ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎ8 ಆರೋಪಿಯಾಗಿ ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ರವಿಶಂಕರ್‌ಗೆ ಜಾಮೀನು (Bail) ಮಂಜೂರಾಗಿ 6 ದಿನ ಕಳೆದರೂ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಡಿ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಡೆಸಿ 57ನೇ ಸಿಸಿಹೆಚ್ ನ್ಯಾಯಾಲಯ ಕಳೆದ ಸೋಮವಾರ ಆರೋಪಿ ರವಿಶಂಕರ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಅಲ್ಲದೇ 2 ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯನ್ನೂ ನ್ಯಾಯಾಲಯ ಕೇಳಿದೆ. ಆದರೆ ಶ್ಯೂರಿಟಿದಾರರು ಸಿಗದೇ ರವಿಶಂಕರ್ ಕುಟುಂಬ ಪರದಾಡುತ್ತಿದೆ. ಇದನ್ನೂ ಓದಿ: ಇಸ್ರೇಲ್ ಅಧ್ಯಕ್ಷ ನೆತನ್ಯಾಹು ನಿವಾಸದ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ
ಇಂದು ಬಹುತೇಕ ಶ್ಯೂರಿಟಿ ಪ್ರಕ್ರಿಯೆ ಮುಗಿಯುವ ಸಾಧ್ಯತೆಯಿದ್ದು, ಪ್ರಕ್ರಿಯೆ ಮುಗಿದ ಬಳಿಕ ತುಮಕೂರು ಜೈಲಾಧಿಕಾರಿಗೆ ಮೇಲ್ ಮೂಲಕ ಜಾಮೀನು ಪ್ರತಿ ತಲುಪಲಿದೆ. ಜಾಮೀನು ಪ್ರತಿ ಜೈಲಾಧಿಕಾರಿಗೆ ತಲುಪಿದ ಬಳಿಕ ಆರೋಪಿ ರವಿಶಂಕರ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಬಹುತೇಕ ಇಂದು (ಶನಿವಾರ) ಸಂಜೆ ಒಳಗೆ ಆರೋಪಿ ರವಿಶಂಕರ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಮುಡಾ ಫೈಲ್‌ಗಳನ್ನು ಸುಟ್ಟು ಹಾಕಿರುವ ಬೈರತಿ ಸುರೇಶ್‌ರನ್ನು ಕೂಡಲೇ ಬಂಧಿಸಿ – ಶೋಭಾ ಕರಂದ್ಲಾಜೆ