ನವದೆಹಲಿ: ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಮಹಿಳೆಯರು ಬಟ್ಟೆಯಿಂದ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಬಿಕನಿ ಹಾಕವುದು ಅವರ ಮೂಲಭೂತ ಹಕ್ಕು ಎಂದು ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಕ್ಷಮೆ ಕೇಳಬೇಕು. ಅವರು ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದಾರೆ. ಅವರ ತಾಯಿ ಹೇಳಿ ಕೇಳಿ ಇಟಲಿಯವರು. ಅವರು ಯಾರನ್ನ ಮದುವೆಯಾಗಿದ್ದಾರೆ ಎನ್ನುವುದು ಅವರ ವೈಯಕ್ತಿಕ ವಿಚಾರವಾಗಿದೆ. ಆದರೆ ಮಹಿಳೆಯರು ಹಾಕುವ ಬಟ್ಟೆಯಿಂದ ಕೆಲವರು ಉದ್ರೇಕವಾಗುತ್ತಾರೆ ಎಂದು ತಿಳಿಸಿದರು.
Advertisement
Advertisement
ಹಿಜಾಬ್ ಹಿಂದೆ ಎಸ್‍ಡಿಪಿಐ ಮತ್ತು ಪಿಎಫ್‍ಐ ಕೈವಾಡವಿದೆ. ಕಾಂಗ್ರೆಸ್ ಕೇವಲ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಲ್ಪಸಂಖ್ಯಾತರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಪ್ರತಿಯೊಬ್ಬರು ಭಾರತ ಮಾತೆಯ ಮಕ್ಕಳು, ಒಂದೇ ತಾಯಿಯ ಮಕ್ಕಳಾಗಿದ್ದಾರೆ. ಎಲ್ಲಾ ಅಲ್ಪ ಸಂಖ್ಯಾತರು ಕೆಟ್ಟವರಲ್ಲ. ಇಂತಹವರನ್ನು ಪಾಕಿಸ್ತಾನವು ಬೆಂಬಲಿಸಲ್ಲ. ರಾಜಕಾರಣದಲ್ಲಿ ನಾವು ಕೇಸರಿಕರಣ ಮಾಡುತ್ತೆವೆ. ಶಿಕ್ಷಣದಲ್ಲಿ ಕೇಸರಿಕರಣ ಮಾಡಲ್ಲ ಎಂದ ಅವರು, ಪ್ರಿಯಾಂಕಾ ಗಾಂಧಿ ಕ್ಷಮೆ ಕೋರುವಂತೆ ಒತ್ತಾಯಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ‘ಜೈ ಶ್ರೀರಾಮ್’ ಎಂದ ಹುಡುಗರು – ‘ಅಲ್ಲಾಹು ಅಕ್ಬರ್’ ಎಂದ ವಿದ್ಯಾರ್ಥಿನಿ
Advertisement
Advertisement
ವಿದ್ಯಾರ್ಥಿಗಳು ಮೈತುಂಬಾ ಬಟ್ಟೆ ಹಾಕಿಕೊಳ್ಳಬೇಕು. ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಇದು ಒಳ್ಳೆಯದಲ್ಲ. ಅತ್ಯಾಚಾರ ಹೆಚ್ಚಾಗಲು ಮಹಿಳೆಯರ ಧರಿಸಿನಿಂದ ಪುರುಷರು ಉದ್ವೇಗಕ್ಕೆ ಒಳಗಾಗುವುದೇ ಕಾರಣ. ಮಹಿಳೆಯರು ಬಟ್ಟೆಯಿಂದ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ. ಪ್ರಿಯಾಂಕಾ ಗಾಂಧಿ ಬಿಕಿನಿ ಪದ ಬಳಸಬಾರದಿತ್ತು. ಸಮವಸ್ತ್ರ ವಿಷಯದ ನಡುವೆ ಬಿಕಿನಿ ಪದ ಬಳಕೆ ತಪ್ಪು. ಪ್ರಿಯಾಂಕಾ ಗಾಂಧಿ ಅವರು ಕ್ಷಮೆ ಕೇಳಬೇಕು. ದೇಶದ ಧರ್ಮ, ಸಂಸ್ಕೃತಿ, ಪರಂಪರೆ ಅವರಿಗೆ ಗೊತ್ತಿಲ್ಲ. ಕೇಸರಿ ನಮ್ಮ ಪರಂಪರೆಯಾಗಿದೆ ಎಂದರು. ಇದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