ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಇಂದು ಜೈಲು ಪಾಲಾದ ಅಮ್ಮನನ್ನು ಕಂಡು ಪವಿತ್ರಾ ಗೌಡ ಮಗಳು ಕಣ್ಣೀರು ಹಾಕಿದ್ದಾಳೆ.
ಹೌದು. ಕೊಲೆ ಪ್ರಕರಣ ಸಂಬಂಧ ಇಂದು ಮಧ್ಯಾಹ್ನದ ಬಳಿಕ ಆರೋಪಿಗಳನ್ನು ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್, ದರ್ಶನ್ ಸಹಿತ 4 ಮಂದಿಯನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿದರೆ, ಪವಿತ್ರಾ ಗೌಡ ಸಹಿತ 9 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇತ್ತ ಕೋರ್ಟ್ ಹೊರಗಡೆ ಪವಿತ್ರಾ ಗೌಡ ತಾಯಿ ಹಾಗೂ ಮಗಳು ಕಾಯುತ್ತಾ ನಿಂತಿದ್ದರು. ಪವಿತ್ರಾ ಗೌಡ (Pavithra Gowda) ಕೋರ್ಟ್‌ನಿಂದ ಹೊರ ಬಂದು ಪೊಲೀಸ್ ವ್ಯಾನ್ ಹತ್ತುತ್ತಿದ್ದಂತೆಯೇ ಇಬ್ಬರು ಕೂಡ ಪವಿತ್ರಾ ಗೌಡ ಅವರನ್ನು ಕಂಡು ಕಣ್ಣೀರು ಹಾಕಿದ್ದಾರೆ. ಇನ್ನು ಪವಿತ್ರಾ ಗೌಡ ಕೂಡ ಇಬ್ಬರನ್ನು ನೋಡಿ ಗದ್ಗದಿತರಾದರು. ಬಳಿಕ ಅಮ್ಮ ಹಾಗೂ ಮಗಳನ್ನು ಸಮಾಧಾನ ಪಡಿಸಿದ್ದಾರೆ.
ಕಣ್ಣೀರು ಹಾಕುತ್ತಾ ಇದ್ದ ಮಗಳಿಗೆ, ಏನೂ ಆಗಲ್ಲ.. ಸುಮ್ಮನೇ ಇರು ಸುಮ್ಮನೆ ಇರು ಎಂದು ಪವಿತ್ರಾ ಗೌಡ ಸಮಾಧಾನ ಮಾಡಿದ್ದಾರೆ. ಆದರೆ ಹೆಚ್ಚಿನ ಮಾತುಕತೆಗೆ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಕೂಡಲೇ ವ್ಯಾನ್ ಹೊರಟಿದ್ದು, ಅಳುತ್ತಲೇ ತಲೆ ತಗ್ಗಿಸಿಕೊಂಡು ಪವಿತ್ರಾ ಪರಪ್ಪನ ಅಗ್ರಹಾರ ಜೈಲಿನತ್ತ ತೆರಳಿದರು. ಇದನ್ನೂ ಓದಿ: ದರ್ಶನ್ ಪೊಲೀಸ್ ಕಸ್ಟಡಿಗೆ, ಪವಿತ್ರಾ ಗೌಡ ಜೈಲಿಗೆ