ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ!

Public TV
1 Min Read
DARSHAN 5

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣ (Renukaswamy Case) ಸಂಬಂಧ ಸೆಂಟ್ರಲ್ ಜೈಲು ಪರಪ್ಪನ ಅಗ್ರಹಾರದಲ್ಲಿರೋ ಸ್ಯಾಂಡಲ್‍ವುಡ್ ನಟ ದರ್ಶನ್‍ಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ಬ್ಯಾರಕ್ ನಂ.3 ರ ಭದ್ರತಾ ಕೊಠಡಿಯಲ್ಲಿರೋ ದರ್ಶನ್ ಗೆ (Challenging Star Darshan) ಜೈಲಿನ ಇನ್ಸ್ ಪೆಕ್ಟರ್ ಮತ್ತು ಮೂವರು ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ದರ್ಶನ್ ನೋಡಲು ಜೈಲಿನ ಕೈದಿಗಳು ಬರವ ಸಾಧ್ಯತೆಗಳಿವೆ. ಹೀಗಾಗಿ ಬ್ಯಾರಕ್ 3 ಬಳಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ ಎನ್ನಲಾಗಿದೆ.

ಸೋಮವಾರ ದರ್ಶನ್ ಭೇಟಿಗೆ ಬಂದಿದ್ದ ಪತ್ನಿ ಹಾಗೂ ಮಗನ ಜೊತೆ 15 ನಿಮಿಷ ಭೇಟಿಗೆ ಅವಕಾಶ ನೀಡಲಾಗಿತ್ತು. ಇದೀಗ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ. ದರ್ಶನ್ ಯಾರ ಸಂಪರ್ಕಕ್ಕೂ ಸಿಗದಂತೆ ಜೈಲಾಧಿಕಾರಿಗಳು ಭದ್ರತೆ ವಹಿಸಿದ್ದಾರೆ. ಊಟ, ತಿಂಡಿ ಅಂತಾ ಯಾವುದೇ ಸಮಯದಲ್ಲೂ ಜೈಲಿನ ಕೈದಿಗಳು ದರ್ಶನ್ ಬ್ಯಾರಕ್ ಬಳಿ ಬರದಂತೆ ತಡೆ ನೀಡಲಾಗುತ್ತಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದ ಚಿತ್ರಾಲ್ ರಂಗಸ್ವಾಮಿ

VIJAYALAKSHMI DARSHAN

ಇನ್ನು ಬ್ಯಾರಕ್ ನಲ್ಲಿ ತನ್ನ ಜೊತೆಗಿದ್ದವರ ಜೊತೆಯೇ ದರ್ಶನ್ ಸರಿಯಾಗಿ ಮಾತನಾಡುತ್ತಿಲ್ಲ. ಮಾನಸಿಕವಾಗಿ ಕುಗ್ಗಿರೋ ನಟ ಭದ್ರತಾ ಕೊಠಡಿಯಲ್ಲಿ ಮೌನಕ್ಕೆ ಜಾರಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

Share This Article