ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ತನಿಖೆ ಪೂರ್ಣಗೊಂಡಿದ್ದು ಇಂದು ಅಥವಾ ನಾಳೆ ಚಾರ್ಜ್‌ಶೀಟ್ (Charge Sheet) ಕೋರ್ಟ್‌ಗೆ ಸಲ್ಲಿಕೆಯಾಗುವ ಸಾಧ್ಯತೆಯಿದೆ.
ಎಸ್‌ಐಟಿ ಪೊಲೀಸರು ಚಾರ್ಜ್‌ಶೀಟ್ ಪೂರ್ಣಗೊಳಿಸುತ್ತಿದ್ದಾರೆ. ಆರೋಪ ಪಟ್ಟಿಯನ್ನು 2-3 ಬಾರಿ ಕಾನೂನು ತಜ್ಞರಿಂದ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಇಂದು ಸಿದ್ದರಾಮಯ್ಯಗೆ ಬಿಗ್ ಡೇ – ಕಾರ್ಯಕ್ರಮಗಳನ್ನು ರಿಸರ್ವ್ ಮಾಡಿದ ಸಿಎಂ
Advertisement
Advertisement
ಹೆಡ್ ಆಫ್ ದಿ ಚಾರ್ಜ್‌ಶೀಟ್ ಹೇಗಿರಬೇಕು? ಪ್ರಕರಣದಲ್ಲಿನ ಸಾಕ್ಷಿಗಳ ಹೇಳಿಕೆ ಎಲ್ಲಿ ಹಾಕಬೇಕು? ಡಿಜಿಟಲ್ ಸಾಕ್ಷ್ಯಗಳನ್ನು (Digital Evidence) ಹೇಗೆ ನಮೂದಿಸಬೇಕು? ಹೀಗೆ ಎಲ್ಲಾ ಅಂಶಗಳಲ್ಲೂ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
Advertisement
ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಖುದ್ದು ಚಾರ್ಜ್‌ಶೀಟ್ ಡ್ರಾಫ್ಟ್ ಕಾಪಿ ಮೇಲೆ ನಿಗಾ ಇಟ್ಟಿದ್ದಾರೆ. ಬಹುತೇಕ ಪ್ರಕರಣದಲ್ಲಿ ಚಾರ್ಜ್‌ಶೀಟ್‌ನಲ್ಲಿರುವ ಲೋಪ ವಿಚಾರವನ್ನು ವಕೀಲರು ಪ್ರಸ್ತಾಪ ಮಾಡಿ ಆರೋಪಿಗಳನ್ನು ಪಾರು ಮಾಡುತ್ತಾರೆ. ಈ ಕಾರಣಕ್ಕೆ ಕಾನೂನು ತಜ್ಞರಿಂದ ಸಲಹೆ ಪಡೆದು ಆರೋಪ ಪಟ್ಟಿ ಸಿದ್ಧಪಡಿಸಲಾಗುತ್ತಿದೆ.
Advertisement