ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy case) ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಸೋಮವಾರ (ಸೆ.8) ಮುಕ್ತಾಯವಾಗಲಿದೆ. ದರ್ಶನ್ ಸೇರಿ ಎಲ್ಲಾ 17 ಆರೋಪಿಗಳು ವಿವಿಧ ಜೈಲಲ್ಲಿರುವ ಕಾರಣ ಎಲ್ಲರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ವಿಚಾರಣೆ ಬಳಿಕ ನಟ ದರ್ಶನ್ (Darshan) ಜಾಮೀನು ಕೋರಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement
ಬಳ್ಳಾರಿ ಜೈಲಲ್ಲಿರುವ (bellary Jail) ನಟ ದರ್ಶನ್ ಫಿಟ್ನೆಸ್ ಮೇಂಟೇನ್ ಮಾಡಲು ಒದ್ದಾಡ್ತಿದ್ದಾರೆ. ಜಿಮ್‌ನಲ್ಲಿ ಬೆವರು ಹರಿಸಲು ಅವಕಾಶ ಸಿಗದ ಕಾರಣ ಊಟದ ಮೆನು ಬದಲಿಸಿದ್ದಾರೆ. ಅನ್ನ ಬಿಟ್ಟು ಚಪಾತಿ, ಮುದ್ದೆ ಊಟಕ್ಕೆ ಮೊರೆ ಹೋಗಿದ್ದಾರೆ. ಜೊತೆಗೆ ವಿಟಮಿನ್ ಟ್ಯಾಬ್ಲೆಟ್‌ಗಳನ್ನು ದರ್ಶನ್ ಸೇವಿಸ್ತಿದ್ದಾರೆ. ಇನ್ನು, ದರ್ಶನ್ ಮಾತ್ರವಲ್ಲ ಡಿ ಗ್ಯಾಂಗ್‌ನ ಉಳಿದ ಸದಸ್ಯರು ಜಾಮೀನು ಪಡೆಯಲು ಕಸರತ್ತು ನಡೆಸಿದ್ದಾರೆ. ಎ1 ಪವಿತ್ರಾಗೌಡ, ಎ7 ಅನುಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ನಾಳೆ ಇಬ್ಬರ ಅರ್ಜಿಗಳು ವಿಚಾರಣೆಗೆ ಬರುವ ಸಂಭವ ಇದೆ.
Advertisement
Advertisement
ಈಗಾಗಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಜೊತೆ ಜಾಮೀನು ಸರ್ಜಿ ಸಲ್ಲಿಕೆ ಮಾಡುವ ಕುರಿತು ದರ್ಶನ್ ಚರ್ಚೆ ಮಾಡಿದ್ದಾರೆ. ಆದ್ದರಿಂದ ಸೆ.9 ಅಥವಾ ಸೆ.10ರಂದು ಎಸಿಎಂಎಂ ಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಇಂದು ರಾತ್ರಿಯೇ ಡಿಸಿಎಂ ಡಿಕೆಶಿ ಅಮೆರಿಕ ಪ್ರವಾಸ – ಕಮಲಾ ಹ್ಯಾರಿಸ್‌ರಿಂದ ಬಂತು ವಿಶೇಷ ಆಹ್ವಾನ?
Advertisement
ಅನುಕುಮಾರ್ ಅರ್ಜಿಯೂ ವಿಚಾರಣೆ:
ಇನ್ನೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ7 ಆರೋಪಿಯಾಗಿರುವ ಅನುಕುಮಾರ್ ಅವರ ಅರ್ಜಿ ವಿಚಾರಣೆಯೂ ಸೋಮವಾರ ಹೈಕೋರ್ಟ್‌ನಲ್ಲಿ ನಡೆಯಲಿದೆ. ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ವಜಾ ಬಳಿಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸೋಮವಾರ ವಿಚಾರಣೆ ನಡೆಯಲಿದೆ. ಅನುಕುಮಾರ್ ಪರ ವಕೀಲ ರಾಮ್ ಸಿಂಗ್ ಅರ್ಜಿ ಸಲ್ಲಿಕೆ ಮಾಡಿದ್ದರು. ಇದನ್ನೂ ಓದಿ: ಕ್ರಿಶ್ಚಿಯನ್ ಧರ್ಮದ ಉನ್ನತೀಕರಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ – 5 ಕೋಟಿ ಅನುದಾನ ಘೋಷಿಸಿದ ಸಿಎಂ