ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಾದ ಮೇಲೊಂದರಂತೆ ಸ್ಫೋಟಕ ಮಾಹಿತಿ ಹೊರಬರುತ್ತಿದೆ. ಚಿತ್ರದುರ್ಗದಲ್ಲಿ ಸ್ನೇಹಿತರಾಗಿದ್ದವರೇ ವಿಲನ್ಗಳಾದರು ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿಯನ್ನು ರಾಘವೇಂದ್ರ, ಜಗದೀಶ್, ಅನುಕುಮಾರ್ ಮತ್ತು ಚಾಲಕ ರವಿ ಕಾರಿಗೆ ಹತ್ತಿಸಿಕೊಂಡಿದ್ದಾರೆ. ಕಾರಿಗೆ ಹತ್ತಿಸಿಕೊಂಡಾಗ ರೇಣುಕಾಸ್ವಾಮಿಯನ್ನ ಖುಷಿ ಖುಷಿಯಾಗಿ ಮಾತಾಡಿಸಿದ್ದಾರೆ. ‘ನಿಂಗೆ ಬಾಸ್ನ ಮೀಟ್ ಮಾಡಿಸ್ತೀನಿ, ಜಸ್ಟ್ ಒಂದು ಸಾರಿ ಕೇಳಿ ಸೆಲ್ಫಿ ತಗೊಂಡು ವಾಪಸ್ ಬರೋದಷ್ಟೆ’ ಬಾ ಅಂತಾ ಕಾರು ಹತ್ತಿಸಿಕೊಂಡಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ – ಓರ್ವ ಯೋಧನಿಗೆ ಗಾಯ
Advertisement
Advertisement
ಹಾಗೆಯೇ ಬೆಂಗಳೂರಿನ ಕಡೆಗೆ ಹೊರಟ ಐವರು ತುಮಕೂರು ದಾಟುತ್ತಿದ್ದಂತೆ, ಡಾಬಾವೊಂದರಲ್ಲಿ ಎಣ್ಣೆ ತೆಗೆದುಕೊಂಡಿದ್ದಾರೆ. ವಿಚಿತ್ರ ಎಂದರೆ ಆ ಎಣ್ಣೆಗೆ ರೇಣುಕಾಸ್ವಾಮಿಯೇ ಕಾಸು ಕೊಟ್ಟಿದ್ದನಂತೆ. ಕಾರಿನಲ್ಲೇ ಎಣ್ಣೆ ಹೊಡೆದ ಜಗದೀಶ್ ಮತ್ತು ರಾಘವೇಂದ್ರ, ರೇಣುಕಾಸ್ವಾಮಿಯ ಮೇಲೆ ಗರಂ ಆಗಲು ಆರಂಭಿಸಿದ್ದಾರೆ.
Advertisement
ನೈಸ್ ರೋಡ್ ತಲುಪುತ್ತಿದ್ದಂತೆ ರೇಣುಕಾಸ್ವಾಮಿಯನ್ನು ಎಲ್ಲಿಗೆ ಕರ್ಕೊಂಡು ಬರಬೇಕು ಎನ್ನುವ ಲೊಕೇಷನ್ ಬಂದಿತ್ತು. ಮೊಬೈಲ್ಗೆ ಆರ್.ಆರ್ ನಗರ ಲೊಕೇಷನ್ ಸಿಗುತ್ತಿದ್ದಂತೆ ಸಲುಗೆಯಿಂದ ಮಾತಾಡುತ್ತಿದ್ದವರೇ ಅವಾಚ್ಯವಾಗಿ ನಿಂದಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಬೈಡೆನ್ ಹೊರಕ್ಕೆ – ಭಾರತ ಮೂಲದ ಕಮಲಾ ಹ್ಯಾರಿಸ್ಗೆ ಮಣೆ
Advertisement
ಪಟ್ಟಣಗೆರೆ ಶೆಡ್ ತಲುಪುತ್ತಿದ್ದಂತೆ, ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ನಟ ದರ್ಶನ್ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಅಷ್ಟೊತ್ತಿಗಾಗಲೇ ಸ್ಟೋನಿಬ್ರೂಕ್ನಲ್ಲಿ ಪಾರ್ಟಿ ಮಾಡುತ್ತಿದ್ದ ದರ್ಶನ್ ನೇರವಾಗಿ ಶೆಡ್ಗೆ ಬಂದು ಹಲ್ಲೆ ಮಾಡಿದ್ದಾರೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ.