ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಜೈಲು ಸೇರಿರುವ ನಟ ದರ್ಶನ್‍ರನ್ನು (Darshan) ಪರಪ್ಪನ ಅಗ್ರಹಾರ ಜೈಲಿಂದ ಶಿಫ್ಟ್ ಮಾಡಲು ಜೈಲಾಧಿಕಾರಿಗಳಿಂದ ಒತ್ತಡ ಬರುತ್ತಿದೆ. ಹೀಗಾಗಿಯೇ ಕೋರ್ಟ್ ಮೊರೆ ಹೋಗಲು ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ದರ್ಶನ್‍ರನ್ನು ಪರಪ್ಪನ ಅಗ್ರಹಾರದಲ್ಲೇ ಉಳಿಸಲು ವಕೀಲರು ಪ್ರಯತ್ನ ಮಾಡುತ್ತಿದ್ದಾರೆ. ದರ್ಶನ್ ಅರೆಸ್ಟ್ ಆದ ದಿನವೇ ವಕೀಲರು ದರ್ಶನ್ ಪರಪ್ಪನ ಅಗ್ರಹಾರ ಜೈಲಿಂದ ಬೇರೆ ಕಡೆ ಶಿಫ್ಟ್ ಮಾಡಬಾರದು ಎಂದು ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
ಟ್ರಯಲ್ ಶುರುವಾದರೆ ಬೇರೆ ಜಿಲ್ಲೆಗಳಿಂದ ಕರೆದುಕೊಂಡು ಬರುವುದು ಕಷ್ಟವಾಗಲಿದೆ. ಹೀಗಾಗಿ ಬೇರೆ ಜೈಲಿಗೆ ಶಿಫ್ಟ್ ಮಾಡಬಾರದು ಎಂದು ಕೋರ್ಟ್‍ಗೆ ವಕೀಲ ಸುನೀಲ್ ಅರ್ಜಿ ಸಲ್ಲಿಸಿದ್ದಾರೆ. ಇಂದು ಎಸ್‍ಪಿಪಿ ಮುಖಾಂತರ ಜೈಲಾಧಿಕಾರಿಗಳು ಅರ್ಜಿ ಸಲ್ಲಿಕೆ ಮಾಡ್ತಾರಾ ವಕೀಲರು ಕಾದು ನೋಡಬೇಕಿದೆ. ಹಾಗೇನಾದ್ರೂ ಅರ್ಜಿ ಸಲ್ಲಿಕೆ ಮಾಡಿದ್ರೆ ನಮ್ಮ ವಾದವನ್ನು ಪರಿಗಣಿಸಿ ಅಂತಾ ಮನವಿ ಮಾಡುವ ಸಾಧ್ಯತೆ ಇದೆ. ಬೇರೆ ಜೈಲಿಗೆ ಶಿಫ್ಟ್ ಮಾಡಿದ್ರೆ ಓಡಾಟ ಕಷ್ಟವಾಗುತ್ತೆ. ಟ್ರಯಲ್ ಇದ್ದಾಗೆಲ್ಲಾ ಕರೆತರೋದು ಕಷ್ಟವಾಗುತ್ತೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಲ್ಲೇ ಉಳಿಸುವಂತೆ ವಾದ ಮಂಡನೆ ಸಾಧ್ಯತೆ ಇದೆ. ಇದನ್ನೂ ಓದಿ: ಮತ್ತೆ `ಕುಂಟು’ನೆಪ – ದರ್ಶನ್ ಬೆನ್ನುನೋವಿಗೆ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ!
ಪರಪ್ಪನ ಅಗ್ರಹಾರ ಜೈಲಿಗೆ ಇಂದು (ಆ.18) ಜೈಲು ಎಡಿಜಿಪಿ ಬಿ.ದಯಾನಂದ್ ಭೇಟಿ ನೀಡಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್‍ನಲ್ಲಿ ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಪವಿತ್ರಗೌಡ ಹೋದ ಮೇಲೆ ಮೊದಲ ಬಾರಿಗೆ ದಯಾನಂದ್ ಭೇಟಿ ನೀಡುತ್ತಿದ್ದಾರೆ.
