3,991 ಪುಟ, 231 ಸಾಕ್ಷಿ, 5 ವ್ಯಾಲ್ಯೂಂ – ದರ್ಶನ್ & ಗ್ಯಾಂಗ್ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ಏನಿದೆ?

Public TV
2 Min Read
darshan charge sheet

– ದರ್ಶನ್ ಎ1 ಅಲ್ಲ, ಎ2 ಆರೋಪಿ
– ‘ಡಿ’ ಗ್ಯಾಂಗ್ ಮೇಲೆ ಕಿಡ್ನ್ಯಾಪ್, ಕೊಲೆ, ಸಾಕ್ಷಿನಾಶ, ಒಳಸಂಚು, ದರೋಡೆ ಕೇಸ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ 3,991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಮಾರುತೇಶ್ ಪರಸುರಾಮ್ ಮೋಹಿತ್ ಅವರಿಗೆ ಒಂದು ಬಾಕ್ಸ್‌ನಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ.

police charge sheet

ಚಾರ್ಜ್‌ಶೀಟ್‌ನಲ್ಲಿ ಒಟ್ಟಾರೆ 231 ಸಾಕ್ಷಿಗಳ ಉಲ್ಲೇಖ ಮಾಡಲಾಗಿದೆ. 27 ಜನ ಸಾಕ್ಷಿ, ನ್ಯಾಯಾಧೀಶರ ಮುಂದೆ 164, ಪ್ರತ್ಯೇಕ್ಷ ಸಾಕ್ಷಿದಾರರು ಮೂರು, ಐ ವಿಟ್ನೆಸ್ 03, ಸಿಎಫ್‌ಎಸ್‌ಎಲ್ 8, 59 ಮಂದಿ ಪಂಚರ ಸಾಕ್ಷಿ, ಪೊಲೀಸರು – 56, ಸರ್ಕಾರಿ ಅಧಿಕಾರಿಗಳು – 8, ಎಫ್‌ಎಸ್‌ಎಲ್, ಸಿಎಫ್‌ಎಸ್‌ಎಲ್ 08, ಪ್ರತ್ಯಕ್ಷ ಸಾಕ್ಷಿಗಳು 03, ಪೊಲೀಸ್ರ ಎದುರು ಸಿಆರ್‌ಪಿಸಿ 161 ಅಡಿ ಹೇಳಿಕೆ ದಾಖಲಿಸಿದ ವ್ಯಕ್ತಿಗಳು 97, ನ್ಯಾಯಾಧೀಶರ ಮುಂದೆ 164 ಹೇಳಿಕೆಯನ್ನು 27 ಮಂದಿ ದಾಖಲಿಸಿದ್ದಾರೆ. ಇದನ್ನೂ ಓದಿ: Breaking | ರೇಣುಕಾಸ್ವಾಮಿ ಕೊಲೆ ಕೇಸ್‌ – ದರ್ಶನ್‌ & ಗ್ಯಾಂಗ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳನ್ನು ಯಥಾಸ್ಥಿತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಪವಿತ್ರಗೌಡ -ಎ1, ದರ್ಶನ್ (Darshan) ಎ-2, 14 ಜನರ ಮೇಲೆ ಕೊಲೆ ಆರೋಪ, 14 ಜನರು ಮೇಲೂ ಅಪಹರಣ ಮತ್ತು ಕೊಲೆ ಆರೋಪ, ಮೂರು ಆರೋಪಿಗಳ ಮೇಲೆ ಮಾತ್ರ ಸಾಕ್ಷ್ಯ ನಾಶ ಕೇಸ್ ದಾಖಲಿಸಿರುವ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ನಿಖಿಲ್ ನಾಯಕ್ ಈ ಮೂವರ ಮೇಲೆ ಮಾತ್ರ ಸಾಕ್ಷಿ ನಾಶ ಪ್ರಕರಣ ದಾಖಲಾಗಿದೆ.

PAVITHRA GOWDA RENUKASWAMY

ದರ್ಶನ್ & ಪವಿತ್ರಗೌಡ ಗ್ಯಾಂಗ್ ವಿರುದ್ಧ ಏನೇನು ಕೇಸ್?
ಕಿಡ್ನ್ಯಾಪ್, ಕೊಲೆ, ಸಾಕ್ಷಿ ನಾಶ, ಒಳಸಂಚು, ದರೋಡೆ, ಕಾನೂನುಬಾಹಿರ ಗುಂಪುಗಾರಿಕೆ ಪ್ರಕರಣ ದಾಖಲಾಗಿದೆ.

ಐದು ವ್ಯಾಲ್ಯುಂ ಅಲ್ಲಿ ಎಲ್ಲವನ್ನೂ ಪ್ರತ್ಯೇಕವಾಗಿ ಸಲ್ಲಿಕೆ:
ಮೊದಲ ವ್ಯಾಲ್ಯುಂ – ಪ್ರಕರಣದ ಸಂಕ್ಷಿಪ್ತ ವರದಿ
ಎರಡು – 17 ಜನ ಆರೋಪಿಗಳ ಸ್ವ ಇಚ್ಛಾ ಹೇಳಿಕೆ
ಮೂರು – ಸಾಕ್ಷಿಗಳು (ಪ್ರತ್ಯಕ್ಷ ಮತ್ತು ಪರೋಕ್ಷ ಸಾಕ್ಷಿಗಳು)
ನಾಲ್ಕು – ಮರಣೋತ್ತರ ಪರೀಕ್ಷೆ ಎಫ್‌ಎಸ್‌ಎಲ್ ರಿಪೋರ್ಟ್
ಐದು – ಎಫ್‌ಎಸ್‌ಎಲ್ & ಸಿಎಸ್‌ಎಫ್‌ಎಲ್ ಅನಾಲಿಸ್

ಶಿರಸ್ತೆದಾರ್ ಪರಿಶೀಲನೆ ನಡೆಸಿದ ಬಳಿಕ ಪೊಲೀಸರು ಸಿಸಿ ಮಾಡಲಿದ್ದಾರೆ. ಎಲ್ಲ ಪ್ರತಿಗಳು ಸಿಸಿಯಾದ ಬಳಿಕ ಆರೋಪಿಗಳಿಗೆ ಚಾರ್ಜ್ಶೀಟ್ ಪ್ರತಿ ನೀಡಲಾಗುವುದು. ಚಾರ್ಜ್ಶೀಟ್ ಪ್ರತಿ ಆರೋಪಿಗಳಿಗೆ ಸಿಕ್ಕ ಬಳಿಕ ನ್ಯಾಯಾಲಯ ಕಮಿಟಲ್ ಮಾಡಲಿದೆ. ಕಮಿಟಲ್ ಮಾಡಿ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಿದೆ.

Share This Article