– ಮಂಗಳವಾರ ಬೆಳಗ್ಗೆ ರಿಲೀಸ್ ಸಾಧ್ಯತೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪ್ರತಿ ತಡವಾಗಿ ಜೈಲಧಿಕಾರಿಗಳ ಕೈಸೇರಿದ ಹಿನ್ನೆಲೆಯಲ್ಲಿ ಆರೋಪಿ ಪವಿತ್ರಾ ಗೌಡಗೆ ಸೋಮವಾರವೂ ಜೈಲೇ ಗತಿಯಾಗಿದೆ. ಮಂಗಳವಾರ ಜೈಲಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
Advertisement
ಕೇಂದ್ರ ಕಾರಾಗೃಹಕ್ಕೆ ಜಾಮೀನು ಪ್ರತಿ ತಡವಾಗಿ ತಲುಪಿದೆ. ಜಾಮೀನು ಪ್ರತಿಗಾಗಿ ಪವಿತ್ರಾ ಗೌಡ ಕಾದು ಕುಳಿತಿದ್ದರು. ಸಂಜೆ 6 ಗಂಟೆ ಒಳಗೆ ಬರಬೇಕಿದ್ದ ಜಾಮೀನು ಪ್ರತಿ ತಡವಾಗಿ ತಲುಪಿದೆ. ಪರಿಣಾಮ ಇಂದು ಕೂಡ ಪವಿತ್ರಾ ಗೌಡಗೆ ಜೈಲೂಟವೇ ಫಿಕ್ಸ್ ಆಗಿದೆ.
Advertisement
ಪವಿತ್ರಾ ಗೌಡ ನಾಳೆ ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ವಕೀಲರು ಕಾದು, ಬಿಡುಗಡೆ ಸಮಯ ನಾಳೆ ನಿಗದಿಯಾದ ಕಾರಣ ಪರಪ್ಪನ ಅಗ್ರಹಾರದಿಂದ ಹೊರಟರು.
Advertisement
ಇತರೆ ಆರೋಪಿಗಳಾದ ಪ್ರದೋಷ್, ಲಕ್ಷ್ಮಣ್ ಜಾಮೀನಿನ ಪ್ರಕ್ರಿಯೆಗಳನ್ನು ಮುಗಿಸಿದರು. ಕಲಬುರಗಿ ಜೈಲಿಂದ ನಾಗರಾಜ್ ರಿಲೀಸ್ ಆದರು. ಆದರೆ, ಆದೇಶ ಪ್ರತಿ ಜೈಲು ತಲುಪಲು ವಿಳಂಬವಾದ ಕಾರಣ ಉಳಿದ ಮೂವರು ನಾಳೆ ಬೆಳಗ್ಗೆ ರಿಲೀಸ್ ಆಗಲಿದ್ದಾರೆ. ಜಗದೀಶ್ ಮತ್ತು ಅನುಕುಮಾರ್‌ಗೆ ಶ್ಯೂರಿಟಿ ಹಾಕುವವರು ಸಿಗದ ಕಾರಣ ಅವರ ಬಿಡುಗಡೆ ಪ್ರಕ್ರಿಯೆ ವಿಳಂಬವಾಗಿದೆ. ಈ ಮಧ್ಯೆ, ಜೈಲಲ್ಲಿರುವ ಪವನ್, ನಂದೀಶ್ ಮತ್ತು ರಾಘವೇಂದ್ರ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.