ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ನಡೆದ ಜೂನ್ 8ರ ಶನಿವಾರದಂದು ದರ್ಶನ್ ಮತ್ತು ಗ್ಯಾಂಗ್‌ನ ಸದಸ್ಯರು ಪಾರ್ಟಿ ಮಾಡಿದ್ದರು ಎನ್ನಲಾದ ಆರ್‌ಆರ್ ನಗರದ ಸ್ಟೋನಿ ಬ್ರೂಕ್ ಪಬ್‌ನಲ್ಲಿಂದು (Stonny Brook Pub) ಪೊಲೀಸರು ಮಹಜರು ನಡೆಸಿದರು.
ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು (Annapurneshwari Nagar Police) ನಟ ದರ್ಶನ್, ರೆಸ್ಟೊರೆಂಟ್ ಮಾಲೀಕ ವಿನಯ್, ಪ್ರದೂಶ್, ಪವನ್ ಆರೋಪಿಗಳನ್ನ ಕರೆತಂದು ಎಸಿಪಿ ಭರತ್ ರೆಡ್ಡಿ ಅವರ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಿದರು. ಸ್ಟಾರ್ ಕಾಮಿಡಿ ನಟ ಚಿಕ್ಕಣ್ಣ ಅವರೂ ಅಂದಿನ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಕಾರಣಕ್ಕೆ ಚಿಕ್ಕಣ್ಣ ಅವರನ್ನು ಕರೆತಂದು ಸ್ಥಳ ಮಹಜರು ನಡೆಸಲಾಯಿತು. ಇದನ್ನೂ ಓದಿ: ಕಳೆದ 3 ದಶಕಗಳಲ್ಲಿ ದೇಶ ಕಂಡ ಡೆಡ್ಲಿ ರೈಲು ದುರಂತಗಳ ಬಗ್ಗೆ ನಿಮಗೆ ಗೊತ್ತಾ?
ಪಬ್‌ನ ಮೂಲೆ ಮೂಲೆಯನ್ನು ಜಾಲಾಡಿದ ಪೊಲೀಸರು ಹಲವು ಮಾಹಿತಿಗಳನ್ನು ಕಲೆಹಾಕಿದರು. ದರ್ಶನ್ ಮತ್ತು ಗ್ಯಾಂಗ್ ಆರೋಪಿಗಳ ಜೊತೆಗೆ ಹಾಸ್ಯನಟ ಚಿಕ್ಕಣ್ಣ (Chikkanna) ರಿಂದಲೂ ಮಾಹಿತಿ ಕಲೆಹಾಕಿದರು. ಮೂಲಗಳು ಹೇಳುವಂತೆ ದರ್ಶನ್ ಮತ್ತು ಗ್ಯಾಗ್ ಅವರನ್ನು ಪೊಲೀಸರು ಸ್ಟೋನಿ ಬ್ರೂಕ್ ಪಬ್‌ಗೆ ಕರೆತರುವ 2 ಗಂಟೆಗೂ ಮುನ್ನವೇ ಪೊಲೀಸರು ಚಿಕ್ಕಣ್ಣ ಅವರನ್ನ ಕರೆತಂದು ಸ್ಥಳ ಮಹಜರು ನಡೆಸಿದ್ದರು ಎಂದು ತಿಳುದುಬಂದಿದೆ. ಸ್ಥಳ ಮಹಜರು ವೇಳೆ ಕೆಂಗೇರಿ ಮತ್ತು ಆರ್‌ಆರ್ ನಗರ ಪೊಲೀಸರಿಂದ ಪಬ್ ಸುತ್ತಲೂ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: ಸದ್ಯಕ್ಕಿನ್ನು ಆರೋಪಿಯಷ್ಟೇ, ಅಪರಾಧಿಯಾಗಿಲ್ಲ- ಅನುಷಾ ರೈ ರಿಯಾಕ್ಷನ್
ಚಿಕ್ಕಣ್ಣಗ್ಗೆ ಏಕೆ ನೋಟಿಸ್?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ದರ್ಶನ್ (Darshan) ಗ್ಯಾಂಗ್ ಬಂಧನವಾದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಸ್ಯಾಂಡಲ್‌ವುಡ್ (Sandalwood) ಖ್ಯಾತ ಹಾಸ್ಯನಟ ಚಿಕ್ಕಣ್ಣಗೆ (Chikkanna) ಪೊಲೀಸರು ನೋಟಿಸ್ ನೀಡಿದ್ದರು. ರೇಣುಕಾಸ್ವಾಮಿ ಕೊಲೆ ನಡೆದ ಜೂನ್ 8 ಶನಿವಾರದಂದು ದರ್ಶನ್ ಮತ್ತು ಗ್ಯಾಂಗ್ ಸದಸ್ಯರು ಆರ್‌ಆರ್ ನಗರದ ಸ್ಟೋನಿಬ್ರೂಕ್ ಪಬ್‌ನಲ್ಲಿ ಮಧ್ಯಾಹ್ನದಿಂದ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಚಿಕ್ಕಣ್ಣ ಭಾಗಿಯಾಗಿದ್ದರು ಎನ್ನಲಾಗಿತ್ತು. ಸಂಜೆ ವೇಳೆಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ದರ್ಶನ್ ಹೊರಟಿದ್ದರು. ರೇಣುಕಾಸ್ವಾಮಿ ಕೊಲೆಯಾದ ದಿನವೇ ದರ್ಶನ್ ಜೊತೆ ಪಾರ್ಟಿ ಮಾಡಿದ್ದರು ಅನ್ನೋ ಮಾಹಿತಿ ಕೇಳಿಬಂದಿದ್ದರಿಂದ ಪೊಲೀಸರು ತುರ್ತು ವಿಚಾರಣೆಗೆ ಹಾಜರಾಗುವಂತೆ ಚಿಕ್ಕಣ್ಣಗೆ ನೋಟಿಸ್ ನೀಡಿದ್ದರು.