ಬೆಂಗಳೂರು: ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟ ಬಿಟ್ಟು, ಬ್ರೇಕ್‌ಫಾಸ್ಟ್ ಮೀಟಿಂಗ್ ಬಿಟ್ಟು ರೈತರ ಸಮಸ್ಯೆ ಕೇಳಲಿ. ಮೆಕ್ಕೆಜೋಳ ಖರೀದಿಗೆ ಕೇಂದ್ರ ತೆರೆಯಲಿ ಅಂತ ಮಾಜಿ ಸಚಿವ ರೇಣುಕಾಚಾರ್ಯ (Renukacharya) ಸಿಎಂ, ಡಿಸಿಎಂರನ್ನ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಕಾಂಗ್ರೆಸ್ ಸರ್ಕಾರ ಬಂದಿದೆ. ಈ ಸರ್ಕಾರ ಸತ್ತು ಹೋಗಿದೆ. ರೈತರ ಬೆಳೆ ಹಾನಿ ಆಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ರೈತರ ಜೀವನದ ಜೊತೆಗೆ ಈ ಸರ್ಕಾರ ಚೆಲ್ಲಾಟ ಆಡ್ತಿದೆ. ಮೆಕ್ಕೆಜೋಳಕ್ಕೆ MRP ಕೇಂದ್ರ ಸರ್ಕಾರ ನಿಗದಿ ಮಾಡಿದೆ. ರಾಜ್ಯದಲ್ಲಿ 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆ ಆಗಿದೆ. ಸರ್ಕಾರ KMF ಮತ್ತು ಡಿಸ್ಟ್ರಿಲರಿಗಳು ಖದೀರಿ ಮಾಡಿ ಅಂತ ಹೇಳಿದೆ. ಬಿಜೆಪಿ ಆಗ್ರಹ ಮಾಡುತ್ತದೆ. ಸರ್ಕಾರವೇ 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡಬೇಕು ಅಂತ ಆಗ್ರಹಿಸಿದರು. ಇದನ್ನೂ ಓದಿ: ಶ್ರೀರಂಗಪಟ್ಟಣ | ಜಾಮಿಯಾ ಮಸೀದಿ ಹಿಂದೂಗಳದ್ದು, ಹನುಮ ಮಂದಿರ ಮತ್ತೆ ಕಟ್ಟುವೆವು – ಮಾಲಾಧಾರಿಗಳ ಬಿಗಿಪಟ್ಟು
ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮಾಡಿದ್ದೇ ಸುದ್ದಿ. ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ. ಇದು ಲೋ ಕಮಾಂಡ್. ಇಡ್ಲಿ, ವಡೆ, ಕೋಳಿ ಸಾರು ತಿಂತಿದ್ದೇ ಸುದ್ದಿ. ಬೆಂಗಳೂರಿನ ಕೋಳಿ ಚೆನ್ನಾಗಿ ಇರೊಲ್ಲ. ಏಯ್ ಡಿಕೆ ರಾಮನಗರದಿಂದ ತರಿಸ್ತೀರಾ. ರೈತರಿಗೆ ಖರೀದಿ ಕೇಂದ್ರ ಪ್ರಾರಂಭ ಮಾಡಿ ಅಂದರೆ ಇವರು ವಿಧಾನಸೌಧದ 3ನೇ ಮಹಡಿಗೆ ಖರೀದಿಗೆ ಮಾತಾಡ್ತಾ ಇದ್ದಾರೆ. ನಿಮ್ಮ ಕುರ್ಚಿ ಕದನ ನಿಲ್ಲಿಸಿ. ಸಿಎಂ, ಡಿಸಿಎಂ ನಡುವೆ ಪರಮೇಶ್ವರ ಕುರ್ಚಿಗಾಗಿ ಕಚ್ಚಾಟ ಮಾಡ್ತಿದ್ದಾರೆ. ಸರ್ಕಾರ ಮೆಕ್ಕೆಜೋಳಕ್ಕೆ 600 ರೂ. ಹೆಚ್ಚುವರಿ ಹಣ ಕೊಟ್ಟು ತಕ್ಷಣ ಮೆಕ್ಕೆಜೋಳ ಖರೀದಿ ಸರ್ಕಾರ ಮಾಡಬೇಕು ಅಂತ ಒತ್ತಾಯಿಸಿದರು.
ಸಿದ್ದರಾಮಯ್ಯ ಅವರೇ ಕುರ್ಚಿ ಮೇಲೆ ಇರುವ ವ್ಯಾಮೋಹ ಯಾಕೆ ರೈತರ ಮೇಲೆ ಇಲ್ಲ. ಇಂತಹ ಸರ್ಕಾರಕ್ಕೆ ಜನರು ಪಾಠ ಕಲಿಸ್ತಾರೆ. ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ರಾಜ್ಯಾದ್ಯಂತ ಮಾಡ್ತೀವಿ. ಯಡಿಯೂರಪ್ಪ ಇದ್ದಾಗ ರೈತರ ಪರ ನಿರ್ಧಾರ ಮಾಡಿದ್ರು. ಸರ್ಕಾರ ನೇರವಾಗಿ ಮೆಕ್ಕೆಜೋಳ ರೈತರಿಂದ ಖರೀದಿ ಮಾಡಬೇಕು. ಇಲ್ಲದೇ ಹೋದರೆ ರಾಜ್ಯಕ್ಕೆ ಬೆಂಕಿ ಬೀಳುತ್ತದೆ ಅಂತ ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಇಡ್ಲಿ, ನಾಟಿಕೋಳಿ ತಿಂದಮೇಲೆ ಎಲ್ಲವೂ ಮುಗಿದಿದೆ, ಇನ್ನು ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ: ಇಕ್ಬಾಲ್ ಹುಸೇನ್

