ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ದರ್ಶನ್ (Darshan) ವಿರುದ್ಧ ಅತಿ ದೊಡ್ಡ ಸಾಕ್ಷ್ಯ ಬಯಲಾಗಿದೆ. ದರ್ಶನ್, ರೇಣುಕಾಸ್ವಾಮಿ ಹತ್ಯೆಯಾದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳ ಮೇಲೆ ರೇಣುಕಾಸ್ವಾಮಿಯ ರಕ್ತದ ಕಲೆಗಳಿರುವುದು ಸಾಬೀತಾಗಿದೆ.
ಈ ಸಾಕ್ಷ್ಯ ದರ್ಶನ್ ವಿರುದ್ಧದ ಅರೋಪವನ್ನು ಸಾಬೀತುಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ. ಇನ್ನು ದರ್ಶನ್ ಗ್ಯಾಂಗ್‌ನಿಂದ 66ಕ್ಕೂ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿತ್ತು. ಇದನ್ನೂ ಓದಿ: ಮೃತ ಪಿಎಸ್ಐ ಮನೆಗೆ ಗೃಹ ಸಚಿವರ ಭೇಟಿ – ಪತ್ನಿಗೆ ಉದ್ಯೋಗ, 50 ಲಕ್ಷ ಪರಿಹಾರ ಘೋಷಣೆ
ಇದೀಗ ಒಂದೊಂದೆ ವರದಿಗಳು ತನಿಖಾಧಿಕಾರಿಗಳ ಕೈಸೇರುತ್ತಿವೆ. ಈ ಬೆಳವಣಿಗೆ ‘ಡಿ’ ಗ್ಯಾಂಗ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ಆದರೆ ರೇಣುಕಾಸ್ವಾಮಿಯ ಮೊಬೈಲ್ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಜೊತೆಗೆ ಪ್ರಕರಣದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಅಥವಾ ಸ್ಪೆಷಲ್ ಕೋರ್ಟ್ ಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಜೂನ್ 8ರ ಮಧ್ಯಾಹ್ನ ಬೆಂಗಳೂರಿನಲ್ಲಿ ಸ್ವೀಚ್ ಆಫ್ ಆಗಿದ್ದ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ. ಸ್ವಾಮಿ ಕೊಲೆ ಬಳಿಕ ಸುಮನಹಳ್ಳಿ ರಾಜಕಾಲುವೆಗೆ ಮೊಬೈಲ್ ಎಸೆದಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದರು. ಅಶ್ಲೀಲ ಸಂದೇಶ ರವಾನಿಸಿರುವುದೇ ಕೊಲೆಗೆ ಕಾರಣ ಎಂದು ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದರು. ಅದರ ಅನ್ವಯ ಆರೋಪಿಗಳ ಮೊಬೈಲ್ ರಿಟ್ರೀವ್‌ಗೆ ಪೊಲೀಸರು ಕಳುಹಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ವೀಡಿಯೋ ತೋರಿಸಿದ ಡಿಸಿಎಂ ಡಿಕೆಶಿಗೆ ಟಾಂಗ್ ಕೊಟ್ಟ ಹೆಚ್‌ಡಿಕೆ