– ದರ್ಶನ್, ಪವಿತ್ರಾ ಗಮನಹರಿಸದ್ದಕ್ಕೆ ಜಾಮೀನಿನ ಮೊರೆ ಹೋದ ರೇಣುಕಾ ಹಂತಕರು
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಒಟ್ಟಿಗೆ ಜೈಲು ಸೇರಿದ್ದ ದರ್ಶನ್ (Darshan) ಗ್ಯಾಂಗ್‍ನಲ್ಲಿ ಬಿರುಕು ಮೂಡಿದೆ. ಗ್ಯಾಂಗ್‍ನ ಒಬ್ಬೊಬ್ಬರೇ ಸದಸ್ಯರು ದರ್ಶನ್ ಮಾತು ಕೇಳಿ ನಾವು ತಪ್ಪು ಮಾಡಿದ್ದೇವೆ ಎಂದು ಕಣ್ಣೀರು ಹಾಕ್ತಿದ್ದಾರಂತೆ. ದರ್ಶನ್‍ರನ್ನ ಇನ್ನೂ ನಂಬಿದ್ರೆ ತಮಗೆ ಪರ್ಮನೆಂಟ್ ಜೈಲೇ ಗತಿ ಎಂದು ಅರಿತು, ದರ್ಶನ್‍ಗೂ ಮೊದಲು ಒಬ್ಬೊಬ್ಬರೇ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಸದಾ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದ `ಡಿ’ ಗ್ಯಾಂಗ್, ಚಾರ್ಚ್‍ಶೀಟ್ ಸಲ್ಲಿಕೆ ಆಗುವವರೆಗೂ ಜಾಮೀನಿನ ಮೊರೆ ಹೋಗದಿರಲು ಯೋಚಿಸಿತ್ತು. ಆದರೆ ಈಗ ಒಬ್ಬೊಬ್ಬರೇ ಜಾಮೀನಿನ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಕಿರಿಕ್ – ಊಟ ನೀಡದ್ದಕ್ಕೆ ಡಾಬಾ ಮಾಲೀಕನಿಗೆ ಚಾಕು ಇರಿತ
ಇಷ್ಟು ದಿನ ಸುಮ್ಮನಿದ್ದ ಪವಿತ್ರಾ ಗೌಡ (Pavithra Gowda) ಈಗ ಏಕಾಏಕಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾಳೆ. ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಂತೆ ಇತರ ಸದಸ್ಯರೂ ಕೂಡ ಪವಿತ್ರಾಳ ಹಾದಿಯನ್ನೇ ಹಿಡಿದಿದ್ದಾರೆ. ಈ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರೇಣುಕಾಸ್ವಾಮಿ ಹತ್ಯೆಯ ಆರೋಪವನ್ನು ಒಟ್ಟಿಗೆ ಹೊತ್ತು ಜೈಲಿಗೆ ಬಂದವರು, ಈಗ ಒಬ್ಬೊಬ್ಬರಾಗಿ ಜಾಮೀನು ಅರ್ಜಿ ಸಲ್ಲಿಸ್ತಾ ಇರೋದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಯಾರನ್ನು ನಂಬಿ ಈ ಕೃತ್ಯದಲ್ಲಿ ಭಾಗಿಯಾಗಿದ್ದರೋ, ಅವರ ಮೇಲೆ ನಂಬಿಕೆ ಕಳೆದುಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ 17 ಆರೋಪಿಗಳಲ್ಲಿ ಯಾರದ್ದು ಯಾವ ಪಾತ್ರ ಎಂದು ಇನ್ನಷ್ಟೇ ತಿಳಿಯಬೇಕಿದೆ. 17 ಜನರ ಪೈಕಿ ಹೆಚ್ಚಿನ ಸಂಖ್ಯೆ ಆರೋಪಿಗಳು ದರ್ಶನ್ ಕಾರಣಕ್ಕೆ ಅದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನೂ ಆರೋಪಿಗಳಿಗೂ ದರ್ಶನ್‍ಗೂ ಸಂಬಂಧವೇ ಇಲ್ಲ ಎನ್ನುವ ಮಾತೂ ಇದೆ. ಹಣಕ್ಕಾಗಿಯೋ ಅಥವಾ ಅಭಿಮಾನಕ್ಕಾಗಿ ಆರೋಪ ಹೊತ್ತು ಜೈಲಿಗೆ ಹೋದವರು ಈಗ ಪಶ್ಚಾತ್ತಾಪದ ಮಾತುಗಳನ್ನು ಆಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ದರ್ಶನ್ ಮತ್ತು ಪವಿತ್ರಾ ತಮ್ಮ ಪಾಡಿಗೆ ತಾವು ಆರಾಮಾಗಿ ಇದ್ದಾರೆ ಎಂಬ ಕಾರಣಕ್ಕೆ ಗ್ಯಾಂಗ್‍ನ ಬಹುತೇಕರು ಸಿಟ್ಟು ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರ ಹಾದಿ ಅವರಿಗೆ, ತಮ್ಮ ಹಾದಿ ತಮಗೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಕರಣದಲ್ಲಿ ಬಹುತೇಕರು ಬಡವರು, ದರ್ಶನ್ ಕುಟುಂಬ ತಮ್ಮ ಸಹಾಯಕ್ಕೆ ನಿಲ್ಲಲಿದೆ ಎಂದುಕೊಂಡವರಿಗೆ ಬಹುಶಃ ನಿರಾಸೆ ಆಗಿರಬಹುದು. ಹಾಗಾಗಿ ತಮ್ಮ ದಾರಿಯನ್ನು ತಾವು ನೋಡಿಕೊಂಡಿದ್ದಾರೆ. ಯಾರನ್ನೋ ನಂಬಿ ಜೈಲಲ್ಲಿ ಕೊಳೆಯೋದು ಬೇಡ ಎಂದು ನಿರ್ಧಾರ ಮಾಡಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾ ಗೌಡ ಜಾಮೀನು ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಅನುಕುಮಾರ್ ಕೂಡ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಗಳು ಇಂದು ಕೋರ್ಟ್ ಮುಂದೆ ಬರಲಿವೆ. ಇದನ್ನು ನೋಡಿಕೊಂಡು ಮತ್ತೆ ಇಬ್ಬರು ಅರ್ಜಿ ಸಲ್ಲಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮೀಡಿಯಾ, ಸಾರ್ವಜನಿಕರು ಬೈದ್ರೂ ನೀರಿನ ದರ ಏರಿಸಿಯೇ ಏರಿಸುತ್ತೇವೆ: ಡಿಕೆಶಿ