ಈ ಹಿಂದೆ ದರ್ಶನ್ ಜೈಲಿನಲ್ಲಿರುವ ರೌಡಿಗಳ ಜೊತೆ ಸಂಪರ್ಕ ಪಡೆದು ರಾಜನಂತೆ ಇದ್ದ ವಿಡಿಯೋ ವೈರಲ್ ಆಗಿತ್ತು. ಮಾದ್ಯಮಗಳಲ್ಲಿ ದರ್ಶನ್‍ಗೆ ಜೈಲಿನಲ್ಲಿ ರಾಜಾಥಿತ್ಯ ನೀಡುತ್ತಿದ್ದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಬಳಿಕ ದರ್ಶನ್‍ರನ್ನು ಬಳ್ಳಾರಿ ಜೈಲಿಗೆ ಕಳಿಸಲಾಗಿತ್ತು. ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ಜಾಮೀನು ಪಡೆದು ಹೊರಗಡೆ ಬಂದಿದ್ದರು. ಸುಪ್ರೀಕೋರ್ಟ್‍ನಲ್ಲಿ ಆರೋಪಿಗಳ ಬೇಲ್ ಕ್ಯಾನ್ಸಲ್ ಆದ ಕಾರಣ ಮತ್ತೆ ಏಳು ಜನರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ. ಮತ್ತೆ ಜೈಲಿನಲ್ಲಿ ದರ್ಶನ್ ತನ್ನ ಪ್ರಭಾವ ಬಳಸಿ ತನಗೆ ಬೇಕಾಗುವ ರೀತಿ ವ್ಯವಸ್ಥೆ ಮಾಡಿಕೊಳ್ಳ ಬಹುದೆಂದು ದಯಾನಂದ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ಮಾಡಿ ಖಡಕ್ ಎಚ್ಚರಿಕೆ ನೀಡಲಿದ್ದಾರೆಂದು ತಿಳಿದು ಬಂದಿದೆ.
ರಾಜಾತಿಥ್ಯದ ವಿಚಾರವಾಗಿ ಸುಪ್ರೀಂಕೋರ್ಟ್ ಚಾಟಿ ಬೀಸಿರುವುದರಿಂದ ಜೈಲು ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ದರ್ಶನ್ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಜೈಲಿನಲ್ಲಿ ಅವರಿಗೆ ಯಾವುದೇ ವಿಐಪಿ ಟ್ರೀಟ್‍ಮೆಂಟ್ ಸಿಗುತ್ತಿಲ್ಲ. ದರ್ಶನ್ ಮಾತ್ರವಲ್ಲದೇ ಅವರ ಪೂರ್ತಿ ಗ್ಯಾಂಗ್ ಮೇಲೆ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಹದ್ದಿನ ಕಣ್ಣು ಇಟ್ಟಿದ್ದಾರೆ. ದಿನದ 24 ಗಂಟೆ ಕೂಡ ನಾಲ್ಕು ಗೋಡೆ ಮಧ್ಯೆಯೇ ಕಾಲ ಕಳೆಯಬೇಕಿದೆ. ಕಾರಿಡಾರ್‍ನಲ್ಲಿ ವಾಕ್ ಮಾಡಲು ಕೂಡ ಅನುಮತಿ ಇಲ್ಲ. ದರ್ಶನ್ ಇರುವ ಕೊಠಡಿಗೆ ಸಿಬ್ಬಂದಿ ಊಟ, ತಿಂಡಿ ಪೂರೈಸುತ್ತಿದ್ದಾರೆ. ದರ್ಶನ್ ಇರುವ ಕೋಣೆಯಲ್ಲಿ ಟಿವಿ ಕೂಡ ಇಲ್ಲ. ಖಾಲಿ ಕೂರಬೇಕು, ಇಲ್ಲವೇ ಪುಸ್ತಕ ಓದಲು ಮಾತ್ರ ಅವಕಾಶ ಇದೆ. ಜೊತೆಗೆ ಕರ್ತವ್ಯ ನಿರತ ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮೆರಾ ಹಾಕಿಕೊಳ್ಳಲು ಸೂಚನೆ ನೀಡಲಾಗಿದೆ. ಸಿಬ್ಬಂದಿ ಕೂಡ ದರ್ಶನ್ ಬಳಿ ಮಾತಾಡುವ ಹಾಗಿಲ್ಲ. ಜೈಲಿನಲ್ಲಿ ದರ್ಶನ್‍ಗೆ ಯಾರ ಭೇಟಿಗೂ ಅವಕಾಶ ನೀಡುತ್ತಿಲ್ಲ. ಇದನ್ನೂ ಓದಿ: ದರ್ಶನ ಪರ ಅಖಾಡಕ್ಕಿಳಿದ ಪತ್ನಿ ವಿಜಯಲಕ್ಷ್ಮಿ – ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು?