ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣ (Renukaswamy case) ಸಂಬಂಧ ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ದರ್ಶನ್ ಸೇರಿ ನಾಲ್ವರಿಗೆ 13 ದಿನ ನ್ಯಾಯಾಂಗ ಬಂಧನವನ್ನು ಕೋರ್ಟ್ ವಿಧಿಸಿದೆ. ಈ ನಡುವೆ ರಿಮ್ಯಾಂಡ್ ಕಾಪಿಯಲ್ಲಿ ಸ್ಫೋಟಕ ಅಂಶ ಬಯಲಾಗಿದೆ.
ಆನ್‍ಲೈನ್‍ನಲ್ಲಿ ಎಲೆಕ್ಟ್ರಿಕ್ ಶಾಕ್ ಟಾರ್ಚ್ ಖರೀದಿ ಮಾಡಿರುವುದು ಬಯಲಾಗಿದೆ. ಆರೋಪಿ ಧನ್ ರಾಜ್ ಆನ್ ಲೈನ್ ಬುಕ್ ಮಾಡಿಕೊಂಡು ಎಲೆಕ್ಟ್ರಿಕ್ ಟಾರ್ಚ್ ತರಿಸಿಕೊಂಡಿದ್ದಾನೆ. ಈ ಬಗ್ಗೆ ಸಾಕ್ಷಿದಾರನ ಬಳಿ 164 ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: ತಲೆಕೆಡಿಸಿಕೊಳ್ಳಬೇಡಿ ಸರ್- ಜೈಲುಪಾಲಾದ ದರ್ಶನ್‌ಗೆ ಧೈರ್ಯ ಹೇಳಿದ ಅಭಿಮಾನಿ
ಪ್ರಕರಣದ ಎಲ್ಲಾ ಆರೋಪಿಗಳು ವೆಬ್ ಆ್ಯಪ್ (Web App) ಬಳಕೆ ಮಾಡಿದ್ದಾರೆ. ವೆಬ್ ಆ್ಯಪ್ ಮೂಲಕ ಆರೋಪಿತರು ಮಾತನಾಡಿದ್ದಾರೆ. ಬಳಿಕ ಎಲ್ಲಾ ಆರೋಪಿಗಳು ಸಿಮ್ ಬಿಸಾಡಿ ಹೊಸ ಸಿಮ್ ಖರೀದಿ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸಲು ಕೊಲೆಯಾದ ರೇಣುಕಾಸ್ವಾಮಿಯ ಮೊಬೈಲ್ ಫೋನ್ ಸುಮ್ಮನಹಳ್ಳಿ ಮೋರಿಯಲ್ಲಿ ಎಸೆದಿದ್ದಾರೆ. ಹಾಗಾಗಿ ರೇಣುಕಾ ಸ್ವಾಮಿಯ ಮೊಬೈಲ್ ನಲ್ಲಿದ್ದ ಡಾಟಾ ನಿಷ್ಕ್ರಿಯಗೊಂಡಿದೆ. ಈ ನಿಷ್ಕ್ರಿಯಗೊಂಡಿರೋ ಡಾಟಾ ಮರಳಿ ಪಡೆಯಲು ಮೃತನ ಹೆಸರಲ್ಲಿ ಹೊಸ ಸಿಮ್ ಕಾರ್ಡ್ ಪಡೆಯಲಾಗಿದೆ. ಸಂಬಂಧಪಟ್ಟ ಕಂಪನಿಯ ಸಿಮ್ ಕಾರ್ಡ್ ಪಡೆದು ಡಾಟಾ ರಿಟ್ರೀವ್‍ಗೆ ಕಳಿಸಲಾಗಿದೆ.
ಇಷ್ಟು ಮಾತ್ರವಲ್ಲದೇ ಆರೋಪಿಗಳು ಮೃತ ರೇಣುಕಾಸ್ವಾಮಿಯ ಬಟ್ಟೆ ಕೂಡ ಬದಲಾವಣೆ ಮಾಡಿದ್ದಾರೆ. ಈ ನಡುವೆ ಸಾಕ್ಷಿದಾರರಿಗೆ ಎ2 ದರ್ಶನ್ ಸಹಚರರು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಜೈಲಿನಲ್ಲಿರೋ ದರ್ಶನ್ ಅಭಿಮಾನಿ ಕೈದಿಗಳಿಂದ ಹಲ್ಲೆ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು ಮನವಿ ಮಾಡಿಕೊಳ್ಳಲಾಗಿದೆ.
ನಟ ದರ್ಶನ್ ವಿರುದ್ಧ 2011 ರಲ್ಲಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್‍ಗಳು ದಾಖಲಾಗಿದೆ. 498ಎ, 323, 355 506ಬಿ, 27 ಆರ್ಮ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿರೋದನ್ನ ಉಲ್ಲೇಖ ಮಾಡಲಾಗಿದೆ.