ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸಾಕಷ್ಟು ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ. ದರ್ಶನ್ (Renukaswamy) ಅಂಡ್ ಗ್ಯಾಂಗ್ ಕೊಲೆ ಮಾಡಿದೆ ಅನ್ನೋದಕ್ಕೆ ಈಗಾಗಲೇ 180ಕ್ಕೂ ಹೆಚ್ಚು ಸಾಕ್ಷಿಗಳನ್ನು ಕಲೆ ಹಾಕಲಾಗಿತ್ತು. ಈಗ ಸಾಕ್ಷಿಗಳ 200 ಗಡಿ ದಾಟಿವೆ ಎಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿ ಇದುವರೆಗೂ 180 ಕ್ಕೂ ಹೆಚ್ಚು ವಸ್ತುಗಳ ಸಾಕ್ಷ್ಯವಾಗಿ ಸಂಗ್ರಹವಾಗಿದೆ. ಪ್ರತ್ಯಕ್ಷ ದರ್ಶಿಗಳು, ಪರೋಕ್ಷ ಸಾಕ್ಷಿಗಳ ಹೇಳಿಕೆ ಹೊರತುಪಡಿಸಿ 200 ಗಡಿಯಲ್ಲಿ ಸಾಕ್ಷಿಗಳ ಸಂಖ್ಯೆ ಏರಿಕೆಯಾಗಿದೆ. ಭೌತಿಕ, ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷಿಗಳ ಸಂಖ್ಯೆಯೇ 200ರ ಗಡಿ ತಲುಪಿದೆ.
Advertisement
ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು ಎಂಬ ಕಾರಣಕ್ಕೆ ಪೊಲೀಸರಿಂದ ಕಟ್ಟುನಿಟ್ಟಿನ ತನಿಖೆ ಮಾಡುತ್ತಿದ್ದಾರೆ. ಹಾಗಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಸಾಕ್ಷಿಗಳ ಸಂಖ್ಯೆ. ಇದು ಅತಿ ಪ್ರಾಶಸ್ತ್ಯದ ಪ್ರಕರಣವಾಗಿದ್ದರಿಂದ ಒಂದಲ್ಲ ಎರಡೆರಡು ಎಫ್ ಎಸ್ ಎಲ್ ವರದಿ ಪಡೆದುಕೊಳ್ಳುತ್ತಿದ್ದಾರಂತೆ ಪೊಲೀಸರು. ಈಗಾಗಲೇ ಕೆಲವು ವಸ್ತುಗಳನ್ನ ಬೆಂಗಳೂರು ಎಫ್ ಎಸ್ ಎಲ್ ನಲ್ಲಿ ಪರೀಕ್ಷೆ ಮಾಡುತ್ತಿದ್ದು, ಇನ್ನೂ ಕೆಲವು ವಸ್ತುಗಳನ್ನ ಹೈದರಾಬಾದ್ ಎಫ್ ಎಸ್ ಎಲ್ ಗೆ ಕಳುಹಿಸಿದ್ದಾರೆ ತನಿಖಾಧಿಕಾರಿಗಳು.
Advertisement
Advertisement
ಜೈವಿಕ ಸಾಕ್ಷಿಗಳಾದ ರಕ್ತದ ಕಲೆ, ಹೇರ್ ಸ್ಯಾಂಪಲ್ ಡಿಎನ್ ಎ ಇವುಗಳ ಪರೀಕ್ಷೆ ಒಂದು ಕಡೆಯಾದರೆ, ಇನ್ನೊಂದೆಡೆ ಮೊಬೈಲ್, ಸಿಸಿಟಿವಿ ದೃಶ್ಯ, ಸೇರಿ ತಾಂತ್ರಿಕ ಸಾಕ್ಷಿಗಳ ಪರಿಶೀಲನೆ ಮಾಡಲಾಗುತ್ತಿದೆ. ಮೊಬೈಲ್ ರಿಟ್ರೀವ್ ಹಾಗೂ ಡಿವಿಆರ್ ರಿಟ್ರೀವ್ ಮೇಲೆ ಹೆಚ್ಚು ಗಮನ ನೀಡಿದೆಯಂತೆ ತನಿಖಾ ತಂಡ. ಆರೋಪಿಗಳ ಬಂಧನಕ್ಕೆ ಮೊದಲೇ ಮೊಬೈಲ್ ನಲ್ಲಿದ್ದ ಸಾಕ್ಷ್ಯ ನಾಶ ಮಾಡಲಾಗಿದೆ. ಕಾಲ್ ಲಾಗ್, ಪೋಟೋ, ವಿಡೀಯೋಗಳು ಡಿಲೀಟ್ ಆಗಿವೆ. ಇವುಗಳನ್ನ ರಿಟ್ರೀವ್ ಮಾಡಿಸಲು ಸತತ ಪ್ರಯತ್ನ ಮಾಡಲಾಗುತ್ತಿದೆ. ಅದಷ್ಟೂ ಬೇಗ ವರದಿ ನೀಡುವಂತೆ ಆಯಾ ಎಫ್ ಎಸ್ ಎಲ್ ಅಧಿಕಾರಿಗಳಿಗೆ ಪೊಲೀಸರ ಮನವಿ ಮಾಡಿದ್ದಾರೆ. ಈ ಹಿಂದೆ ಡಿಕೆ ರವಿ ಪ್ರಕರಣದಲ್ಲಿ ಸಿಬಿಐ ಮೂರು ಮೂರು ಎಫ್ ಎಸ್ ಎಲ್ ನಿಂದ ಅಭಿಪ್ರಾಯ ಪಡೆದಿತ್ತು.