ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್ ಪರಿಹಾರವಾಗಿ 1 ಲಕ್ಷ ರೂ. ಹಣ ನೀಡುತ್ತಿದ್ದಾರೆ. ನಾನು ನಿಮಗೆ 10 ಸಾವಿರ ನೀಡುತ್ತಿದ್ದೇನೆ. ಮುಂದಿನ ಬಾರಿ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕೆಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಹೇಳಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಆಡಿಯೋ ಮತ್ತು ವೀಡಿಯೋ ರೂಪದಲ್ಲಿ ಪ್ರತ್ಯೇಕವಾಗಿ ವೈರಲ್ ಆಗುತ್ತಿದೆ.
ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 1 ಲಕ್ಷ ರೂ. ಹಣವನ್ನು ನೀಡುತ್ತಿದೆ. ಇದನ್ನೂ ಓದಿ: ಬಿಹಾರ್ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ
ಈ ಮಧ್ಯೆ ರೇಣುಕಾಚಾರ್ಯ ಅವರು ಮನೆ ಬಾಗಿಲಿಗೆ ಕೋವಿಡ್ ಸಂತ್ರಸ್ತರನ್ನು ಕರೆಸಿಕೊಂಡು, ಬೊಮ್ಮಾಯಿ ಸರ್ಕಾರ 1 ಲಕ್ಷ ರೂ. ಕೋವಿಡ್ ಪರಿಹಾರ ನೀಡುತ್ತಿದೆ. ನಾನು ನಿಮಗೆ ವೈಯಕ್ತಿಕವಾಗಿ 10 ಸಾವಿರ ರೂ. ಹಣ ನೀಡುತ್ತಿದ್ದೇನೆ. ಹೀಗಾಗಿ ನೀವು ಮುಂದಿನ ಬಾರಿ ನನಗೆ ವೋಟು ಹಾಕಬೇಕು ಎಂದು ಆಣೆ ಪ್ರಮಾಣ ಮಾಡಿಸಿಕೊಂಡು ಜನರಿಗೆ ಹಣ ನೀಡಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ವಿದ್ಯುತ್ ನೀಡದಿದ್ದಕ್ಕೆ ಅಖಿಲೇಶ್ ಯಾದವ್ ಮೊದಲು ಕ್ಷಮೆಯಾಚಿಸಲಿ: ಯೋಗಿ ಆದಿತ್ಯನಾಥ್
ಹಣ ನೀಡುವುದರ ಜೊತೆಗೆ ನಿಮ್ಮ ಊರಿನಲ್ಲಿ ಹೋಗಿ ಎಲ್ಲರಿಗೂ ಹೇಳು ಎಂದು ತಿಳಿಸುವ ಮೂಲಕ ರೇಣುಕಾಚಾರ್ಯ ಅವರು ಹಣದ ಪಾಲಿಟಿಕ್ಸ್ ನಡೆಸಿದ್ದಾರೆ. ಇನ್ನು ಹಣ ಸ್ವೀಕರಿಸಲು ಜನ ಗುಂಪು ಗುಂಪಾಗಿ ರೇಣುಕಾಚಾರ್ಯ ಅವರ ಮನೆಯ ಬಾಗಿಲ ಮುಂದೆ ನೆರೆದಿದ್ದರು.