ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ (Renukaswamy Case) ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಹಾಗೂ ಗ್ಯಾಂಗ್ ಜೈಲು ಸೇರಿದೆ. ಇತ್ತ ಜೈಲೂಟ ಒಗ್ಗದೆ ದರ್ಶನ್ ಪರದಾಡುತ್ತಿದ್ದರೆ, ಅತ್ತ ಐಷಾರಾಮಿ ಜೀವನ ನಡೆಸಿದ್ದ ಪವಿತ್ರಾ ಗೌಡ ನರಕಯಾತನೆ ಅನುಭವಿಸುತ್ತಿದ್ದಾರೆ.
ಹೌದು. ಸದಾ ಲವಲವಿಕೆಯಿಂದ ಇದ್ದ ಪವಿತ್ರಾ ಗೌಡ (Pavithra Gowda) ಜೈಲಿನಲ್ಲಿ ಮಂಕಾಗಿ ಕುಳಿತಿದ್ದಾರೆ. ರಾತ್ರಿ ನೀಡಿದ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆ ಒಲ್ಲದ ಮನಸ್ಸಿನಿಂದ ಸೇವನೆ ಮಾಡಿದ್ದಾರೆ. ಪವಿತ್ರಾ ಗೌಡಗೆ ಉಪ್ಪು ಖಾರ ರುಚಿ ಇಲ್ಲದ ಅರೆಬೆಂದ ಊಟ ಸೇರುತ್ತಿಲ್ಲ.
ಚಾಪೆ ಮೇಲೆ ನಿದ್ರಿಸಲಾಗದೆ ಚಡಪಡಿಸಿದ್ದಾರೆ. ಸೊಳ್ಳೆಗಳ ಕಾಟದಿಂದ ಮತ್ತಷ್ಟು ಹೌರಾಣಾದರು. ಸಹ ಕೈದಿಗಳ ಜೊತೆ ಸಹ ಬೇರೆಯದೆ ಮೌನಕ್ಕೆ ಶರಣಾಗಿದ್ದಾರೆ. ರಾತ್ರಿ ಬೇಗ ಮಲಗಿದರೂ ಪದೇ ಪದೇ ಎಚ್ಚರಗೊಳ್ಳುತ್ತಿದ್ದರು. ಮುಂಜಾನೆ ಬೇಗ ಎದ್ದು ಕಾಫಿ ಕುಡಿದರು. ಬಳಿಕ ಪೇಪರ್ ಓದಿದ್ದಾರೆ. ಇದನ್ನೂ ಓದಿ: ಊಟ ಸೇರ್ತಿಲ್ಲ, ನಿದ್ದೆ ಬರ್ತಿಲ್ಲ- ಜೈಲಿನಲ್ಲಿ ‘ಯಜಮಾನ’ ಪರದಾಟ