ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ (Actor Darshan) ಮತ್ತೆ ಸಂಕಷ್ಟ ಎದುರಾಗಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ದರ್ಶನ್ ಗಲಾಟೆ ನಾನಾ ರೂಪ ಪಡೆದುಕೊಳ್ಳುತ್ತಿದೆ. ಇದರ ನಡುವೆ ಮತ್ತೊಂದು ದೂರು ದರ್ಶನ್ ವಿರುದ್ಧ ದಾಖಲಾಗಿದೆ. ದರ್ಶನ್ ವಿರುದ್ಧ ಮಹಿಳೆಯೊಬ್ಬರು ಖಾಸಗಿ ದೂರು ದಾಖಲಿಸಿದ್ದಾರೆ.
Advertisement
ಬೆಂಗಳೂರಿನ 37ನೇ ಎಸಿಎಂಎಂ ಕೋರ್ಟ್‌ನಲ್ಲಿ ರೇಣುಕಮ್ಮ ಎಂಬುವವರು ದರ್ಶನ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ:ಕೆ.ಶಿವರಾಮ್ ಆರೋಗ್ಯದ ಬಗ್ಗೆ ಅಳಿಯ ಪ್ರದೀಪ್ ಪ್ರತಿಕ್ರಿಯೆ
Advertisement
Advertisement
ಇಂದು 37ನೇ ಎಸಿಎಂಎಂ ಕೋರ್ಟ್‌ನಲ್ಲಿ ರೇಣುಕಮ್ಮ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಯಿತು. ರೇಣುಕಮ್ಮ (Renukamma) ಪರ ವಕೀಲ ರಂಗನಾಥ್ ವಾದ ಮಂಡಿಸಿದರು. ಕೋರ್ಟ್ ಕೆಲ ದಾಖಲೆಗಳನ್ನ ಒದಗಿಸುವಂತೆ ಸೂಚಿಸಿ ವಿಚಾರಣೆ ಮಾರ್ಚ್ 1ಕ್ಕೆ ಮುಂದೂಡಿಕೆ ಮಾಡಿದೆ.
Advertisement
ಏನಿದು ಪ್ರಕರಣ?
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಬಗ್ಗೆ ಅಗೌರವವಾಗಿ ದರ್ಶನ್ ಮಾತನಾಡಿದ್ದಾರೆ ಎಂದು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ರೇಣುಕಮ್ಮ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 295(ಎ) (ಮಹಿಳೆಯರಿಗೆ ಅವಮಾನ), 509 (ಮಹಿಳೆಯ ಮಾನಕ್ಕೆ ಅಡ್ಡಿ ಮಾಡುವ ಉದ್ದೇಶದಿಂದ ಬಳಸಿದ ಭಾಷೆ), 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ), 504 (ಶಾಂತಿ ಭಂಗಕ್ಕೆ ಪ್ರಚೋದನೆ) ಅಡಿ ಕೇಸ್ ದಾಖಲಿಸುವಂತೆ ರೇಣುಕಮ್ಮ ಖಾಸಗಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸದ ಕಾರಣ ರೇಣುಕಮ್ಮ ಈಗ ಕೋರ್ಟ್ ಮೊರೆ ಹೋಗಿ ದೂರು ಸ್ವೀಕರಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.