರಪ್ಪನ ಅಗ್ರಹಾರದಲ್ಲಿರುವ ದೀಪಕ್, ತುಮಕೂರು ಜೈಲಲ್ಲಿರುವ ರವಿಶಂಕರ್ ಇನ್ನೂ ಬಿಡುಗಡೆಯಾಗಿಲ್ಲ. ಜಾಮೀನು ಪ್ರಕ್ರಿಯೆ ಮುಗಿಯದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಈ ಮಧ್ಯೆ, ಬೆನ್ನು ನೋವಿಂದ ಬಳಲ್ತಿರುವ ನಟ ದರ್ಶನ್‌ಗೆ ಕೊನೆಗೂ ಮೆಡಿಕಲ್ ಬೆಡ್, ದಿಂಬು ಮತ್ತು ಚೇರ್‌ಗಳನ್ನು ಜೈಲಾಧಿಕಾರಿಗಳು ಒದಗಿಸಿದ್ದಾರೆ.