DavanagereDistrictsKarnatakaLatestMain Post

ಚಂದ್ರು ದೇಹದಲ್ಲಿ ಒಳ ಉಡುಪು ಇರಲಿಲ್ಲ – ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ರಾ ಯುವ ನಾಯಕ?

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ (Renukacharya) ಸಹೋದರನ ಪುತ್ರ ಚಂದ್ರು ಸಾವಿನ ಪ್ರಕರಣ (Chandru Case) ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ.

ಚಂದ್ರು ದೇಹದಲ್ಲಿ ಒಳ ಉಡುಪು ಇರಲಿಲ್ಲ - ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ರಾ ಯುವ ನಾಯಕ?

ಇದು ಕೊಲೆಯಲ್ಲ ಎಂಬುದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗುತ್ತಿದೆ. ಸಿಡಿಆರ್ ರಿಪೋರ್ಟ್ ಪ್ರಕಾರ, ಘಟನಾ ಸ್ಥಳದಲ್ಲಿ ಬೇರಾವುದೇ ಮೊಬೈಲ್ ಆಕ್ಟೀವ್ ಆಗಿರೋದು ಕಂಡುಬಂದಿಲ್ಲ. ಚಂದ್ರು ಗೆಳೆಯರು ನೀಡಿದ ಹೇಳಿಕೆಗಳಲ್ಲಿಯೂ ಯಾವುದೇ ಗೊಂದಲ, ಅನುಮಾನಾಸ್ಪದ ಅಂಶಗಳು ಕಂಡುಬಂದಿಲ್ಲ. ಹೀಗಾಗಿ ಸದ್ಯದವರೆಗೂ ಇದನ್ನು ಅಪಘಾತದಿಂದ ಸಾವು ಅಂತಲೇ ಪೊಲೀಸರು ಪರಿಗಣಿಸಿದ್ದಾರೆ. ಇದನ್ನೂ ಓದಿ: ತಾಕತ್ ಇದ್ರೆ ನನ್ನನ್ನು ಮುಟ್ಟಿ, ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆದಿದ್ದು ಸರಿಯಲ್ಲ – ರೇಣುಕಾಚಾರ್ಯ

ಚಂದ್ರು ದೇಹದಲ್ಲಿ ಒಳ ಉಡುಪು ಇರಲಿಲ್ಲ - ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ರಾ ಯುವ ನಾಯಕ?

ಆದರೆ ಚಂದ್ರು ತಂದೆ ಇಂದು ಆಡಿರುವ ಮಾತುಗಳು ಇಡೀ ಪ್ರಕರಣಕ್ಕೆ ಹೊಸ ಆಯಾಮ ನಿಡುವಂತಿವೆ. ಸಲಿಂಗಕಾಮಕ್ಕೆ ಏನಾದ್ರೂ ಚಂದ್ರು ಬಲಿ ಆಗಿರಬಹುದಾ ಎಂಬ ಅನುಮಾನ ಅವರಿಗೆ ಮೂಡಿದೆ. ಚಂದ್ರು ಮೃತಪಟ್ಟ ಸಂದರ್ಭದಲ್ಲಿ ಒಳುಡುಪು ಇರಲಿಲ್ಲ. ಕಿವಿ ಕಚ್ಚಿದ್ದಾರೆ ಎಂದೆಲ್ಲಾ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಾವಿಗೂ ಮುನ್ನ ಕ್ಲಾಸ್‍ಮೇಟ್‍ಗಳ ಭೇಟಿಗೆ ಹಾತೊರೆದಿದ್ದ ಚಂದ್ರಶೇಖರ್!

ಕಿರಣ್ ಮತ್ತು ಗೆಳೆಯರ ಮೇಲೆ ಚಂದ್ರು ತಂದೆಗೆ ಅನುಮಾನ ಇದೆ. ಆದರೆ ರೇಣುಕಾಚಾರ್ಯ ಮಾತ್ರ, ಸಹೋದರನ ಮಾತಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ಕಿರಣ್‍ನನ್ನು ಪೊಲೀಸರು ಸರಿಯಾಗಿ ವಿಚಾರಿಸಿಲ್ಲ. ಪಂಚನಾಮೆ ವೇಳೆ ನಮ್ಮನ್ನು ಕರೆದಿಲ್ಲ ಎಂದು ಪೊಲೀಸರ ಮೇಲೆ ಹರಿಹಾಯ್ದಿದ್ದಾರೆ. ಚಂದ್ರು ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಗೊತ್ತಾಗಲಿದೆ.

Live Tv

Leave a Reply

Your email address will not be published. Required fields are marked *

Back to top button