ಬೆಂಗಳೂರು: ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣಕ್ಕೆ ಇದೀಗ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಪ್ರಕರಣದ ಒಟ್ಟು 15 ಮಂದಿ ಪಾತಕಿಗಳು ಅನ್ನಪೂರ್ಣೇಶವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಪೊಲೀಸರ ವಿಚರಣೆಯಲ್ಲಿ ಒಬ್ಬೊಬ್ಬರು ಒಂದೊಂದು ಶಾಕಿಂಗ್ ವಿಚಾರಗಳನ್ನು ಬಾಯಿ ಬಿಡುತ್ತಿದ್ದಾರೆ. ಅಂತೆಯೇ ಇದೀಗ ಎ15 ಆರೋಪಿ ಕಾರ್ತಿಕ್ (Karthik @ Kappe) ಸ್ವಲ್ಪ ಮಾನವೀಯತೆ ತೋರಿರುವುದು ಬಯಲಾಗಿದೆ.
Advertisement
ಕ್ರೌರ್ಯದ ಬಳಿಕ ರೇಣುಕಾಸ್ವಾಮಿ ಮೃತಪಟ್ಟಿದ್ದು, ನಂತರ ಶವ ಸಾಗಿಸಲು ಆರೋಪಿಗಳು ಪ್ಲಾನ್ ಮಾಡಿದ್ದಾರೆ. ಆರೋಪಿಗಳಾದ ನಿಖಿಲ್, ಕಾರ್ತಿಕ್, ಕೇಶವಮೂರ್ತಿ ಸುಮನಹಳ್ಳಿ ಮೋರಿಗೆ ರೇಣುಕಾಸ್ವಾಮಿ ಹೆಣ ಎಸೆಯಲು ಹೋಗಿದ್ದಾರೆ. ಇದನ್ನೂ ಓದಿ: ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ
Advertisement
Advertisement
ಮೋರಿ ಒಳಗೆ ಬಿಸಾಡೋಣ ಕೊಚ್ಚಿಕೊಂಡು ಹೋಗುತ್ತೆ. ಶವ ಸಿಕ್ಕುವ ಅಷ್ಟರಲ್ಲಿ ಅದೆಷ್ಟು ದಿನ ಆಗುತ್ತೋ ಗೊತ್ತಿಲ್ಲ. ಹೀಗಾಗಿ ಮೋರಿ ಒಳಗೆ ಬಿಸಾಡೋಣ ಎಂದು ನಿಖಿಲ್ ಹಾಗೂ ಕೇಶವಮೂರ್ತಿ ಹೇಳಿದ್ದಾರೆ. ಆದರೆ ಕಾರ್ತಿಕ್ ಇದಕ್ಕೆ ವಿರೋಧ ಮಾಡಿದ್ದನು. ಹೆಂಗೂ ಪೊಲೀಸರ ಮುಂದೆ ಸರೆಂಡರ್ ಆಗ್ತಿವಲ್ಲ. ಸ್ವಾಮಿ ಮನೆಯವರಿಗಾದ್ರೂ ಶವ ಸಿಕ್ಕಲಿ. ಚರಂಡಿಗೆ ಬೇಡ.. ಮೇಲೆ ಇಟ್ಟು ಹೋಗೋಣ ಎಂದು ಕಾರ್ತಿಕ್ ಹೇಳಿದ್ದಾನೆ. ಕೊನೆಗೆ ಶವವನ್ನು ಕಸದ ರಾಶಿ ಮಧ್ಯೆ ಬಿಸಾಡಿ ಹೋಗಿದ್ದರು.
Advertisement
ಇತ್ತ ಹೆಣ ಸಿಗುತ್ತಿದ್ದಂತೆಯೇ ಪೊಲೀಸರು ತನಿಖೆಗಿಳಿದಿದ್ದು, ಪ್ರಕರಣದ ಸಂಪೂರ್ಣ ವಿಚಾರ ಬಟಾಬಯಲಾಗಿದೆ. ಕೂಡಲೇ ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿಗೆ ತೆರಳಿ ದರ್ಶನ್ (Darshan) ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಇತ್ತ ಗೆಳತಿ ಪವಿತ್ರಾ ಗೌಡಳನ್ನು (Pavithra Gowda) ಕೂಡ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ 15 ಮಂದಿಯನ್ನು ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.