ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy Case) ಕಿಡ್ನಾಪ್ ಹಾಗೂ ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಪೊಲೀಸರ ವಿಚಾರಣೆಯ ವೇಳೆ ಒಬ್ಬೊಬ್ಬ ಆರೋಪಿನೂ ಸತ್ಯ ವಿಚಾರಗಳನ್ನು ಕಕ್ಕುತ್ತಿದ್ದಾರೆ.
ಎ1 ಆರೋಪಿಯಾಗಿರುವ ದರ್ಶನ್ (Darshan) ಗೆಳತಿ ಪವಿತ್ರಾ ಗೌಡ (Pavithra Gowda) ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಕೊಲೆ ಮಾಡುತ್ತಾರೆ ಅಂತ ಗೊತ್ತಿದ್ದರೆ ನಾನೇ ಪೊಲೀಸ್ ಕಂಪ್ಲೆಂಟ್ ಕೊಡುತ್ತಿದ್ದೆ ಎಂದು ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಪವಿತ್ರಾ ಗೌಡ ಹೇಳಿದ್ದೇನು..?: ರೇಣುಕಾಸ್ವಾಮಿಯ ಅಶ್ಲೀಲ ಫೋಟೋ ಮೆಸೇಜ್ ಅನ್ನು ನಾನು ಪವನ್‍ಗೆ ಕಳಿಸಿದ್ದೆ. ದರ್ಶನ್‍ಗೆ ಈ ವಿಚಾರ ಗೊತ್ತಾಗಬಾರದು ಅಂತಾ ಕೂಡ ಹೇಳಿದ್ದೆ. ದರ್ಶನ್‍ಗೆ ಗೊತ್ತಾದ್ರೆ ಏನಾದ್ರು ಅನಾಹುತ ಆಗಬಹುದು ಅಂದಿದ್ದೆ. ಆದರೆ ಅವನು ದರ್ಶನ್‍ಗೆ ಹೇಳಿದ್ದಾನೆ ಎಂದರು.
ಕೊಲೆ ಮಾಡ್ತಾರೆ ಅಂತಾ ಸಣ್ಣ ಕಲ್ಪನೆಯೂ ನನಗೆ ಇರಲಿಲ್ಲ. ಅಶ್ಲೀಲ ಮೆಸೇಜ್ ಮಾಡಿದ್ನಲ್ಲಾ ಅಂತಾ ಚಪ್ಪಲಿಯಲ್ಲಿ ಹೊಡೆದು ವಾಪಸ್ಸಾಗಿದ್ದೆ. ಕೊಲೆ ಮಾಡ್ತಾರೆ ಅಂದ್ರೆ ನಾನೇ ಕಂಪ್ಲೆಂಟ್ ಕೊಟ್ಟು ಸರಿ ಮಾಡಿಕೊಳ್ತಿದ್ದೆ ಎಂದು ಪವಿತ್ರಾ ಪೊಲೀಸರ ಮುಂದೆ ಹೇಳಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಡೀಲ್ ಮಾಡಲಾಗಿದ್ದ 30 ಲಕ್ಷ ಹಣ ಸೀಜ್