ದಾವಣಗೆರೆ: ಪದೇ ಪದೇ ಶಿವಮೊಗ್ಗದಲ್ಲಿ ಅಹಿತಕರ ಘಟನೆ ಭಯಭೀತ ವಾತಾವರಣ ಮರುಕಳಿಸಿರುವುದಕ್ಕೆ ಮುಸ್ಲಿಂ ಗೂಂಡಾಗಳು ಕಾರಣವಾಗಿದ್ದು, ಇದಕ್ಕೆ ಕಾಂಗ್ರೆಸ್ (Congress) ಪ್ರಚೋದನೆ ಮಾಡುವುದರಿಂದ ಇಂತಹ ಘಟನೆಗಳಾಗುತ್ತಿವೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ (Renukacharya) ಕಿಡಿಕಾರಿದರು.
ಶಿವಮೊಗ್ಗದಲ್ಲಿ (Shivamogga) ಹರ್ಷನ (Harsha) ಕುಟುಂಬಕ್ಕೆ ಕೊಲೆ ಬೆದರಿಗೆ ಹಾಗೂ ಬೈಕ್‍ನಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಓಡಿರುವ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಪ್ರತಿಕ್ರಿಯಿಸಿದರು. ಕೆಲ ಮುಸ್ಲಿಂ ಗೂಂಡಾಗಳಿಂದ ಈ ರೀತಿ ಘಟನೆಗಳು ನಡೆಯುತ್ತಿದ್ದು, ಎಲ್ಲಾ ಮುಸ್ಲಿಮರು ಕೆಟ್ಟವರಲ್ಲ. ಅದರಲ್ಲಿ ಕೆಲ ಕಿಡಿಗೇಡಿಗಳು ಈ ರೀತಿ ಮಾಡುತ್ತಾರೆ. ಅಲ್ಲದೇ ಶಿವಮೊಗ್ಗದಲ್ಲಿ ಮುಸ್ಲಿಂ ಗೂಂಡಾಗಳು ಬಹಿರಂಗವಾಗಿ ತಲವಾರುಗಳನ್ನು ಹಿಡಿದು ಬೈಕ್ ಮೇಲೆ ಓಡಾಡುತ್ತಿದ್ದಾರೆ. ಇದು ಕಾಂಗ್ರೆಸ್‍ನವರ ಪ್ರಚೋದನೆಯಿಂದ ಈ ಗೂಂಡಾಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ತಿಳಿಸಿದರು.
ಎಸ್ಸಿ-ಎಸ್ಟಿಗಳು ಈಗ ಕಾಂಗ್ರೆಸ್ ಜೊತೆಗಿಲ್ಲ. ಮುಸ್ಲಿಂ ವೋಟ್ ಬ್ಯಾಂಕ್ ಅಷ್ಟೇ ಅವರ ಜೊತೆಗಿದೆ. ಅವರನ್ನು ಓಲೈಕೆ ಮಾಡಲು ಅವರು ಏನು ಮಾಡಿದರು ಬೆಂಬಲಿಸಿಕೊಂಡು ಬಂದಿದ್ದಾರೆ. ಪಿಎಫ್‍ಐ ಸೇರಿದಂತೆ 9 ಸಂಘಟನೆಗಳನ್ನು ಸರ್ಕಾರ ನಿಷೇಧ ಮಾಡಿದೆ. ಇದರಿಂದ ಅವರು ತಲೆಹರಟೆ ಮಾಡುತ್ತಿದ್ದಾರೆ. ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಅವರನ್ನು ಬಗ್ಗು ಬಡಿಯುತ್ತದೆ ಎಂದರು.
ಉಡುಪಿ (Udupi), ಶಿವಮೊಗ್ಗ, ಮಂಗಳೂರಲ್ಲಿ (Mangaluru) ಹಿಂದೂ ಕಾರ್ಯಕರ್ತರು ಭಯಗೊಂಡಿದ್ದಾರೆಂದು ಆ ರೀತಿ ಮಾಡುತ್ತಿದ್ದಾರೆ. ಎಲ್ಲಾ ಮುಸ್ಲಿಮರು ಆ ರೀತಿ ಇಲ್ಲ ಕೆಲ ದೇಶದ್ರೋಹಿ ಮುಸ್ಲಿಮರು ಈ ರೀತಿ ಮಾಡುತ್ತಿದ್ದಾರೆ. ಅವರನ್ನು ನಮ್ಮ ಸರ್ಕಾರ ಮಟ್ಟ ಹಾಕುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.